ನಿಮಗೆ ಇನ್ನೂ ಗ್ರಹಲಕ್ಷ್ಮಿ ಹಣ ಬಂದಿಲ್ವಾ?ರಾಜ್ಯ ಸರ್ಕಾರದ ಅತ್ಯಂತ ಮಹತ್ಬಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ. ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಘೋಷಿಸಿದಂತೆ ಈಗಾಗಲೇ ಕಳೆದೊಂದು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ.ರಾಜ್ಯಾದ್ಯಂತ ಇದರ ಪ್ರಮಾಣ ಶೇ.45ರಷ್ಟು ಇದ್ದರೆ ರಾಜಧಾನಿ ಬೆಂಗಳೂರಿನಲ್ಲಿಯೇ ಇದರ ಶೇಕಡಾ 20ರಷ್ಟು ತಲುಪಿಲ್ಲ. ಬೆಂಗಳೂರು ನಗರದಲ್ಲಿ 5,27,768 ಅರ್ಜಿಯಲ್ಲಿ 69, 642 ಮನೆಯೊಡತಿಗೆ ಎರಡು ಸಾವಿರ ಹಣ ಸಂದಾಯವಾಗಿದೆ.
ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,22,917 ಅರ್ಜಿಯಲ್ಲಿ 94,338 ಮನೆಯೊಡಿಗೆ ಹಣ ಸಂದಾಯ ಮಾಡಲಾಗಿದೆ. ಇನ್ನು ಹತ್ತು ದಿನದಲ್ಲಿ ಉಳಿದವರಿಗೆ ಹಣ ಜಮೆ ಆಗಲಿದೆ. ಇದರಲ್ಲಿ ಕ್ರಮವಾಗಿ ಬೆಂಗಳೂರು ನಗರ 380, ಗ್ರಾಮಾಂತರ ಜಿಲ್ಲೆಯ 478 ಮನೆಯೊಡತಿ ಬ್ಯಾಂಕ್ ಅಕೌಂಟ್ ಕೆವೈಸಿ, ಆಧಾರ್ ಲಿಂಕ್ ಆಗದ ಹಣ ಸಂದಾಯ ಮಾಡಲಾಗಿಲ್ಲ.
ನಿಮ್ಮ ಬ್ಯಾಂಕ್ ಖಾತೆ ಗೃಹಲಕ್ಷ್ಮಿ ಹಣ ಬಾರದೇ ಇರೋರು ಎರಡು ಸಾವಿರ ಹಣ ಜಮೆ ಆಗದೇ ಇರಲು ಕಾರಣವೇನು? ಡಿಬಿಡಿ ಸ್ಟೇಟಸ್ ಚೆಕ್ ಮಾಡೋದೇಗೆ? ಎಂಬ ಪ್ರಶ್ನೆಗೆ ಡಿಬಿಟಿ ಕರ್ನಾಟಕ ಆಪ್ ಮೂಲಕ ಡಿಬಿಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿದೆ.ನಿಮ್ಮ ಮೊಬೈಲ್ ಆಪ್ ನಲ್ಲಿ ಡಿಬಿಡಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡಿ, ಆನಂತರ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಕೊಟ್ರೆ ಒಟಿಪಿ ಬರುತ್ತೆ.
ಆನಂತರ ಅನ್ನಭಾಗ್ಯ ಡಿಬಿಟಿ ಚೆಕ್ ಮಾಡಬೇಕಾದರೆ ಬಿಪಿಎಲ್ ಕಾರ್ಡ್ ಸಂಖ್ಯೆ ಹಾಕಿ ಪರಿಶೀಲಿಸಿ.ಗೃಹಲಕ್ಷ್ಮಿ ಪರಿಶೀಲಿಸಲು ಅರ್ಜಿ ಸಂಖ್ಯೆ ಹಾಕಿದರೆ ಸ್ಟೇಟಸ್ ಸಿಗಲಿದೆ ಅನ್ನಭಾಗ್ಯ ಡಿಬಿಟಿ ಹಣ ಪರಿಶೀಲಿಸಲು ಈ ಆಪ್ ಬಳಕೆ ಆಗಲಿದೆ. ರಾಜ್ಯದಲ್ಲಿ ಇದುವರೆಗೆ 1.13 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿ ಆಗಿದೆ. ಇದರಲ್ಲಿ 44.52 ಲಕ್ಷ ಫಲಾನುಭವಿಗಳಿಗೆ ಎರಡು ಸಾವಿರ ಹಣ ಜಮೆ ಆಗಿದೆ.
