ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಭಯ ತರುವುದು ಸಾವು, ಸಾವಿನ ದೃಶ್ಯ ಕಣ್ಮುಂದೆ ಬರುತ್ತಿದ್ದಂತೆ ಜೀವ ನಡುಗಿ ಹೋಗುತ್ತದೆ. ಯಾರಿಗೂ ಕೂಡ ತನ್ನ ಸಾವು ಯಾವಾಗ ಯಾವ ರೀತಿ ಬರುತ್ತದೆ ಎನ್ನುವುದು ಅರಿವಿರುವುದಿಲ್ಲ. ಕೆಲವೇ ಕೆಲವು ಮಂದಿಗೆ ಸಾವಿನ ಕೆಲವೇ ನಿಮಿಷಗಳ ಮುಂದೆ ಇದೇ ರೀತಿಯಾಗಿ ಸಾಯುತ್ತೇವೆ ಎನ್ನುವ ಸ್ಪಷ್ಟ ಚಿತ್ರಣ ಸಿಕ್ಕಿಬಿಡುತ್ತದೆ. ಆಗಲೇ ಜೀವ ಹೆದರಿ ನರಳಾಡಿ ಸಾಯುವುದು. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾವು ಇಂತಹ ದೃಶ್ಯಗಳನ್ನು ನೋಡುದ್ದೇವೆ.
ಸಾಮಾನ್ಯವಾಗಿ ಕ್ರೈಂ ದೃಶ್ಯಗಳನ್ನು ಅಥವಾ ಹಾ ರ ರ್ ದೃಶ್ಯಗಳನ್ನು ನೋಡಿ ಹೆದರಿ ಕಣ್ಣು ಮುಚ್ಚಿಕೊಳ್ಳುವ ನಾವು ಹಾಲಿವುಡ್ ಸಿನಿಮಾಗಳ ದೃಶ್ಯಗಳನ್ನು ನೋಡುವಾಗ ಅದಕ್ಕಿಂತ ಹೆಚ್ಚಾಗಿ ಭಯ ಬೀಳುತ್ತೇವೆ. ಯಾಕೆಂದರೆ ಅವೆಲ್ಲಾ ವಾತ್ಸವಕ್ಕೆ ಹತ್ತಿರವಾಗಿ ಇರುತ್ತವೆ ಎನ್ನುವ ಕಾರಣಕ್ಕೆ. ಎಲ್ಲೋ ಯಾವುದು ಸ್ಥಳದಲ್ಲಿ ಆದ ಘಟನೆಯ ಇನ್ಸ್ಪಿರೇಷನ್ ನಿಂದ ತಯಾರಾದ ದೃಶ್ಯ ಆಗಿರುತ್ತದೆ ಎನ್ನುವುದು ತಿಳಿದಿರುತ್ತದೆ
ಅದರಲ್ಲೂ ಸುನಾಮಿ, ಭೂಕಂಪ ಇಂತಹ ಪ್ರಕೃತಿ ವೈಕೋಪದ ವಿಡಿಯೋ ನೋಡುತ್ತಿದ್ದರೆ ಇನ್ನು ಹೆಚ್ಚಿನ ನಡುಕ ಉಂಟಾಗುತ್ತದೆ. ನೋಡ ನೋಡುತ್ತಿದ್ದಂತೆ ನೂರಾರು ಮಂದಿಯನ್ನು ಭೂಮಿ ತನ್ನ ಒಡಲ ಒಳಗೆ ಹಾಕಿಕೊಳ್ಳುವುದು ಅಥವಾ ಸಮುದ್ರ ತನ್ನ ಕೆನ್ನಾಲಿಗೆ ಚಾಚಿ, ತನ್ನ ಒಳಗೆ ಎಳೆದುಕೊಳ್ಳುತ್ತಿರುವ ವಿಡಿಯೋ ನೋಡಿದರೆ ನೋಡುತ್ತಿರುವವರೆಗೂ ಕೂಡ ಒಂದು ಕ್ಷಣ ಸಾವೇ ಕಣ್ಮುಂದೆ ಬಂದ ರೀತಿ ಭಯ ಹುಟ್ಟಿಬಿಡುತ್ತದೆ.
