‘ರಾಜ್ ಕುಮಾರ್ ಮಗ ವಿನೋದ್ ರಾಜ್’ ವದಂತಿ ಹಬ್ಬಲು ದ್ವಾರಕೀಶ್ ಕಾರಣ: ಶಾಕಿಂಗ್ ವಿಚಾರ ಬಿಚ್ಚಿಟ್ಟ ಪ್ರಕಾಶ್ ರಾಜ್

CINEMA/ಸಿನಿಮಾ

ಸ್ಯಾಂಡಲ್‌ವುಡ್ ಹಿರಿಯ ನಟಿ ಲೀಲಾವತಿ ಮತ್ತು ಡಾ.ರಾಜ್ ಕುಮಾರ್ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಡಾ.ರಾಜ್ ಕುಮಾರ್ ಅವರ ಪುತ್ರ ವಿನೋದ್ ರಾಜ್ ಎನ್ನುವ ವದಂತಿ ಅನೇಕ ಸಮಯದಿಂದ ಕೇಳಿಬರುತ್ತಲೇ ಇದೆ. ಆದರೀಗ ಮತ್ತೆ ಸದ್ದು ಮಾಡಲು ಕಾರಣ ನಿರ್ದೇಶಕ ಪ್ರಕಾಶ್ ರಾಜ್ ಮೆಹು ಅವರ ಪೋಸ್ಟ್. ಪ್ರಕಾಶ್ ರಾಜ್ ಇತ್ತೀಚಿಗಷ್ಟೆ ಲೀಲಾವತಿ ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧ ಪಟ್ಟಹಾಗೆ ಒಂದಿಷ್ಟು ಶಾಕಿಂಗ್ ವಿಚಾರಗಳನ್ನು ದಾಖಲೆ ಸಮೇತಾ ಬಹಿರಂಗ ಪಡಿಸಿದ್ದರು.

ಲೀಲಾವತಿ ಅವರ ಪತಿ ಮಹಾಲಿಂಗ ಭಾಗವತರ್, ಪುತ್ರನಿಗೆ ಮದುವೆಯಾಗಿ ಮಗನಿದ್ದಾನೆ ಎನ್ನುವ ಸತ್ಯ ಬಿಚ್ಚಿಟ್ಟಿದ್ದರು. ಪ್ರಕಾಶ್ ರಾಜ್ ಪೋಸ್ಟ್ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪ್ರಕಾಶ್ ರಾಜ್, ವಿನೋದ್ ರಾಜ್ ಡಾ.ರಾಜ್ ಕುಮಾರ್ ಪುತ್ರನಲ್ಲ, ಡಾ.ರಾಜ್ ಕುಮಾರ್ ಪುತ್ರ ಎನ್ನುವ ಸುದ್ದಿ ಹಬ್ಬಲು ದ್ವಾರಕೀಶ್ ಕಾರಣ ಎನ್ನುವ ಮತ್ತೊಂದು ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಪ್ರಕಾಶ್ ರಾಜ್ ಪೋಸ್ಟ್ ಮಾಡಿದ ಬಳಿಕ ಲೀಲಾವತಿ ಅವರು ಮಗನಿಗೆ ಮದುವೆಯಾಗಿದೆ ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಲೀಲಾವತಿ ಸತ್ಯ ಒಪ್ಪಿಕೊಂಡ ಬೆನ್ನಲ್ಲೇ ಪ್ರಕಾಶ್ ರಾಜ್ ಮತ್ತೊಂದು ಪೋಸ್ಟ್ ಶೇರ್ ಮಾಡಿ ಆ ಇನ್ನೊಂದು ಸತ್ಯವನ್ನು ಒಪ್ಪಿಕೊಂಡು ನೇರವಾಗಿ ಸ್ವರ್ಗಕ್ಕೆ ಹೋಗಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪ್ರಕಾಶ್ ರಾಜ್ ಮೆಹು ರಾಜ್ ಕುಮಾರ್ ಪುತ್ರ ವಿನೋದ್ ರಾಜ್ ಎನ್ನುವ ಸುದ್ದಿ ಹಬ್ಬಲು ಕಾರಣ ದ್ವಾರಕೀಶ್, ಡಾನ್ಸ್ ರಾಜ್ ಡಾನ್ಸ್ ಪತ್ರಿಕಾಗೋಷ್ಠಿಯಲ್ಲಿ ದ್ವಾರಕೀಶ್ ನೀಡಿದ ಹೇಳಿಕೆಯೇ ಕಾರಣ ಎಂದು ಹೇಳಿದ್ದಾರೆ.