69 ಲಕ್ಷ ಫಲಾನುಭವಿಗೆ ಹಣ ಜಮೆ ಆಗಬೇಕಿದೆ. ಇದರಲ್ಲಿ 25 ಸಾವಿರ ಫಲಾನುಭವಿಗೆ ಜಮೆ ಆಗೋದು ಡೌಟ್! ಇನ್ನು ಹತ್ತು ದಿನದಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಯ ಫಲಾನುಭವಿಗೆ ಜಮೆ ಆಗಲಿದೆ. ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಹಾಗಾದ್ರೆ ಇಲ್ಲಿ ಒಂದು ಸಮಸ್ಯೆ ಏನಾಗಿದೆ ಅಂತ ಹೇಳಿದ್ರೆ ಕೆಲವರಿಗೆ ಅವರ ಬ್ಯಾಂಕ್ ಅಕೌಂಟ್ ಆಕ್ಟಿವೇಟ್ ಆಗಿಲ್ಲ.
ತುಂಬಾ ದಿನದಿಂದ ಉಪಯೋಗಿಸದೆ ಅದು ತಾತ್ಕಾಲಿಕವಾಗಿ ಬಂದಾಗಿದೆ. ಇಂತಹವರ ಅಕೌಂಟಿಗೆ ಅಮೌಂಟ್ ಟ್ರಾನ್ಸ್ಫರ್ ಆಗುತ್ತಿಲ್ಲ. ಇನ್ನೂ ಕೆಲವೊಬ್ಬರಿಗೆ ತಾಂತ್ರಿಕ ಕಾರಣಗಳಿಂದ ಹಣ ಹೋಗುತ್ತಿಲ್ಲ. ಆದ್ದರಿಂದ ಸಪ್ಟೆಂಬರ್ ತಿಂಗಳಿನಲ್ಲಿ ಸೆಪ್ಟೆಂಬರ್ ಹತ್ರ ಒಳಗಡೆ ಖಂಡಿತವಾಗಿಲು ಎಲ್ಲರ ಅಕೌಂಟಿಗೆ ಅಮೌಂಟ್ ಹೋಗುತ್ತದೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ನೀವು ಏನು ಮಾಡಬೇಕೆಂದರೆ ಒಂದು ಬಾರೆ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಅಕೌಂಟ್ ಜೊತೆ ಲಿಂಕ್ ಆಗಿದೆ ಅಂತ ಪರೀಕ್ಷಿಸಿಕೊಳ್ಳಿ. ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವೇಟ್ ಇದ್ಯಾ ಅಂತ ಪರಿಶೀಲಿಸಿ. ನಿಮ್ಮ ಆಧಾರ ಕಾರ್ಡು ಯಾವ ಬ್ಯಾಂಕಿಗೆ ಲಿಂಕ್ ಆಗಿರುತ್ತದೆ ಅದೇ ಅಕೌಂಟ್ಗೆ ನಿಮ್ಮ ಹಣ ಬರುತ್ತದೆ. ಒಮ್ಮೆ ನಿಮ್ಮ ಬ್ಯಾಂಕಿಗೆ ಭೇಟಿ ಕೊಡಿ ಇದನ್ನೆಲ್ಲ ಪರಿಹರಿಸಿಕೊಂಡರೆ ನಿಮಗೆ ಹಣ ಬರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