ನಟಿ ವೈಷ್ಣವಿ ಗೌಡ ಅಂದರೆ ಗೊತ್ತಿಲ್ಲದೆ ಇರಲು ಸಾಧ್ಯವೇ ಇಲ್ಲ. ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಧಾರವಾಹಿ ಯಲ್ಲಿ ಸನ್ನಿಧಿ ಪಾತ್ರ ಮಾಡುವ ಮೂಲಕ ಮನೆ ಮಗಳಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಿಂಪಲ್ ಗೆನ್ನೆಯ ಮುದ್ದು ನಗುವಿನ ಸನ್ನಿಧಿ ಪಾತ್ರ ಅಂದರೆ ಎಲ್ಲರಿಗೂ ಇಷ್ಟ ಆಗಿತ್ತು.ಅದರಲ್ಲೂ ಅದೇ ರೀತಿ ಡಿಂಪಲ್ ಗೆನ್ನೆಯ ಸಿದ್ಧಾರ್ಥ್ ಹಾಗೂ ಸನ್ನಿಧಿ ಜೋಡಿಯೂ ಭಾರೀ ಹಿಟ್ ಆಗಿತ್ತು. ಇಬ್ಬರೂ ಒಳ್ಳೆ ಜೋಡಿ ಅಂತಲೇ ಕರೆಸಿಕೊಂಡಿದ್ದರು.ಆ ಧಾರವಾಹಿಯಲ್ಲಿ ಒಂದು ಸೊಸೆಯಾಗಿ ಮಗಳಾಗಿ ಹೆಂಡತಿಯಾಗಿ ಕೇವಲ ಗಂಭೀರವಾಗಿ ಅಷ್ಟೇ ಜನರಿಗೆ ಗೊತ್ತಿತ್ತು.ಆದರೆ ರಿಯಲ್ ಲೈಫ್ ನಲ್ಲಿ ವೈಷ್ಣವಿ ಹೇಗೆ ಅನ್ನುವುದು ಗೊತ್ತಾಗಿದ್ದೇ ಬಿಗ್ ಬಾಸ್ ನಿಂದ.
ಹೌದು, ಬಿಗ್ ಬಾಸ್ ಸೀಸನ್ 8 ಕ್ಕೆ ವೈಷ್ಣವಿ ಗೌಡ ಅವರು ಸ್ಪರ್ಧಿಯಾಗಿ ಕಾಲಿಟ್ಟಿದ್ದರು. ಮೊದ ನೊದಲು ನೂರರಲ್ಲಿ ಒಬ್ಬರಂತೆ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ ಮೂರನೇ ವಾರದ ನಂತರ ತನ್ನ ನಿಜ ಸ್ವರೂಪವನ್ನು ತೋರಿಸಿದ್ದರು. ಟಾಸ್ಕ್ ನಲ್ಲಿಯೂ ತಾನು ಸ್ಟ್ರಾಂಗ್, ಕೀಟಲೆ ಮಾಡುವುದರಲ್ಲೂ ಮುಂದು, ತಲೆ ತಿನ್ನುವುದರಲ್ಲೂ ಎತ್ತಿದ ಕೈ, ಜೋಕ್ ನಲ್ಲಿಯೂ ಕಮ್ಮಿ ಇಲ್ಲ, ಒಬ್ಬರ ಕಾಲೆಳೆಯುವುದರಲ್ಲೂ ತಾ ಮುಂದು ಎಂದು ತೋರಿಸಿಕೊಟ್ಟಿದ್ದರು.
ಮಂಜು ಪಾವಗಡ ಜೊತೆಗಿನ ಅವರ ಕೀಟಲೆ ವೀಕ್ಷಕರಿಗೆ ಭಾರೀ ಇಷ್ಟ ವಾಗಿತ್ತು.ಯಾರ ಜೊತೆಯೂ ಅನ್ಯತಾ ಕಿರಿಕ್ ಮಾಡದೆ, ಧ್ಯಾನ, ಯೋಗ ಮಾಡುತ್ತಾ ಎಲ್ಲರ ಜೊತೆ ಖುಷಿ ಖುಷಿ ಇಂದ ವ್ಯವಹರಿಸುತ್ತಿದ್ದ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯ ಸ್ಟೈಲಿಷ್ ಐಕಾನ್ ಆಗಿದ್ದರು. ಅವರಿಗೆ ಅಪಾರ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಕೊನೆಯ ನಾಲ್ಕನೇ ಸ್ಪರ್ಧಿಯಾಗಿ ಹೊರ ಬಂದ ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ತನ್ನ ಡ್ಯಾನ್ಸ್ ಮೂಲಕ ಅಭಿಮಾನಿಗಳ ಮನಸ್ಸನ್ನು ಬರಸೆಳೆದಿದ್ದಾರೆ.
ಇದೀಗ ಹೋಳಿ ಹಬ್ಬದ ಹಿನ್ನೆಲೆ ಖ್ಯಾತ ಕೊರಿಯೋಗ್ರಾಫರ್ ಆದ ತಾರಕ್ ಕ್ಸೇವಿಯರ್ ಜೊತೆ ಡ್ಯಾನ್ಸ್ ರಿಹರ್ಸಲ್ ಮಾಡುತ್ತಾ ಫನ್ನಿ ಫನ್ಬಿಯಾಗಿ ಆಡಿರುವ ವೈಷ್ಣವಿ ಗೌಡ ಅವರ ವಿಡಿಯೋ ಒಂದು ಯೂ ಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.ಇಬ್ಬರೂ ಕೀಟಲೆ ಮಾಡುತ್ತಾ ಕೊನೆಗೆ ಕಿರಿಕ್ ಪಾರ್ಟಿ ಸಿನಿಮಾದ ಹೇ ಹೂ ಆರ್ ಯೂ ಹಾಡಿಗೆ ಸಖತ್ ಆಗಿರುವ ಕೆಂಬಣ್ಣದ ಅಟೈರ್ ಹಾಕಿಕೊಂಡ ವೈಷ್ಣವಿ ಅವರು ತಾರಕ್ ಜೊತೆ ಸೂಪರ್ ಆಗಿ ಸ್ಟೆಪ್ ಹಾಕಿದ್ದಾರೆ. ಈಗಾಗಲೇ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.ವೈಷ್ಣವಿ ಗೌಡ ಅವರ ಈ ಡ್ಯಾನ್ಸ್ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.