ಸ್ನೇಹಿತರೆ, ಅದಾಗಲೇ ಕನ್ನಡದ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋ ಪ್ರಾರಂಭವಾಗಿದೆ. ಸ್ಪರ್ಧಿಗಳು ನಿಧಾನವಾಗಿ ತಮ್ಮ ನಿಜರೂಪವನ್ನು ಬಿಚ್ಚಿಡುತ್ತಿದ್ದಾರೆ. ಹೀಗಿರುವಾಗ ನಟಿ ಸಾನಿಯಾ ಅಯ್ಯರ್ ತಮ್ಮ ಬದುಕಿನಲ್ಲಿ ಎದುರಾದಂತಹ ಕಹಿ ಘಟನೆಯೊಂದನ್ನು ನೆನೆದು ಮೊನ್ನೆಯ ಎಪಿಸೋಡ್ನಲ್ಲಿ ಕಣ್ಣೀರು ಹಾಕಿದರು.
ಇದರ ಕುರಿತು ಟಿವಿ9 ನೊಂದಿಗೆ ಸಂದರ್ಶನ ನಡೆಸಿದಂತಹ ಸಾನಿಯಾ ಅವರ ತಾಯಿ ಅಕ್ಷರಶಹ ಬೆಚ್ಚಿ ಬೀಳಿಸುವಂತಹ ಸಂಗತಿ ಒಂದನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆಕೆ ಮಗಳು ಹಾಗೂ ತನ್ನ ಎರಡನೇ ಗಂಡನ ಕುರಿತು ಹೇಳಿದ್ದಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ
ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿನ್ನೆ ಸಾನಿಯಾ ಕಾರ್ಯಕ್ರಮದಲ್ಲಿ ಅತ್ತಿದ್ದಾಳೆ ಅದನ್ನು ನೋಡಿ ನಮಗೂ ತಡೆಯಲಾಗದಂತಹ ದುಃಖವಾಯಿತು. ಆಕೆ ಎರಡು ವರ್ಷಗಳ ಪುಟ್ಟ ಮಗು ಇದ್ದಾಗ ನನಗೂ ಮತ್ತು ನನ್ನ ಗಂಡನಿಗೂ ವಿಚ್ಛೇ-ದನವಾಗಿ..
ನಾನು ಅವನಿಂದ ದೂರವಾದೆ. ಮಗಳಿಗೆ ಅಪ್ಪನ ಪ್ರೀತಿಯ ಕೊರತೆಯಾಗಬಾರದೆಂದು ನನ್ನ ಸ್ನೇಹಿತನೊಂದಿಗೆ ಎರಡನೇ ಮದುವೆಯಾದನು. ಅದು ನನ್ನ ಜೀವನದ ತಪ್ಪು ನಿರ್ಧಾರವಾಗಿತ್ತು. ಸ್ನೇಹಿತನಾಗಿದ್ದಾಗ ಇದ್ದಂತಹ ಸಂಬಂಧ ಮುಂದುವರೆಯಲಿಲ್ಲ. ಬದಲಿಗೆ ಅದು ಬೇರೆಯದೇ ತಿರುವು ತೆಗೆದುಕೊಳ್ಳುತ್ತಾ ಹೋಯಿತು.
ನಮ್ಮಿಬ್ಬರ ನಡುವೆ ಹೊಂದಾಣಿಕೆ ಅಷ್ಟು ಸರಿ ಬರುತ್ತಿರಲಿಲ್ಲ. ಅಲ್ಲದೆ ಅದೆಷ್ಟೋ ಬಾರಿ ಸಾನಿಯಾ ನನ್ನ ಎರಡನೇ ಅಪ್ಪ ನೋಡುವ ನೋಟವೇ ಸರಿ ಇಲ್ಲ ಎಂಬ ಅಳಲನ್ನು ನನ್ನ ಬಳಿ ತೋಡಿಕೊಂಡಿದ್ದಳು. ಈ ಕಾರಣದಿಂದಾಗಿ ನಾನು ಅವನಿಗೆ ವಿಚ್ಛೇ-ದನ ನೀಡಿ ದೂರವಾಗಬೇಕು ಎಂಬ ನಿರ್ಧಾರ ಮಾಡಿದ್ದೆ.
ಆದರೆ ಆತ ನನ್ನನ್ನು ಬಿಟ್ಟುಕೊಡಲು ರೆಡಿ ಇರಲಿಲ್ಲ. ಹೀಗೊಂದು ದಿನ ನಾನು ತುಂಬಾ ಒಳ್ಳೆಯವನು ಎಂಬುದನ್ನು ಬಿಂಬಿಸುವ ಸಲುವಾಗಿ ಸಾನಿಯಾ ಮತ್ತವಳ ಬಾಯ್ ಫ್ರೆಂಡ್ ಒಂದೇ ರೂಮಿನಲ್ಲಿ ಇರಬೇಕಾದರೆ ಅವರ ಖಾಸಗಿ ವಿಡಿಯೋವನ್ನು ಪಕ್ಕದ ಮನೆಯ ಕಿಟಕಿಯಿಂದ ರೆಕಾರ್ಡ್ ಮಾಡಿ..
ಅದನ್ನು ನಮ್ಮ ಸಂಬಂಧಿಕರಿಗೆಲ್ಲ ತೋರಿಸಿಕೊಂಡು ಮಗಳ ಕುರಿತು ಕೆಟ್ಟದಾಗಿ ಹೇಳಿಕೊಂಡು ಬಂದಿದ್ದ. ಈ ವಿಷಯ ತಿಳಿದೊಡನೆ ನಾನು ಅವನಿಂದ ಸಂಪೂರ್ಣ ದೂರವಾದೆ ಎಂದು ಸಾನಿಯಾ ತಾಯಿ ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡರು.