Rashmika Mandanna: ಸದ್ಯಕ್ಕಂತೂ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿನಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಹೊಸ ಹೊಸ ಜಾಹೀರಾತುಗಳಲ್ಲಿ ಸಹಾ ಮಿಂಚುತ್ತಿರುವ ಈ ನಟಿಯ ಹೊಸದೊಂದು ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಅಚ್ಚರಿಯನ್ನು ಪಟ್ಟಿದ್ದಾರೆ. ಒಂದು ಕ್ಷಣ ಶಾಕ್ ಆಗಿದ್ದಾರೆ. ವೈರಲ್ ವೀಡಿಯೋದಲ್ಲಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಸಿಸ್ಟೆಂಟ್ ಮೇಲೆ ಸಿಟ್ಟಾಗಿರುವ ದೃಶ್ಯವೊಂದು ಕಂಡು ಬಂದಿದೆ.
ಚಿತ್ರೀಕರಣಕ್ಕೂ ಮೊದಲು ತಮಗೆ ಮೇಕಪ್ ಮಾಡಲು ಬಂದ ಸಹಾಯಕಿಯ ಮೇಲೆ ರಶ್ಮಿಕಾ ಸಿಟ್ಟಾಗಿದ್ದು, ನಂತರ ಶೂಟಿಂಗ್ ಬಿಟ್ಟು ಹೊರಡುವ ದೃಶ್ಯವನ್ನು ವೀಡಿಯೋದಲ್ಲಿ ನೋಡಿದ ನೆಟ್ಟಿಗರು ಇದೇನಿದು? ರಶ್ಮಿಕಾ ಇಷ್ಟು ಕೋಪಗೊಂಡಿದ್ದಾದ್ರು ಏಕೆ? ಎಂದು ಅನುಮಾನಗೊಂಡಿದ್ದಾರೆ. ವೀಡಿಯೋದಲ್ಲಿ ರಶ್ಮಿಕಾ (Rashmika) ಆಡಿರುವ ಮಾತುಗಳು ಸಹಾ ಸ್ಪಷ್ಟವಾಗಿ ಕೇಳಿಸುತ್ತಿದೆ.
ರಶ್ಮಿಕಾ ಮಾತನಾಡ್ತಾ, ಇಲ್ಲಿ ಏನ್ ನಡೀತಾ ಇದೆ? ಟ್ಯಾಲೆಂಟ್ ಗೆ ಇಲ್ಲಿ ಬೆಲೆಯೇ ಇಲ್ಲ, ಎಲ್ಲಿ ಟ್ಯಾಲೆಂಟ್ ಗೆ ಬೆಲೆ ಇದೆಯೋ ನಾನು ಅಲ್ಲಿಗೆ ಹೋಗ್ತೀನಿ ಎಂದು ಸಿಟ್ಟಿನಿಂದ ಎದ್ದು ಹೊರಟು ಹೋಗಿದ್ದಾರೆ. ಅಲ್ಲದೇ ರೆಕಾರ್ಡಿಂಗ್ ನಿಲ್ಲಿಸುವಂತೆಯೂ ನಟಿ ಸಿಟ್ಟಿನಿಂದ ಹೇಳಿದ್ದಾರೆ. ಈ ವೀಡಿಯೋ ನೋಡಿದ ರಶ್ಮಿಕಾ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಸಹಾಯಕಿಯ ಮೇಲೆ ರಶ್ಮಿಕಾಗೆ ಇಷ್ಟೊಂದು ಕೋಪ ಯಾಕೆ? ಎಂದು ಶಾ ಕ್ ಆಗಿದ್ದಾರೆ.
ಆದರೆ ಅನಂತರ ಈ ಘಟನೆಯ ವಿಚಾರದ ಅಸಲಿಯತ್ತು ಹೊರಗೆ ಬಂದ ಮೇಲೆ ನೆಟ್ಟಿಗರು ಸಿಟ್ಟಾಗಿದ್ದಾರೆ. ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಜನರ ಈ ಅಸಮಾಧಾನಕ್ಕೆ ಕಾರಣ ಏನು ಅನ್ನೋದಾದ್ರೆ ಈ ಎಲ್ಲಾ ಡ್ರಾಮಾ ಸಹಾ ಪ್ರಚಾರಕ್ಕಾಗಿ ಎನ್ನಲಾಗಿದೆ. ನಟಿ ಒಂದು ಖಾಸಗಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಹೀರಾತಿನ ಪ್ರಚಾರದ ಭಾಗವಾಗಿ ಇಷ್ಟೆಲ್ಲಾ ಮಾಡಿದ್ದಾರೆ ಎನ್ನಲಾಗಿದೆ. ಜನ ಈಗ ಪ್ರಮೋಷನ್ ಗಾಗಿ ಏನ್ ಡ್ರಾಮಾ ಮಾಡ್ತಾರೆ ಅಂತಿದ್ದಾರೆ.