‘ಕನ್ನಡ ಪಿಕ್ಚರ್’ ಯೂಟ್ಯೂಬ್ ವಾಹಿನಿ ಜೊತೆ ಮಾತನಾಡಿರುವ ಪ್ರಕಾಶ್ ರಾಜ್, ದ್ವಾರಕೀಶ್ ವಿಚಾರ ಬಿಚ್ಚಿಟ್ಟಿದ್ದಾರೆ. “ಸಿಪಾಯಿ ರಾಮು ಮತ್ತು ಭಕ್ತ ಕುಂಬಾರ ಸಿನಿಮಾ ಸೆಟ್‌ಗೆ ಮಹಾಲಿಂಗ ಭಾಗವತರ್ ವಿನೋದ್ ರಾಜ್ ಅವರನ್ನು ತನ್ನ ಮಗ ಎಂದು ಕರ್ಕೊಂಡು ಬರುತ್ತಿದ್ದರು. ಆ ಕಾಲದಲ್ಲಿ ಎಲ್ಲರಿಗೂ ಗೊತ್ತಿತ್ತು. ಮಹಾಲಿಂಗ ಭಾಗವತರ್ ಮತ್ತು ಲೀಲಾವತಿ ಮಗ ಎನ್ನುವುದು. ಆಗ ಯಾರು ಪ್ರಶ್ನೆ ಮಾಡುತ್ತಿರಲಿಲ್ಲ” ಎಂದಿದ್ದಾರೆ.

“ಯಾವಾಗ ರಾಜ್ ಕುಮಾರ್ ಮಗ ಎನ್ನುವ ಕಥೆ ಹಬ್ಬಿತು ಎಂದರೆ ದ್ವಾರಕೀಶ್ ಅವರು ಅಣ್ಣಾವ್ರ ಜೊತೆ ಮೇಯರ್ ಮುತ್ತಣ್ಣ ಮತ್ತು ಭಾಗ್ಯವಂತರು ಸಿನಿಮಾ ಮಾಡಿದರು. ನಂತರ ದ್ವಾರಕೀಶ್ ಗೆ ಡೇಟ್ ಕೊಟ್ಟಿಲ್ಲ, ಕಾರಣ ಯಾಕೆ ಅಂತ ಗೊತ್ತಿಲ್ಲ. ಆಗ ಶಿವರಾಜ್ ಕುಮಾರ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅವರ ಸಿನಿಮಾಗಳು ಸೂಪರ್ ಹಿಟ್ ಆಗುತ್ತೆ. ಅವರ ಡೇಟ್‌ಗಾಗಿ ದ್ವಾರಕೀಶ್ ಪ್ರಯತ್ನ ಪಟ್ಟರು. ಅವರ ಡೇಟ್ ಕೂಡ ಸಿಗಲ್ಲ. ಆಗ ದ್ವಾರಕೀಶ್ ನೇರವಾಗಿ ಲೀಲಾವತಿ ಮನೆಗೆ ಹೋಗಿ ಮಗನನ್ನು ಹೀರೋ ಮಾಡ್ತೀನಿ ಎಂದು ಅವರಿಗೆ ಸಿನಿಮಾ ಮಾಡಿದರು” ವಿನೋದ್ ರಾಜ್ ಸಿನಿಮಾ ಎಂಟ್ರಿ ಬಗ್ಗೆ ಹೇಳಿದರು.

“ಡಾನ್ಸ್ ರಾಜ ಡಾನ್ಸ್ ಸಿನಿಮಾ ಸಮಯದಲ್ಲಿ ವಿನೋದ್ ಅವರನ್ನು ರಾಜ್ ಮಾಡಿದರು. ಅದೇನು ಹೊಸದಲ್ಲ, ಆಗ ಅನೇಕರ ರಾಜ್ ಗಳಿದ್ದರು. ಪ್ರೆಸ್ ಮೀಟ್ ನಲ್ಲಿ ದ್ವಾರಕೀಶ್, ವಿನೋದ್ ರಾಜ್ ಅವರ ಹುಟ್ಟಿನ ಗುಟ್ಟೊಂದಿದೆ, ಸಿನಿಮಾ ರಿಲೀಸ್ ಆದಮೇಲೆ ರಿವೀಲ್ ಮಾಡ್ತೀನಿ ಅಂತ ಹುಳ ಬಿಟ್ಟರು. ಅದು ಏನು ಹೇಳದೆ ಎಲ್ಲಾ ಹೇಳಿದ ವಿಷಯವಾಗಿತ್ತು. ಪರೋಕ್ಷವಾಗಿ ರಾಜ್ ಕುಮಾರ್ ಮಗ ಎನ್ನುವ ವದಂತಿ ಹುಟ್ಟಿಹಾಕಿದ್ರು. ಇದು ಕೇವಲ ಊಹಾಪೋಹಗಳಾಗಿಯೇ ಇತ್ತು. ವಿನೋದ್ ರಾಜ್ ಅವರ ಮಗನೇ, ನನ್ನ ಮಗನಿಗೆ ಮೋಸ ಮಾಡಿದ್ರು ಎಂದು ಲೀಲಾವತಿ ಪುಸ್ತಕ ಸಹ ಬರೆಸಿದ್ರು. ಹಾಗಾಗಿ ನಾನು ಇದೆಲ್ಲ ಸುಳ್ಳು ಅಂತ ಸಾಬೀತು ಮಾಡಿದ್ದು” ಎಂದು ಪ್ರಕಾಶ್ ರಾಜ್ ಮೆಹು ಬಹಿರಂಗ ಪಡಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...