ಹಿರಿಯ ನಟಿ ಶಾಂತಮ್ಮ:ಮುಖ ನೋಡೋಕು ಮಕ್ಕಳು ಬರಲಿಲ್ಲ ಡ್ರೈವರ್ ನಿಂದ ಅಂತ್ಯಕ್ರಿಯೆ

CINEMA/ಸಿನಿಮಾ Entertainment/ಮನರಂಜನೆ

ಪತಿಯ ಪ್ರೋತ್ಸಾಹದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶಾಂತಮ್ಮ!-ಶಾಂತಮ್ಮ ಅವರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾಂತಮ್ಮ ಅವರ ತವರು ಮನೆಯಲ್ಲಿ ನಟನೆಗೆ ಅವಕಾಶ ಇರಲಿಲ್ಲ. ಸಿನಿಮಾಕ್ಕೆ ಬರಬೇಕು ಎಂದು ಅವರು ಅಂದುಕೊಂಡಿರಲಿಲ್ಲ. ಹಳ್ಳಿಯ ಜನ ಆಗಿರೋದರಿಂದ ಶಾಂತಮ್ಮನವರ ತಾಯಿ ಅವರಿಗೆ ನಟನೆಗೆ ಬರಲು ಅವಕಾಶ ಮಾಡಿಕೊಟ್ಟಿರಲಿಲ್ಲ. ನಟಿಸುವ ಆಸೆಯಿದ್ದರೂ ಕೂಡ ಹೆದರಿಕೆಯ ಮಧ್ಯದಲ್ಲೇ ಶಾಂತಮ್ಮ ಮೊದ ಮೊದಲು ಡೈಲಾಗ್ ಮರೆಯುತ್ತ ನಟಿಸುತ್ತಿದ್ದರಂತೆ.

ಶಾಂತಮ್ಮ ಅವರ ಪತಿ ಗೋಕಾಕ್ ಕಂಪೆನಿಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದರು. ಹೀಗಾಗಿ ಅಲ್ಲಿದ್ದವರೊಬ್ಬರು ನಿಮ್ಮ ಪತ್ನಿ ಚೆನ್ನಾಗಿದ್ದಾರೆ, ನಟಿಸಬಹುದಲ್ಲವಾ ಎಂದು ಕೇಳಿದ್ದರಂತೆ. ಆಗ ಶಾಂತಮ್ಮ ಗಂಡ, ನನ್ನ ಪತ್ನಿ ಒಪ್ಪಿದರೆ ನನ್ನದೇನೂ ಅಭ್ಯಂತರವೇನಿಲ್ಲ ಎಂದಿದ್ದರು. ಹೀಗೆ ಪತಿಯ ಪ್ರೋತ್ಸಾಹದಿಂದ ಅವರು ಚಿತ್ರರಂಗಕ್ಕೆ ಬಂದಿದ್ದರು. 15 ವರ್ಷ ಮದ್ರಾಸ್‌ನಲ್ಲಿ ಶಾಂತಮ್ಮ ಕುಟುಂಬ ನೆಲೆಸಿತ್ತು.

ಶಾಂತಮ್ಮ ಮಕ್ಕಳ ಕ್ಯಾನ್ಸರ್‌ಗೆ ಸಹಾಯ ಮಾಡಿದ್ದ ದುನಿಯಾ ವಿಜಯ್, ರಾಧಿಕಾ ಕುಮಾರಸ್ವಾಮಿ
ಕೆಲ ವರ್ಷಗಳ ಹಿಂದೆ ಮಗ ಮತ್ತು ಮಗಳು ಕ್ಯಾನ್ಸರ್‌ ಚಿಕಿತ್ಸೆಗೆ ಸಲುವಾಗಿ ನಟಿ ಶಾಂತಮ್ಮ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಏನಾದರೂ ಸಹಾಯ ಸಿಗುತ್ತದೆಯೇ ಎಂದು ಆಶಿಸಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಮ್ಮ ಅವರಿಗೆ ಸಹಾಯ ಮಾಡುವ ಆಶ್ವಾಸನೆ ನೀಡಿದ್ದರು. ಅಷ್ಟೇ ಅಲ್ಲದೆ ದುನಿಯಾ ವಿಜಯ್ ಹಾಗೂ ರಾಧಿಕಾ ಕುಮಾರಸ್ವಾಮಿ ಕೂಡ ಶಾಂತಮ್ಮ ಅವರ ಮಕ್ಕಳ ಕ್ಯಾನ್ಸರ್ ಚಿಕಿತ್ಸಗೆ ಸಹಾಯ ಮಾಡಿದ್ದರು.

shantamma death, ರಾಜ್‌ಕುಮಾರ್ ಕುಟುಂಬದ ಆಪ್ತೆ, ಕನ್ನಡದ ಹಿರಿಯ ನಟಿ ಶಾಂತಮ್ಮ ಇನ್ನಿಲ್ಲ! - kannada actress shanthamma is no more - Vijaya Karnataka

