ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಈಗ ದೇಶದಾದ್ಯಂತ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಕೂಡ ಬೇಡಿಕೆ ಇರುವ ನಟಿ. ಕಿರಿಕ್ ಪಾರ್ಟಿ ಎನ್ನುವ ಕನ್ನಡ ಸಿನಿಮಾಗದಿಂದ ಶುರುವಾದ ಈಕೆಯ ಅದೃಷ್ಟದ ಜರ್ನಿ ಈಗ ಬಾಲಿವುಡ್ ಅಂಗಳದಲ್ಲಿ ಮಿಂಚುವ ಮಟ್ಟಕ್ಕೆ ತಲುಪಿದೆ. ವರ್ಷಕ್ಕೆ ಸಾಲು ಸಾಲು ಈಕೆಯ ಅಭಿನಯದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದು ಅದೃಷ್ಟದ ಆಟವಾಗಿದ್ದರೂ ಕೂಡ ಆಕೆಯೂ ಸಹ ತನ್ನ ಪರಿಶ್ರಮವನ್ನು ಇದರಲ್ಲಿ ಹಾಕಿರದ್ದಿದ್ದರೆ ಆ ಅದೃಷ್ಟವನ್ನು ಇಲ್ಲಿಯತನಕ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ.
ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟು ಕಾಂಪಿಟೇಶನ್ ಇದೆ ಅಂದರೆ ಸಂಭಾವನೆ ಇಲ್ಲದೆ ಅವಕಾಶ ಸಿಕ್ಕರು ಸಾಕು ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂದು ಸಾಕಷ್ಟು ನ್ಯೂ ಫೇಸ್ ಗಳು ಕಾಯುತ್ತಿದ್ದಾರೆ. ಇದಲ್ಲೆದರ ನಡುವೆ ಫೇಮಸ್ ಆಗಿರುವವರು ತಮ್ಮ ಮಾರ್ಕೆಟ್ ಅನ್ನು ಹಾಗೆ ಉಳಿಸಿಕೊಳ್ಳಬೇಕು ಎಂದರೆ ಅದಕ್ಕೆ ತಕ್ಕನಾದ ಶ್ರಮ ಹಾಕಲೇಬೇಕು, ಅದೇ ಪ್ರಯತ್ನದಲ್ಲಿದ್ದಾರೆ ರಶ್ಮಿಕಾ ಮಂದಣ್ಣ.
ಅಭಿನಯದ ವಿಷಯದಲ್ಲಿ ಈಕೆ ತಾನೇನು ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಹಾಗಾಗಿ ಎಲ್ಲ ಸಿನಿಮಾಗಳು ಚೆನ್ನಾಗಿ ಕಲೆಕ್ಷನ್ ಮಾಡುತ್ತಿವೆ. ಅದನ್ನು ಬಿಟ್ಟು ಲುಕ್ ವೈಸ್ ಕೂಡ ಈಕೆ ಬಾರಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಮೊದಮೊದಲಿಗೆ ಸಾಂಪ್ರದಾಯಕ ಹುಡುಗಿ ಆಗಿದ್ದ ಲುಕ್ ಈಗ ಫ್ಯಾಶನ್ ಮಾಡುವ ಮಾಡನ್ ಗರ್ಲ್ ಆಗಿ ಕೂಡ ಬದಲಾಗಿದ್ದಾರೆ.
ಜೊತೆಗೆ ತನ್ನ ಫಿಜಿಕ್ಸ್ ಹಾಗೆ ಮೇನ್ಟೇನ್ ಮಾಡುವ ಸಲುವಾಗಿ ಜಿಮ್ಗಳಲ್ಲಿ ಲೀಟರ್ಗಟ್ಟಲೇ ಬೆವರಿಸುತ್ತಿದ್ದಾರೆ ರಶ್ಮಿಕಾ. ತಾವು ಮಾಡುವ ವರ್ಕೌಟ್ ಡೀಟೇಲ್ಸ್ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸಾಮಾನ್ಯರಿಗೂ ಕೂಡ ವರ್ಕೌಟ್ ಮಾಡಿ ಬಾಡಿ ಮೆಂಟೇನ್ ಮಾಡುವ ಬಗ್ಗೆ ಮೋಟಿವೇಟ್ ಮಾಡುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈಕೆ ವರ್ಕೌಟ್ ಮಾಡಿರುವ ಹಲವು ವಿಡಿಯೋಗಳು ವೈರಲ್ ಆಗಿವೆ.
