vanshika

ಮಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ! ಮಾಸ್ಟರ್ ಆನಂದ್ ವಂಶಿಕಾಳ ಬಗ್ಗೆ ಹೀಗೆ ಹೇಳಿದ್ದೇಕೆ

CINEMA/ಸಿನಿಮಾ Entertainment/ಮನರಂಜನೆ

ಮಾಸ್ಟರ್ ಆನಂದ್ ಅವರ ಮಗಳು ವಂಶಿಕ ಇಂದು ಕನ್ನಡಿಗರ ಮನೆ ಮಾತಾಗಿದ್ದಾಳೆ. ಮಾಸ್ಟರ್ ಆನಂದ್ ಅವರು ಬಾಲ ನಟರಾಗಿ ಸಿನಿಮಾದಲ್ಲಿ ನಟಿಸುತ್ತಾ ಇದ್ದರೆ ಅವರ ಅಭಿನಯವನ್ನು ನೋಡೋದಕ್ಕೆ ಎಲ್ಲರೂ ಇಷ್ಟಪಡುತ್ತಿದ್ದರು. ಅವರ ಚುರುಕಾದ ಮಾತು ನಡೆ-ನುಡಿ ಎಲ್ಲರಿಗೂ ಇಷ್ಟವಾಗುತ್ತಿತ್ತು. ಈಗ ಅವರ ಮಗಳು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಅಪ್ಪನಂತೆ ಮಗಳು ಕೂಡ ಈಗಾಗಲೇ ಸಿನಿಮಾ ರಂಗವನ್ನು ಪ್ರವೇಶಿಸಿದ್ದಾಳೆ.

ಹೌದು ಮಾಸ್ಟರ್ ಆನಂದ್ ಹಾಗೂ ತೇಜಸ್ವಿನಿ ಅವರ ಮಗಳು ವಂಶಿಕ ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ತೋರಿಸಿದಳು. ತೇಜಸ್ವಿನಿ ಹಾಗೂ ವಂಶಿಕ ಇಬ್ಬರು ನಮ್ಮಮ್ಮ ಸೂಪರ್ ಸ್ಟಾರ್ ಕಿರೀಟವನ್ನು ಮೂಡಿಗೆರೆಸಿಕೊಂಡ ಮೇಲೆ ವಂಶಿಕಾಳ ಬೇಡಿಕೆ ಹೆಚ್ಚಾಯ್ತು. ಆಕೆಗೂ ನಟನೆಯಲ್ಲಿ ಸಾಕಷ್ಟು ಆಸಕ್ತಿ ಇದೆ ಹಾಗಾಗಿ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ವಂಶಿಕ ಅವಳನ್ನು ನೋಡುವಂತಾಗಿದೆ.

ಇತ್ತೀಚಿಗೆ ವಂಶಿಕ ಗಿಚ್ಚಿ ಗಿಲಿ ಗಿಲಿ ಎನ್ನುವ ವೇದಿಕೆಯನ್ನು ಆವರಿಸಿಕೊಂಡು ಬಿಟ್ಟಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಒಂದು ಕಾಮಿಡಿ ಶೋ ಆಗಿದೆ. ಇದರಲ್ಲಿ ಹಲವಾರು ಕಲಾವಿದರು ಕಾಮಿಡಿಯ ಸ್ಕಿಟ್ ಗಳನ್ನ ಮಾಡಿ ತಮ್ಮ ಪ್ರತಿಭೆಯನ್ನು ಹೊರ ಹಾಕುತ್ತಾರೆ. ಅವರಲ್ಲಿ ವಂಶಿಕ ಕೂಡ ಒಬ್ಬರು. ಈ ಮೊದಲು ವಂಶಿಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಆರಂಭಿಸಿದ ಮೇಲೆ ಚಾನೆಲ್ ನ ಕಾರ್ಯಕ್ರಮದ ಟಿ ಆರ್ ಪಿ ಯು ಕೂಡ ಹೆಚ್ಚಾಗಿತ್ತು.

ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; 'ಪುಷ್ಪ ಪಾರ್ಟ್​ 10'ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್ - Vanshika Ananda Nannamma Super Star Contestant super dance Like Rashmika ...

ಆದರೆ ಇತ್ತೀಚಿಗೆ ವಂಶಿಕ ಅವಳ ಬಾಯಲ್ಲಿಯೂ ಕೂಡ ಡಬಲ್ ಮೀನಿಂಗ್ ಡೈಲಾಗ್ ಹೇಳಿಸುತ್ತಾರೆ ಎಂಬ ಕಾರಣಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮಾಸ್ಟರ್ ಆನಂದ್ ಹಾಗೂ ತೇಜಸ್ವಿನಿ ಅವರ ಬಳಿ ನೀವು ಮಗಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳಿ, ಅವಳು ಗಳಿಸಿದ ಹಣದಲ್ಲಿ ನೀವು ಜೀವನ ಮಾಡುತ್ತೀರಾ ಎಂಬಿತ್ಯಾದಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ಮಾಸ್ಟರ್ ಆನಂದ್ ಹಾಗೂ ತೇಜಸ್ವಿನಿ ಅವರು ಕೂಡ ಸರಿಯಾದ ಉತ್ತರವನ್ನು ನೀಡಿದ್ದಾರೆ.

ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಮಾಸ್ಟರ್ ಆನಂದ್ ತಮ್ಮ ಮಗಳ ಬಗ್ಗೆ ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಸಾಕಷ್ಟು ಜನ ಅವಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳಿ ಅಂತ ಹೇಳುತ್ತಾರೆ ಅವಳು ಇನ್ನೂ ಚಿಕ್ಕವಳು. ವಂಶಿಕ ಐಎಎಸ್ ಓದುತ್ತಿಲ್ಲ. ನನಗೆ ಗೊತ್ತಿರುವ ಪ್ರಕಾರ ಸುಮಾರು 10ನೇ ತರಗತಿಯವರೆಗೂ ಮಕ್ಕಳು ವಿಶೇಷವಾದದ್ದು ಏನು ಕಲಿಯುವುದಿಲ್ಲ. ಮನೆಯಲ್ಲಿ ಕೇವಲ ಮುದ್ದು ಮಾಡ್ತಾರೆ ಅನ್ನೋ ಕಾರಣಕ್ಕೆ ಶಾಲೆಗೆ ಕಳುಹಿಸಲಾಗುತ್ತಿದೆ ಅಲ್ಲಿ ಸಾಮಾಜಿಕವಾಗಿ ಬೆರೆಯುವುದು ಇತರರೊಂದಿಗೆ ವಿಷಯವನ್ನು ಶೇರ್ ಮಾಡುವುದು ಇವುಗಳನ್ನು ಕಲಿಯುತ್ತಾರೆ.

Exclusive: "Now people recognise me more as Yashawini than Master Anand's wife," says the Nannamma Superstar winner mom | The Times of India

ಹಾಗಾಗಿ ಈ ವಯಸ್ಸಿನಲ್ಲಿ ಅವಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವಳಿಗೆ ನಟನೆಯಲ್ಲಿ ಆಸಕ್ತಿ ಇದೆ ಹಾಗಾಗಿ ನಾವು ಅವಳ ಇಚ್ಛೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ ಅಷ್ಟೇ ಅಂತ ಮಾಸ್ಟರ್ ಆನಂದ್ ಹೇಳಿದ್ದಾರೆ.ಪುಟಾಣಿ ವಂಶಿಕ ತಮ್ಮ ಪ್ರತಿಮೆಯಿಂದಾಗಿ ಈಗಾಗಲೇ ಸಿನಿಮಾದಲ್ಲಿಯೂ ಕೂಡ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ತಂದೆಯಂತೆ ವಂಶಿಕ ಕೂಡ ಬಾಲನಟಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಮಾಡೋದ್ರಲ್ಲಿ ಸಂಶಯವಿಲ್ಲ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.