raghu

ಮಜಾ ಭಾರತ ಖ್ಯಾತಿಯ ರಾಘವೇಂದ್ರ ಅಲಿಯಾಸ್ ರಾಗಿಣಿ ಅವರ ಬ್ಲೌಸ್ ಹೊಲಿದು ಕೊಡೋದು ಯಾರಂತೆ ಗೊತ್ತಾ? ಆಶ್ಚರ್ಯ ಆಗೋದು ಖಂಡಿತ ನೋಡಿ!!

Entertainment/ಮನರಂಜನೆ

ಹಾಸ್ಯ ಕಲಾವಿದ ರಾಘವೇಂದ್ರ ಅವರ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಯಾಕೆಂದರೆ ರಾಘವೇಂದ್ರ ರಾಗಿಣಿಯಾಗಿ ಈಗಾಗಲೇ ಕಿರುತೆರೆ ಲೋಕದಲ್ಲಿ ಸಾಕಷ್ಟು ಮಿಂಚಿದ್ದಾರೆ. ಈಗಲೂ ರಾಘವೇಂದ್ರ ಅಂದ್ರೆ ಯಾರು ಎನ್ನುವ ವಿಷಯ ಹಲವರಿಗೆ ಗೊತ್ತಿಲ್ಲ, ಅದೇ ರಾಗಿಣಿ ಯಾರು ಅಂತ ಕೇಳಿದ್ರೆ ಅವರ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಮಜಾ ಭಾರತ ಶೋ ಮೂಲಕ ಗುರುತಿಸಿಕೊಂಡ ಅತ್ಯದ್ಭುತ ಹಾಸ್ಯ ಕಲಾವಿದ ರಾಘವೇಂದ್ರ ಅವರು.

ರಾಘವೇಂದ್ರ ಅವರ ತಂದೆ ರಾಮಕೃಷ್ಣ, ತಾಯಿ ಕವಿತಾ. ತಂದೆಯದು ಸಣ್ಣ ಕಿರಾಣಿ ಅಂಗಡಿ ಇನ್ನು ಅಮ್ಮ ಟೈಲರಿಂಗ್ ಮಾಡುತ್ತಾರೆ. 10ನೇ ತರಗತಿಯಲ್ಲಿ ಶೇಕಡ 85% ಪಡೆದಿದ್ದ ರಾಘವೇಂದ್ರ ಅವರ ಅಭಿರುಚಿ ಮಾತ್ರ ನಟನೆಯ ಕಡೆಗೆ ಇತ್ತು. ಇಷ್ಟು ಉತ್ತಮ ಅಂಕ ಪಡೆದುಕೊಂಡಿದ್ದೀಯಾ ಇದೆಲ್ಲಾ ಯಾಕೆ ಬೇಕು ಅಂತ ಮನೆಯವರು ಕೇಳಿದರೂ ರಾಘವೇಂದ್ರ ಮಾತ್ರ ನಾನು ನಟನೆಗೆ ಹೋಗಲೇಬೇಕು ಅಂತ ಹೇಳುತ್ತಾರೆ. ಅದಕ್ಕೆ ರಾಘವೇಂದ್ರ ಅವರ ಮನೆಯವರ ಬೆಂಬಲ ಸಿಗುತ್ತೆ.

ನಂತರ ಮಜಾ ಭಾರತ ಕಾರ್ಯಕ್ರಮಕ್ಕೆ ಆಡಿಶನ್ ಕೊಡುತ್ತಾರೆ ರಾಘವೇಂದ್ರ. ಸುಮಾರು 200 ಜನ ಆಡಿಶನ್ ಕೊಟ್ಟವರ ಪೈಕಿ ರಾಘವೇಂದ್ರ ಕೂಡ ಒಬ್ಬರು. ಆಡಿಶನ್ ಕೊಟ್ಟು ಎಷ್ಟು ದಿನವಾದರೂ ರಾಘವೇಂದ್ರ ಅವರಿಗೆ ಸೆಲೆಕ್ಟ್ ಆಗಿರುವುದರ ಬಗ್ಗೆ ಯಾವುದೇ ಕರೆಯು ಬರುವುದಿಲ್ಲ ಮಜಾ ಭಾರತ ಪ್ರೋಮೋ ಕೂಡ ವಾಹಿನಿಯಲ್ಲಿ ಶುರುವಾದರೂ ರಾಘವೇಂದ್ರ ಅವರಿಗೆ ಮಾತ್ರ ಮಜಾ ಭಾರತಕ್ಕೆ ಸೆಲೆಕ್ಟ್ ಆಗಿದ್ದೀರಿ ಅಂತ ಹೇಳುವುದೇ ಇಲ್ಲ. ಕೊನೆಗೆ ನನಗೆ ಬಹುಶಃಅ ಅವಕಾಶ ಸಿಗೋದಿಲ್ಲ ಅಂತ ನೊಂದುಕೊಂಡಿದ್ದ ರಾಘವೇಂದ್ರ ಅವರಿಗೆ ಮರುದಿನವೇ ಶಾಕಿಂಗ್ ಸುದ್ದಿ ಯೊಂದು ಕಾದಿತ್ತು.

