ಆಚಾರ್ಯ ಚಾಣಕ್ಯ ಅವರು ಭಾರತ ಕಂಡ ಶ್ರೇಷ್ಠ ತಂತ್ರಜ್ಞರು ತತ್ವಜ್ಞಾನಿಗಳು ಅರ್ಥಶಾಸ್ತ್ರಜ್ಞರು ಮತ್ತು ಶಿಕ್ಷಕರಲ್ಲಿ ಒಬ್ಬರು ಕೌಟಿಲ್ಯ ಪ್ರತಿಯೊಬ್ಬರಿಗೆ ಅನ್ವಯ ಆಗುವ ಜೀವನದ ಮೌಲ್ಯಗಳನ್ನು ನೀತಿಗಳನ್ನು ಎಲ್ಲರಿಗೂ ಅನ್ವಯ ಆಗುವ ಹಾಗೆ ತಿಳಿಸಿದ್ದಾರೆ ವ್ಯಕ್ತಿ ಆದವನು ಯಾವ ಯಾವ ಅಂಶಗಳನ್ನು ಗಮನಿಸಬೇಕು ಹಾಗೆಯೇ ಒಂದು ಒಳ್ಳೆಯ ಹೆಂಡತಿ ಹೇಗೆ ಇರಬೇಕು ಎಂಬುದನ್ನು ಕೌಟಿಲ್ಯ ತಿಳಿಸಿದ್ದಾನೆ ಪ್ರತಿಯೊಬ್ಬ ವ್ಯಕ್ತಿ ತನ್ನ ಕುಟುಂಬದೊಂದಿಗೆ ಹೇಗೆ ಇರಬೇಕು ಹಾಗೆಯೇ ಪ್ರೀತಿ ಮತ್ತು ಬಾಂಧವ್ಯದ ನಡುವಿನ ಅಂತರವನ್ನು ಕೌಟಿಲ್ಯ ಜನರಿಗೆ ತಿಳಿಸಿದ್ದಾನೆ
ನಾವು ಕೆಲವು ಕೆಲಸವನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಅದನ್ನು ಏಕೆ ಮಾಡುತ್ತಿದ್ದೇನೆ ಫಲಿತಾಂಶಗಳು ಏನಾಗಬಹುದು ಮತ್ತು ನಾನು ಯಶಸ್ವಿಯಾಗುತ್ತೇನೆ ಎಂದು ಆಳವಾಗಿ ಯೋಚಿಸಿದಾಗ ಮತ್ತು ಈ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಕಂಡುಕೊಂಡಾಗ ಮಾತ್ರ ಮುಂದುವರಿಯಿರಿ ಎಂದು ಕೌಟಿಲ್ಯ ತಿಳಿಸಿದ್ದಾನೆ ನಾವು ಈ ಲೇಖನದ ಮೂಲಕ ಕೌಟಿಲ್ಯನ ಕೆಲವು ನೀತಿ ಮರ್ಗಗಳಾದ ಹೆಂಡತಿ ಹೇಗೆ ಇರಬೇಕು ನಾವು ಗಮನಿಸಬೇಕಾದ ಮೂರು ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.
ಈ ಭೂಮಿಯ ಮೇಲೆ ಮೂರು ರತ್ನಗಳು ಇರುತ್ತದೆ ಅದು ಆಹಾರ ನೀರು ಮತ್ತು ಆಹ್ಲಾದಕರ ಪದಗಳೆಂದರೆ ಮುಖರು ಕಲ್ಲುಗಳ ತುಂಡಗಳನ್ನು ರತ್ನಗಳೆಂದು ಪರಿಗಣಿಸುತ್ತಾರೆ ಹಾಗೆಯೇ ನಾವು ಸಂತೋಷದಿಂದ ಇರುವುದು ಶತ್ರುಗಳಿಗೆ ಕೊಡುವ ಅತಿ ದೊಡ್ಡ ಶಿಕ್ಷೆಯಾಗಿದೆ ಎಂದು ಕೌಟಿಲ್ಯ ತಿಳಿಸಿದ್ದಾರೆ ವಿಷ ಎಂದರೆ ನಮ್ಮ ಅವಶ್ಯಕತೆಗಿಂತ ಎನು ಹೆಚ್ಚಾದರೂ ಅದು ವಿಷ ಅದು ಅಧಿಕಾರವಾಗಲಿ ಐಶ್ವರ್ಯ ಆದರೂ ಸಹ ವಿಷ ಆಗಿರುತ್ತದೆ ಅದರಂತೆಯೇ ಹಸಿವು ದುರಾಸೆ ಸೋಮಾರಿತನ ಹಾಗೆಯೇ ಪ್ರೇಮ ಆಕಾಂಕ್ಷೆ ದ್ವೇಷ ಅಥವಾ ಯಾವುದಾದರೂ ಸರಿ ಮತ್ತೊಬ್ಬರ ಸಹಾಯ ಪಡೆದು ಎದ್ದೇಳುವರೆಗೆ ಯಾವ ಸಂಬಂಧದಲ್ಲಿ ಬೀಳಬಾರದು.