ಆಕ್ಟರ್ಸ್ ವಿವ್ಯೂ ಎನ್ನುವ ಯುಟ್ಯೂಬ್ ಚಾನೆಲ್ ಸಹ ಎಲ್ಲ ನಟಿಮಣಿಯರ ದಿನನಿತ್ಯ ಚಟುವಟಿಕೆಗಳನ್ನು, ಅವರ ವರ್ಕೌಟ್ ಕ್ಷಣಗಳನ್ನು ಸೆರೆಹಿಡಿದು ವಿಡಿಯೋ ಮಾಡಿ ಹರಿಬಿಟ್ಟಿದೆ. ಹಾಗೆ ರಶ್ಮಿಕಾ ಅವರದ್ದು ಸಹ ಇದನ್ನು ನೋಡಿ ರಶ್ಮಿಕ ಎಷ್ಟು ಕಷ್ಟಪಡುತ್ತಿದ್ದಾರೆ ಎಂದು ಎಲ್ಲ ಹುಬ್ಬೇರಿಸುತ್ತಿದ್ದಾರೆ.
ವರ್ಕೌಟ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಹಾಗೆ ಒಬ್ಬ ನಟಿ ಮಣಿ ತನ್ನ ಸೌಂದರ್ಯವನ್ನು ಹಾಗೆ ಕಾಪಾಡಿಕೊಳ್ಳಲು ಅದು ಬಹಳ ಮುಖ್ಯ. ಜಿಮ್ ಇನ್ಸ್ಟ್ರಕ್ಷನ್ಗಳು ಕೊಡುತ್ತಿರುವ ಸೂಚನೆಯ ಪ್ರಕಾರ ರಶ್ಮಿಕ ಮಂದಣ್ಣ ಅಖಾಡದಲ್ಲಿ ಹಿಡಿದು ಭಾರಿ ಶ್ರಮ ಹಾಕಿ ಎಲ್ಲಾ ರೀತಿಯ ವರ್ಕೌಟ್ಗಳನ್ನು ಕೂಡ ಮಾಡುತ್ತಿದ್ದಾರೆ. ರಶ್ಮಿಕ ಮಂದಣ್ಣ ಸಮಯ ಸಿಕ್ಕಾಗಲ್ಲ ಈ ರೀತಿ ತಪ್ಪದೇ ವರ್ಕೌಟ್ ಗಾಗಿ ಜಿಮ್ಗಳಿಗೆ ಹೋಗಿ ಹೋಗುತ್ತಾರೆ.
ಸಾಧ್ಯವಾಗದೆ ಬ್ಯುಸಿ ಇದ್ದಾಗ ತನ್ನ ಮನೆಯಲ್ಲಿ ಇರುವ ಹೋಂ ಜಿಮ್ ಅಲ್ಲೇ ತಾಲೀಮು ಮಾಡುತ್ತಾರೆ. ಈಗಿನ ಯುವಜನತೆ ಜಿಮ್ ಅಲ್ಲಿ ವರ್ಕೌಟ್ ಮಾಡುವುದರ ಬಗ್ಗೆ ಸಾಕಷ್ಟು ಕ್ರೇಜ್ ಹೊಂದಿದ್ದಾರೆ. ಈ ರೀತಿ ಜಿಮ್ ಗಳಿಗೆ ಹೋಗಿ ಬೆವರಳಿಸುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ ಎನ್ನುವುದರ ಜೊತೆಗೆ ನಾವು ಒಂದೊಳ್ಳೆ ಲುಕ್ ಅನ್ನು ಪಡೆಯುತ್ತೇವೆ ಎನ್ನುವ ನಂಬಿಕೆ, ಅದು ನಿಜವು ಕೂಡ.
ರಶ್ಮಿಕ ಮಂದಣ್ಣ ಅವರ ಈ ವಿಡಿಯೋಗಳನ್ನು ನೋಡಿ ಇನ್ನಷ್ಟು ಜನ ಜಿಮ್ ಅಂತ ಓಡಿದರೆ ಅದು ಆಶ್ಚರ್ಯವಿಲ್ಲ. ನೀವು ಸಹ ರಶ್ಮಿಕ ಮಂದಣ್ಣ ಕಷ್ಟಪಟ್ಟು ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ನೋಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.