ಸೋಶಿಯಲ್ ಮೀಡಿಯಾ ಬಂದಮೇಲೆ ಈ ರೀತಿ ಸಾವಿರಾರು ವಿಡಿಯೋಗಳು ದಿನವೊಂದಕ್ಕೆ ಅಪ್ಲೋಡ್ ಆಗುತ್ತವೆ. ಅದರಲ್ಲಿ ಹೆಚ್ಚಿನ ಜನರ ಮನ ಮುಟ್ಟಿದ ವಿಡಿಯೋಗಳು ಒಬ್ಬರಿಂದ ಒಬ್ಬರಿಗೆ ಶೇರ್ ಆಗುವ ಮೂಲಕ ಟ್ರೆಂಡಿಂಗ್ ವಿಡಿಯೋ ಎನಿಸಿಕೊಂಡು ಇನ್ನಷ್ಟು ಜನಕ್ಕೆ ತಲುಪುತ್ತವೆ, ಅಂತಹದೊಂದು ವಿಡಿಯೋ ಇದಾಗಿದೆ ನೋಡಿ…
ಟ್ವಿಟರ್ ಅಲ್ಲಿ ಫೆಸಿನೇಟಿಂಗ್ ಹೆಸರಿನ ಐಡಿ ನಿಂದ ಶೇರ್ ಆಗಿರುವ ಈ ವಿಡಿಯೋ ಇಷ್ಟೆಲ್ಲ ಚರ್ಚೆಗೆ ಕಾರಣ ಆಗಿದೆ. ಈಗಾಗಲೇ 9.9 ಮಿಲಿಯನ್ ಜನರ ವೀಕ್ಷಣೆ ಪಡೆದ ಈ ವಿಡಿಯೋದಲ್ಲಿ ಅಷ್ಟಕ್ಕೂ ಏನಿದೆ ಎಂದು ನೋಡುವುದಾದರೆ, ಜಪಾನಿನ ತೊಹಾಕುವಿನಲ್ಲಿ 2011ರಲ್ಲಿ ಆದ ಭೂಕಂಪ, ಅದರ ಹಿಂದೆ ಬಂದ ಸುನಾಮಿಯ ದೃಶ್ಯಾವಳಿ ಆಗಿದೆ ಇದು.
ಈ ವಿಡಿಯೋ ಕೇವಲ 59 ಸೆಕೆಂಡ್ ಹೊಂದಿದೆ, ಮೊದಲ ಕೆಲವು ಸೆಕೆಂಡ್ ಗಳಲ್ಲಿ ಇದು ಏನು ಆಗುತ್ತಿದೆ ಎಂದು ಕುತೂಹಲದಿಂದ ನೋಡುವಂತೆ ಮಾಡುತ್ತದೆ. ನೋಡ ನೋಡುತ್ತಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರುಗಳೆಲ್ಲ ಯು ಟರ್ನ್ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತವೆ. ಅಷ್ಟರಲ್ಲಿ ದೊಡ್ಡ ಗಾತ್ರದ ಸುನಾಮಿ ಒಂದು ಇವರೆಲ್ಲರನ್ನು ಎಳೆದುಕೊಂಡು ತನ್ನ ಒಳಗೆ ಹಾಕಿಕೊಳ್ಳುವುದು ಮತ್ತು ಅಕ್ಕ ಪಕ್ಕದಲ್ಲಿದ್ದ ಭೂಮಿ ಹಾಗೂ ಬಿಲ್ಡಿಂಗ್ ಗಳೆಲ್ಲ ಕುಸಿದು ಬೀಳುತ್ತಿರುವುದು ಕಣ್ಣಿಗೆ ಬೀಳುತ್ತದೆ.
ಇದನ್ನು ನೋಡುತ್ತಿದ್ದರೆ ಎಂತಹ ಗಟ್ಟಿ ಗುಂಡಿಗೆ ಇದ್ದರೂ ಸಹ ಜೀವ ಬಾಯಿಗೆ ಬಂದಂತಹ ಅನುಭವ ಹಾಗೆ ಆಗುತ್ತದೆ. ಇನ್ನು ಸಾವಿರಾರು ಕಾರುಗಳು ಬೆಂಕಿ ಪಟ್ಟಣದ ರೀತಿ ಆ ಅಲೆಗಳಿಗೆ ಆಹುತಿ ಆಗಿದ್ದು ಸುಮಾರು ದಿನ ನಮ್ಮ ಕಣ್ಮುಂದೆ ಬರುವಂತ ಸನ್ನಿವೇಶ ಆಗಿದೆ. ಸದ್ಯಕ್ಕೆ ಇದು ಟ್ರೆಂಡಿಂಗ್ ಆಗಿ ರನ್ ಆಗುತ್ತಿರುವ ವಿಡಿಯೋಗಳಲ್ಲಿ ಒಂದಾಗಿದ್ದು, ಇನ್ನೂ ಸಹ ನೀವು ಇದನ್ನು ನೋಡಿಲ್ಲ ಅಂದರೆ ನೋಡಿ ಈ ಪ್ರಕೃತಿ ವಿಕೋಪದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ಆ ವೀಡಿಯೊ ಕೆಳಗಿದೆ ನೋಡಿ…
Indonesia. Few seconds before Tsunami & when it hits pic.twitter.com/oLOgOVMLgI
— @Akashtv1Soni (@Akashtv1Soni) October 5, 2018