ಹೌದು. ಇಂದು ಅತ್ಯುತ್ತಮ ಹಾಸ್ಯ ನಟ ಎನಿಸಿಕೊಂಡಿರುವ ರಾಘವೇಂದ್ರ ಆಡಿಷನ್ ಕೊಟ್ಟು ಕಾದಿರುವ ಪರಿ ಹಾಗೂ ಆ ಸಮಯದ ಆತಂಕವನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ‘ಮಜಾ ಭಾರತಕ್ಕೆ ಎಲ್ಲರೂ ಸೆಲೆಕ್ಟ್ ಆಗಿದ್ದಾರೆ ಆಯ್ತು ಇನ್ನು ನನಗೆ ಅವಕಾಶ ಸಿಗುವುದಿಲ್ಲ ಅಂತ ಬೇಸರದಲ್ಲಿ ಮಲಗಿದ್ದ ನನಗೆ ಒಂದು ಶಾಕಿಂಗ್ ಸುದ್ದಿ ಕಾದಿತ್ತು. ವಾಹಿನಿಯವರು ಮರುದಿನವೇ ಕರೆ ಮಾಡಿ ನೀವು ಮಜಾ ಭಾರತಕ್ಕೆ ಸೆಲೆಕ್ಟ್ ಆಗಿದ್ದೀರಿ ನಾಲ್ಕು ತಿಂಗಳುಗಳ ಕಾಲ ಇಲ್ಲೆ ಇರಬೇಕು.

ಬಟ್ಟೆ ಎಲ್ಲವನ್ನು ತಂದು ಬಿಡಿ’ ಅಂತ ಕಾಲ್ ಮಾಡಿ ಹೇಳಿದ್ರು. ಮಜಾ ಭಾರತಕ್ಕೆ ಬರುವಾಗ ರಾಘವೇಂದ್ರ ಅವರಿಗೆ ಕೇವಲ 17 ವರ್ಷ ವಯಸ್ಸು. ಮಜಾ ಭಾರತದಲ್ಲಿ ಮೊದಲನೆಯದಾಗಿ ನೀಲಿ ಸೀರೆ ಉಟ್ಟು ಪಕ್ಕದ ಮನೆಯ ಪ್ರಸಾದ ಎನ್ನುವ ಸ್ಕಿಟ್ ಮಾಡಿದ್ರು ರಾಘವೇಂದ್ರ. ಸೀರೆಯುಟ್ಟು ಅತ್ಯಂತ ಮುದ್ದಾಗಿ ಕಾಣುತ್ತಿದ್ದ ರಾಘವೇಂದ್ರ ಅಲ್ಲಿಂದಲೇ ರಾಗಿಣಿ ಲೈಫ್ ಆರಂಭಿಸಿದ್ರು.

PhotoGrid Site 1660878953086

ಅಂದಹಾಗೆ ರಾಗಿಣಿಯಾಗಿ, ಯಾವ ಹೆಣ್ಣು ಮಕ್ಕಳಿಗೂ ಕಮ್ಮಿ ಇಲ್ಲದ ಹಾಗೆ ಡ್ರೆಸ್ ಮಾಡಿಕೊಳ್ಳುತ್ತಾರೆ ರಾಘವೇಂದ್ರ ಅಷ್ಟೇ ಅಲ್ಲ ಅವರು ಉಡುವ ಸೀರೆ ಬ್ಲೌಸ್ ಎಲ್ಲವೂ ಬಹಳ ಆಕರ್ಷಣೀಯವಾಗಿರುತ್ತೆ. ಇನ್ನು ರಾಘವೇಂದ್ರ ಅವರ ರಾಗಿಣಿ ಪಾತ್ರಕ್ಕೆ ಬ್ಲೌಸ್ ಹೊಲಿದು ಕೊಡೋದು ಯಾರು ಗೊತ್ತಾ? ರಾಘವೇಂದ್ರ ಅವರ ತಾಯಿ ಕವಿತಾ ಅವರು. ಹೌದು ರಾಘವೇಂದ್ರ ಅವರಿಗೆ ರಾಗಿಣಿ ಪಾತ್ರಕ್ಕೆ ಬೇಕಾದ ಎಲ್ಲಾ ಬ್ಲೌಸ್ ಗಳನ್ನು ಅವರ ತಾಯಿಯೇ ಹೊಲಿದು ಕೊಡುತ್ತಾರಂತೆ. ಹಾಗಾಗಿ ಅಷ್ಟು ಆಕರ್ಷಣೀಯವಾಗಿಯೂ ಇರುತ್ತೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...