SWEETA

ನಟನೆಗೆ ಸ್ವಲ್ಪ ದಿನ ಬ್ರೇಕ್ ಹಾಕಿ ಎಲ್ಲ ಕಾಣಿವಂತೆ ಬೀಚ್ ನಲ್ಲಿ ಮಸ್ತ್ ಮಜಾ ಮಾಡಿದ ಶ್ವೇತಾ ಚೆಂಗಪ್ಪ! ಮಸ್ತ್ ವಿಡಿಯೋ ಇಲ್ಲಿದೆ ನೋಡಿ!!

Today News / ಕನ್ನಡ ಸುದ್ದಿಗಳು

ನಮ್ಮ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿರುವ ಸಾಕಷ್ಟು ಕಲಾವಿದರಿದ್ದಾರೆ. ಹಲವು ವರ್ಷಗಳ ಹಿಂದೆ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟು, ಧಾರಾವಾಹಿ ಮತ್ತು ಸಿನಿಮಾ ಎರಡರಲ್ಲೂ ಒಳ್ಳೆಯ ಹೆಸರು ಮಾಡಿದ ನಟಿಯರಿದ್ದಾರೆ. ಈಗಲೂ ಸಹ ಈ ನಟಿಯರು ಮನೆಮಾತಾಗಿ ಜನರಿಗೆ ಇಷ್ಟ ಆಗುತ್ತಾರೆ. ಅದೇ ರೀತಿ ಈಗಲೂ ಕನ್ನಡ ಕಿರುತೆರೆ ವೀಕ್ಷಕರು ಮರೆಯದ ನಟಿಯರಲ್ಲಿ ಒಬ್ಬರು ಶ್ವೇತಾ ಚೆಂಗಪ್ಪ. ಈ ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ಕಿರುತೆರೆಯಲ್ಲಿ ಮನೆಮಾತಾಗಿರುವ ಹೆಸರಿದು. ಶ್ವೇತಾ ಚೆಂಗಪ್ಪ ಕೊಡಗಿನ ಬೆಡಗಿ. ಈ ನಟಿ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಶ್ವೇತಾ ಅವರು ನಾಯಕಿಯಾಗಿ ನಟಿಸಿದ್ದ ಕಾದಂಬರಿ ಧಾರಾವಾಹಿಯನ್ನು ಜನ ಇಂದಿಗೂ ಮರೆತಿಲ್ಲ.

ಅದೊಂದೇ ಅಲ್ಲದೆ ಇನ್ನು ಅನೇಕ ಧಾರಾವಾಹಿಗಳಲ್ಲಿ ಶ್ವೇತಾ ಅವರು ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಅನೇಕ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಡಾ.ವಿಷ್ಣುವರ್ಧನ್ ಮತ್ತು ನಟ ದರ್ಶನ್ ಅವರ ಜೊತೆ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ನಟಿ ಶ್ವೇತಾ ಚೆಂಗಪ್ಪ. ಇವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದ್ದು ಮಜಾ ಟಾಕೀಸ್ ಕಾರ್ಯಕ್ರಮದಿಂದ. ಸೃಜನ್ ಲೋಕೇಶ್ ಅವರ ಹೆಂಡತಿಯ ಪಾತ್ರ ರಾಣಿ ಪಾತ್ರದ ಮೂಲಕ ವೀಕ್ಷಕರನ್ನು ನಕ್ಕು ನಗಿಸುತ್ತಿದ್ದರು ಶ್ವೇತಾ ಚೆಂಗಪ್ಪ.

ಮಜಾ ಟಾಕೀಸ್ ಮೂಲಕ ಇವರಿಗಿದ್ದ ಜನಪ್ರಿಯತೆ ಇನ್ನು ಹೆಚ್ಚಾಯಿತು. ಶ್ವೇತಾ ಅವರ ವೈಯಕ್ತಿಕ ಜೀವನದ ವಿಚಾರದ ಬಗ್ಗೆ ತಿಳಿಸಿಯುವುದಾದರೆ ಕೆಲವು ವರ್ಷಗಳ ಹಿಂದೆ ಕಿರಣ್ ಅಪ್ಪಚ್ಚು ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಮುದ್ದು ಮಗ ಸಹ ಇದ್ದಾನೆ, ಇವರ ಮಗನ ಹೆಸರು ಜಿಯಾನ್ ಅಯ್ಯಪ್ಪ. ಮಗು ಹುಟ್ಟಿದ ನಂತರ ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದರು ಶ್ವೇತಾ. ಮಗು ಸ್ವಲ್ಪ ದೊಡ್ಡವನಾದ ನಂತರ ಮತ್ತೆ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಕಂಬ್ಯಾಕ್ ಮಾಡಿದರು.

ಸೋಷಿಯಲ್ ಮೀಡಿಯಾದಲ್ಲಿ ಸಹ ಆಕ್ಟಿವ್ ಆಗಿರುವ ಶ್ವೇತಾ ಚೆಂಗಪ್ಪ ಅವರು, ಆಗಾಗ ತಮ್ಮ ಮುದ್ದು ಮಗನ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಜಿಯಾನ್ ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಇನ್ನು ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಶ್ವೇತಾ ಚೆಂಗಪ್ಪ ಅವರು ತಮ್ಮ ಫ್ಯಾಮಿಲಿ ಜೊತೆ ಟ್ರಿಪ್ ಹೋಗುತ್ತಾರೆ. ಕರ್ನಾಟಕದ ಹಲವು ಸುಂದರ ತಾಣಗಳಿಗೆ ಹೋಗಿ ಎಂಜಾಯ್ ಮಾಡುತ್ತಾರೆ ಶ್ವೇತಾ.

ಗಂಡ, ಮಗು ಹಾಗೂ ಇಡೀ ಕುಟುಂಬ ಜೊತೆಯಾಗಿ ಹೋಗುವುದು ವಿಶೇಷವಾಗಿದೆ. ಇತ್ತೀಚೆಗೆ ಶ್ವೇತಾ ತಮ್ಮ ಫ್ಯಾಮಿಲಿ ಜೊತೆಯಲ್ಲಿ ಸುಂದರವಾದ ಬೀಚ್ ಇರುವ ತಾಣಕ್ಕೆ ಪ್ರವಾಸ ಹೋಗಿದ್ದು, ಕಡಲ ತೀರದ ಸೌಂದರ್ಯವನ್ನು ಎಂಜಾಯ್ ಮಾಡುತ್ತಾ ವಾಕ್ ಮಾಡುತ್ತಿರುವ ವಿಡಿಯೋ ಒಂದನ್ನು ಶ್ವೇತಾ ಚೆಂಗಪ್ಪ ಅವರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಬ್ಯಾಗ್ರೌಂಡ್ ನಲ್ಲಿ, ದೀಪಿಕಾ ಪಡುಕೋಣೆ ಅವರ ಗೆಹರೈಯಾ ಸಿನಿಮಾದ ಡೂಬೆ ಹಾಡನ್ನು ಹಾಕಿದ್ದಾರೆ. ಕಡಲ ಸುಂದರ ಅಲೆಗಳನ್ನು ಶ್ವೇತಾ ಅವರು ಎಂಜಾಯ್ ಮಾಡುತ್ತಿರುವ ಈ ಸುಂದರವಾದ ವಿಡಿಯೋ ನೋಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.