ಶಾಂತಮ್ಮ ಮಗಳ ಮದುವೆಗ ಸಹಾಯ ಮಾಡಿದ್ದ ಶಂಕರ್‌ನಾಗ್, ಅಂಬರೀಶ್-ಶಾಂತಮ್ಮ ಅವರ ಮಗಳ ಮದುವೆಗೆ ಅಂಬರೀಶ್, ಶಂಕರ್‌ನಾಗ್ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ ರಾಜ್‌ಕುಮಾರ್ ಕುಟುಂಬದ ಜೊತೆಗೆ ಶಾಂತಮ್ಮ ಅವರಿಗೆ ಒಳ್ಳೆಯ ಸಂಬಂಧವಿತ್ತು. ರಾಘವೇಂದ್ರ ರಾಜ್‌ಕುಮಾರ್ ಅವರು ಅನೇಕ ಬಾರಿ ಸಹಾಯ ಮಾಡಿದ್ದಾರೆಂದು ಶಾಂತಮ್ಮನವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಡಾ.ರಾಜ್‌ಕುಮಾರ್ ಜೊತೆ ನಟಿಸಿದ್ದ ಶಾಂತಮ್ಮ-ಡಾ ರಾಜ್‌ಕುಮಾರ್ ಜೊತೆ ಶಾಂತಮ್ಮ ನಟಿಸಿದ್ದರು. ರಜನಿಕಾಂತ್ ಅವರ mulluvaram ಸಿನಿಮಾದಲ್ಲಿ ಶಾಂತಮ್ಮ ಅಭಿನಯಿಸಿದ್ದರು. ಆ ಚಿತ್ರ ಆಗಲೇ 100 ದಿನ ಓಡಿತ್ತು. 1956 ರಲ್ಲಿ ಡಾ ರಾಜ್‌ಕುಮಾರ್ ಅವರ ನಾಲ್ಕನೇ ಸಿನಿಮಾ ‘ಹರಿಭಕ್ತ’ದಲ್ಲಿ ಶಾಂತಮ್ಮ ಮೊದಲ ಬಾರಿಗೆ ನಟಿಸಿದ್ದರು. ‘ರಣಧೀರ ಕಂಠೀರವ’, ‘ಇಂದಿನ ಭಾರತ’, ‘ಶಬರಿಮಲೆ’ ಮುಂತಾದ ಸಿನಿಮಾಗಳಲ್ಲಿ ಶಾಂತಮ್ಮ ನಟಿಸಿದ್ದರು.

ಅದರೆ ಕಷ್ಟ ಪಟ್ಟು ಮಕ್ಕಳಿಗೆ ಭವಿಷ್ಯ ಕಟ್ಟಿಕೊಟ್ಟ ಶಾಂತಮ್ಮನಿಗೆ ಮಕ್ಕಳಿಂದ ಏನು ಸಿಗಲಿಲ್ಲ. ಸತ್ತಾಗ ಕೂಡ ನೋಡುವುದಕ್ಕೂ ಸಹ ಯಾರು ಬರಲಿಲ್ಲ.ಶಾಂತಮ್ಮನಿಗೆ 6 ಮಕ್ಕಳು. 4 ಗಂಡು ಮತ್ತು 2 ಹೆಣ್ಣು ಮಕ್ಕಳು. ಇನ್ನು ಕರೋನದಿಂದ ವಿಧಿವಶ ಅದನಂತರ ಹಾಸ್ಪಿಟಲ್ ನ ಮುಂದೆ ಅವರ ಪಾರ್ಥಿವ ಶರೀರವನ್ನು ಇಡುತ್ತಾರೆ. ಅದರೆ ಕರೋನಕ್ಕೆ ಯಾವ ಮಕ್ಕಳು ಸಹ ಹತ್ತಿರ ಹೋಗುವುದಿಲ್ಲ ಹಾಗು ಅತ್ಯಕ್ರಿಯೆಗೆ ಯಾವ ಮಕ್ಕಳು ಸಹ ಇರುವುದಿಲ್ಲ.

Kannada actress Shanthamma dies at the age of 95 - IBTimes India

ಇಂತಹ ಸಮಯದಲ್ಲಿ ಮುಸ್ಲಿಂಮ್ ಡ್ರೈವರ್ ನೆರವೇರಿಸುತ್ತೇನೆ ಎಂದು ಹೇಳುತ್ತಾನೆ, ಕೊನೆಯ ಕ್ಷಣದಲ್ಲಿ ಯಾರು ಸಹಾಯಕ್ಕೆ ಬರುತ್ತಾರೆ ಎಂದು ಯಾರಿಗೂ ಸಹ ಹೇಳುವುದಕ್ಕೆ ಸಾಧ್ಯ ಆಗುವುದಿಲ್ಲ. ಕೊನೆಯಲ್ಲಿ ಆಂಬುಲೆನ್ಸ್ ಡ್ರೈವರ್ ಶಾಂತಮ್ಮ ಅವರ ಅತ್ಯಕ್ರಿಯೆಯನ್ನು ಮಾಡುತ್ತಾರೆ.ಹೆತ್ತ ಮಕ್ಕಳು ಬರದೇ ಇರುವ ಸಂದರ್ಭದಲ್ಲಿ ಯಾವುದೊ ಧರ್ಮಕ್ಕೆ ಸೇರಿದವರು ದೇಹಕ್ಕೆ ಮುಕ್ತಿಯನ್ನು ಕೊಟ್ಟಿದ್ದಾರೆ.ಜಾತಿ ಧರ್ಮ ಅಂತ ಹೋದರೆ ಬದುಕುವುದಕ್ಕೆ ಸಾಧ್ಯ ಆಗುವುದಿಲ್ಲ.ಶಾಂತಮ್ಮ ಅವರು ವಯೋಸಹಜ ಕಾಯಿಲೆಯಿಂದ  ನಿಧನರಾಗಿದ್ದಾರೆ. ಇವರಿಗೆ 95 ವರ್ಷ ವಯಸ್ಸಾಗಿತ್ತು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.