Sruthi-Hariharan

ನಟಿ ಶ್ರುತಿ ಹರಿಹರನ್ ಸಿನಿಮಾಗೆ ಗುಡ್ ಬೈ ಹೇಳಿ, ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ?

CINEMA/ಸಿನಿಮಾ Entertainment/ಮನರಂಜನೆ Free Govt Schemes/ಸರ್ಕಾರಿ ಉಚಿತ ಯೋಜನೆಗಳು Girls Matter/ಹೆಣ್ಣಿನ ವಿಷಯ HEALTH/ಆರೋಗ್ಯ Heap/ರಾಶಿ ಭವಿಷ್ಯ RATION CARD/ರೇಷನ್ ಕಾರ್ಡ್ ಮಾಹಿತಿ Today News / ಕನ್ನಡ ಸುದ್ದಿಗಳು

ಸ್ನೇಹಿತರೆ, ನಟಿ ಶೃತಿ ಹರಿಹರನ್ ಇತ್ತೀಚಿಗೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ, ಮಗು ಆದ ನಂತರ ಸಿನಿಪ್ರಿಯರಿಗೆ ಗುಡ್ ಬೈ ಹೇಳಿದ್ರಾ ಅನ್ಸುತ್ತೆ. ಏಕೆಂದರೆ ಕನ್ನಡದ ಅನೇಕ ಸ್ಟಾರ್ ನಟರ ಜೊತೆಗೆ ಲೂಸಿಯಾ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ತಾರಕ್, ನಾತಿಚರಾಮಿಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿರುವ ಶೃತಿಹರಿಹರನ್ ಸದ್ಯಕ್ಕೆ ಸಿನಿ ರಂಗದಿಂದ ದೂರವಾಗಿ ಬಿಟ್ಟಿದ್ದಾರೆ. ಒಂದು ವಾರಕ್ಕೆ ಏನಿಲ್ಲ ಅಂದರೂ ಕನಿಷ್ಠ ಮೂರು ಸಿನಿಮಾಗಳ ಆಫರ್ ಶೃತಿಹರಿಹರನ್ಗೆ ಬರುತ್ತಿದ್ದಂತೆ.

ಆದರೆ ಈಗ ಯಾವುದೇ ಯಾವುದೇ ಆಫರ್ ಶೃತಿಹರಿಹರನ್ಗೆ ಬರುತ್ತಿಲ್ಲವಂತೆ. ಹಾಗಾದರೆ ಶೃತಿ ಹರಿಹರನ್ಗೆ ಹೊಸ ಚಿತ್ರಗಳ ಆಫರ್ ಬರದಿರಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿನಿಮಾಗಳಲ್ಲಿ ನಟನೆ ಮಾಡುವುದಕ್ಕೆ ಬರುವಂತಹ ಅವಕಾಶಗಳು ತುಂಬಾ ಕಡಿಮೆಯಾಗಿದೆ. ಅನೇಕರು ಇನ್ಮುಂದೆ ಎಂದಿಗೂ ಕೂಡ ನನ್ನ ಜೊತೆ ಕೆಲಸ ಮಾಡುವುದಿಲ್ಲ ಅನಿಸುತ್ತೆ ಯಾಕೆಂದರೆ ಈ ಹಿಂದೆ ಕೆಲವರ ವಿರುದ್ಧ ನಾನು ದ್ವೇಷ ಕಟ್ಟಿಕೊಂಡಿದ್ದೇನೆ ಎನ್ನುವುದು ಕೂಡ ನನಗೆ ಗೊತ್ತಿದೆ.

ಹಾಗಾಗಿ ನನಗೆ ಇದು ಯಾವುದೇ ಸರ್ಪ್ರೈಸ್ ಆಗಿ ಕಾಣಿಸುತ್ತಿಲ್ಲ. ಇದೆಲ್ಲವನ್ನು ಸಹಿಸಿಕೊಂಡೇ ನಾನು ಹೋರಾಟವನ್ನು ಕಂಟಿನ್ಯೂ ಮಾಡುತ್ತೇನೆ ಎಂದು ಶೃತಿ ಹರಿಹರನ್ ಹೇಳಿದ್ದಾರೆ. ನನ್ನ ಜೊತೆ ಕೆಲಸ ಮಾಡುವುದಕ್ಕೆ ಇಷ್ಟ ಇರುವಂತಹ ಕೆಲವು ನಿರ್ದೇಶಕರು ಕೂಡ ಬರವಣಿಗೆ ಹಂತದಲ್ಲಿದ್ದಾರೆ. ನಟಿಯಾಗಿಯೇ ಇರುವುದರ ಹೊರತಾಗಿ ನನ್ನ ಬೇರೆಬೇರೆ ಕನಸುಗಳನ್ನು ನನಸು ಮಾಡಿಕೊಳ್ಳುವುದಕ್ಕೆ ನನಗೆ ಇದು ಒಳ್ಳೆಯ ಟೈಮ್ ಅನಿಸುತ್ತದೆ. ಹಾಗೆಂದ ಮಾತ್ರಕ್ಕೆ ನಾನು ಆಕ್ಟಿಂಗ್ ಮಾಡುವುದನ್ನು ಬಿಡುವುದಿಲ್ಲ ಖುಷಿ ಕೊಡುವಂತಹ ಪಾತ್ರಗಳು ಮತ್ತೆ ಏನಾದರೂ ಸಿಕ್ಕಿದರೆ, ನಾನು ಬಣ್ಣ ಹಚ್ಚುವುದಕ್ಕೆ ರೆಡಿ ಇದ್ದೇನೆ ನನ್ನ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ ಎಂದು ಸಹ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಶೃತಿಹರಿಹರನ್ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟು ಆರೋಪವನ್ನು ಮಾಡಿದರು. ಅದಾದ ಮೇಲೆ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ ಅಷ್ಟೇ ಅಲ್ಲದೆ ತಾವೇ ಅಭಿನಯಿಸಿದ ನಾತಿಚರಾಮಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೂ ಕೂಡ ಬಂದಿರಲಿಲ್ಲ. ಇದರ ಬೆನ್ನಲ್ಲೇ ಶೃತಿಹರಿಹರನ್ ಅವರಿಗೆ ಯಾರು ಸಿನಿಮಾಗಳ ಆಫರ್ ನೀಡುತ್ತಿಲ್ಲ ಎನ್ನುವ ಮಾತುಗಳು ಸಹ ಬಂದಿದ್ದವು. ಇಂತಹ ಮಾತುಗಳಿಗೆ ಸ್ವತಹ ಶೃತಿ ಹರಿಯನ್ ಅವರೇ ಮೀಡಿಯಾದ ಮುಂದೆ ಬಂದು ಮಾತನಾಡಿ ಎಲ್ಲದಕ್ಕೂ ಸರಿಯಾದ ಉತ್ತರ ಕೊಟ್ಟಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎನ್ನುವುದನ್ನು ನಿಮಗೆ ಕಾಮೆಂಟ್ ಮಾಡಿ ತಿಳಿಸಿ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...