ತನ್ನ ಕುಟುಂಬದ ಸದಸ್ಯರೊಂದಿಗೆ ಅತಿಯಾಗಿ ಲಗತ್ತಿಸಿರುವನು ಭಯ ಮತ್ತು ದುಃಖವನ್ನು ಅನುಭವಿಸುತ್ತಾನೆ ಈ ದುಃಖದ ಕಾರಣವೆಂದರೆ ಬಾಂಧವ್ಯವಾಗಿದೆ ಒಬ್ಬನು ಸಂತೋಷವಾಗಿ ಇರಲು ಬಾಂಧವ್ಯವನ್ನು ತೊರೆಯಬೇಕು ತನ್ನ ಗುರಿಗಳನ್ನು ನಿರ್ಧರಿಸಲು ಆಗದೆ ಇರುವನು ಗೆಲ್ಲಲು ಸಾಧ್ಯವಿಲ್ಲ
ಒಮ್ಮೆ ಏನನ್ನಾದರೂ ಸಾಧಿಸಲು ಹೊರಟರೆ ಸೋಲಿನ ಭಯ ಪಡಬಾರದು ಮತ್ತು ಅದನ್ನು ತ್ಯಜಿಸಬಾರದು ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರು ಹೆಚ್ಚು ಸಂತೋಷವಾಗಿ ಇರುತ್ತಾರೆ ಎಂದು ಕೌಟಿಲ್ಯ ತಿಳಿಸಿದ್ದಾನೆ.
ಬಾಂಧವ್ಯ ಹಾಗೂ ಪ್ರೀತಿ ಒಂದೇ ಎಂಬ ಕಲ್ಪನೆಯನ್ನು ಬಿಡಬೇಕು ಬಾಂಧವ್ಯ ಹಾಗೂ ಪ್ರೀತಿ ಇವೆರಡೂ ಶತ್ರುಗಳು ಬಾಂಧವ್ಯವೆ ಎಲ್ಲ ಪ್ರೀತಿಯನ್ನು ನಾಶಪಡಿಸುತ್ತದೆ ಶತ್ರುವಿನ ದೌರ್ಬಲ್ಯವನ್ನು ತಿಳಿಯುವವರೆಗೆ ಅವನನ್ನು ಸ್ನೇಹಪರವಾಗಿ ಇಡಬೇಕು ಅನ್ಯಾಯದಿಂದ ಪಡೆದ ಸಂಪತ್ತು ಖಂಡಿತವಾಗಿ ನಾಶ ವಾಗುತ್ತದೆ ಹಾಗೆಯೇ ಒಳ್ಳೆಯ ಹೆಂಡತಿ ಎಂದರೆ ತಾಯಿಯಂತೆ ಬೆಳಿಗ್ಗೆ ಪತಿಗೆ ಸೇವೆ ಸಲ್ಲಿಸುತ್ತಾಳೆ ಸಹೋದರಿಯಂತೆ ಹಗಲಿನಲ್ಲಿ ಅವನನ್ನು ಪ್ರೀತಿಸುತ್ತಾಳೆ ಹಾಗೆಯೇ ರಾತ್ರಿಯಲ್ಲಿ ಅವನನ್ನು ಸಂತೋಷ ಪಡಿಸುತ್ತಾಳೆ ಹಾಗೆಯೇ ಮುಳ್ಳುಗಳು ಹಾಗೂ ದುಷ್ಟ ಜನರನ್ನು ಎದುರಿಸಲು ಎರಡು ಮಾರ್ಗಗಳು ಇರುತ್ತದೆ ಒಂದು ಅವರನ್ನು ತುಳಿಯುವುದು ಮತ್ತು ಇನ್ನೊಂದು ಅವರಿಂದ ದೂರ ಇರಬೇಕು .
ಸಂಪತ್ತನ್ನು ಯೋಗ್ಯರಿಗೆ ಮಾತ್ರ ನೀಡಬೇಕು ಹಾಗೆಯೇ ಇತರರಿಗೆ ಎಂದಿಗೂ ಕೊಡಬಾರದು ಮೋಡಗಳಿಂದ ಸ್ವೀಕರಿಸಲ್ಪಟ್ಟ ಸಮುದ್ರದ ನೀರು ಯಾವಾಗಲೂ ಸಿಹಿಯಾಗಿ ಇರುತ್ತದೆ ಹಾಗೆಯೇ ಪಾದದ ಮೇಲೆ ರತ್ನವನ್ನು ಮತ್ತು ತಲೆಯ ಮೇಲೆ ಕನ್ನಡಿಯನ್ನು ಇರಿಸಿದರು ರತ್ನವು ತನ್ನ ಮೌಲ್ಯವನ್ನು ಕಳೆದುಕೊಳ್ಳುವುದು ಇಲ್ಲ ಭವಿಷ್ಯದ ತೊಂದರೆಗಳ ಬಗ್ಗೆ ತಿಳಿದಿರುವ ಮತ್ತು ಅದನ್ನು ಬುದ್ದಿವಂತಿಕೆಯಿಂದ ಅದರ ವಿರುದ್ದ ಹೊರಾಡುವ ವ್ಯಕ್ತಿಯು ಯಾವಾಗಲೂ ಸಂತೋಷವಾಗಿ ಇರುತ್ತಾನೆ ಹಾಗೆಯೇ ಒಳ್ಳೆಯ ದಿನಗಳು ಬರುತ್ತದೆ ಎಂದು ಕಾಯುತ್ತಿರುವ ವ್ಯಕ್ತಿ ಕೆಲಸ ಮಾಡದೆ ಇರುವ ವ್ಯಕ್ತಿಯು ತನ್ನ ಜೀವನವನ್ನು ನಾಶ ಪಡಿಸಿಕೊಳ್ಳುತ್ತಾರೆ ಹೀಗೆ ಕೌಟಿಲ್ಯ ನೀತಿ ಮಾರ್ಗಗಳನ್ನು ಹೇಳುವ ಮೂಲಕ ಜನರಿಗೆ ಒಳ್ಳೆಯ ಕಿವಿ ಮಾತನ್ನು ತಿಳಿಸಿದ್ದಾರೆ.