ನಟಿ ಪ್ರೇಮ

ಎರಡನೇ ಮದುವೆಗೆ ಸಿದ್ಧವಾದ ನಟಿ ಪ್ರೇಮ,ಹುಡುಗ ಯಾರು ಗೊತ್ತ…?

CINEMA/ಸಿನಿಮಾ

ಓಂ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರಕ್ಕೆ ಪರಿಚಿತರಾದ ಪ್ರೇಮ ಅವರು ಓಂ ಸಿನಿಮಾಗೂ ಮುನ್ನವೇ ಶಿವರಾಜ್ ಕುಮಾರ್ ಅವರ ಜೊತೆ ಸವ್ಯಸಾಚಿ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಅದರ ಕೂಡ ಇವರಿಗೆ ಉಪೇಂದ್ರ ನಿರ್ದೇಶನದ ಓಂ ಸಿನಿಮಾವು ಕನ್ನಡ ಚಲನಚಿತ್ರಕ್ಕೆ ಒಬ್ಬ ಭರವಸೆಯ ನಾಯಕಿ ಸಿಕ್ಕರು ಎನ್ನುವ ಪಟ್ಟ ಗಿಟ್ಟಿಸಿಕೊಟ್ಟಿತ್ತು. ಇದಾದ ನಂತರ ನಟಿ ಪ್ರೇಮ ಅವರು ನಟಿಸಿದ ಒಂದೊಂದು ಸಿನಿಮಾವು ಕೂಡ ತುಂಬಾ ಹೆಸರು ಗಳಿಸಿತು. 1994 ರಿಂದ 2004 ರವರೆಗೆ ಕನ್ನಡ ಸಿನಿಮಾ ರಂಗವನ್ನು ಆಳಿದ ನಟಿಯ ಹೆಸರಿನಲ್ಲಿ ಪ್ರೇಮ ಅವರ ಹೆಸರು ಕೂಡ ಕೇಳಿ ಬರುತ್ತದೆ. ಆ ದಿನಗಳಲ್ಲಿ ಬಹಳ ಬೇಡಿಕೆ ನಟಿ ಆಗಿದ್ದ ಪ್ರೇಮ ಅವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಕೂಡ ಗುರುತಿಸಿಕೊಂಡಿದ್ದರು.

ನಮ್ಮೂರ ಮಂದಾರ ಹೂವೆ, ಚಂದ್ರೋದಯ, ಕೌರವ, ಚಂದ್ರಮುಖಿ ಪ್ರಾಣಸಖಿ, ಯಜಮಾನ, ಜಮೀನ್ದಾರರು, ಕನಸುಗಾರ, ನಾನು ನನ್ನ ಹೆಂಡ್ತೀರು, ಆಪ್ತಮಿತ್ರ, ಏಕದಂತ, ಅಂಜಲಿ ಗೀತಾಂಜಲಿ, ನನ್ನವಳು ನನ್ನವಳು, ಉಪೇಂದ್ರ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ನಟಿ ಪ್ರೇಮ ಅವರ ವೈಯುಕ್ತಿಕ ಬದುಕು ಮಾತ್ರ ಅಷ್ಟೊಂದು ಹಿತಕರವಾಗಿಲ್ಲ ಎನ್ನುವುದೇ ಬೇಸರದ ವಿಷಯ.

Prema: ಪ್ರೇಮಾರ ಎರಡನೇ ಮದುವೆ ಸುದ್ದಿ: ಸ್ಪಷ್ಟನೆ ಕೊಟ್ಟ ನಟಿ..!

ತಮ್ಮ ವೃತ್ತಿರಂಗದ ಉತ್ತುಂಗದಲ್ಲಿ ಇದ್ದಾಗಲೇ ಇನ್ನು ಮೇಲೆ ಸಿನಿಮಾದಲ್ಲಿ ಅಭಿನಯಿಸುವುದಿಲ್ಲ ಎನ್ನುವ ಹೇಳಿಕೆ ಕೊಟ್ಟು ತಂದೆ ತಾಯಿಯ ಒತ್ತಾಯದ ಮೇರೆಗೆ 2004ರಲ್ಲಿ ಜೀವನ್ ಎನ್ನುವವರ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟ ನಟಿ ಪ್ರೇಮ ಅವರ ವಿವಾಹ ಜೀವನವು ಬಹಳ ದಿನಗಳ ಕಾಲ ಸಂತೋಷವಾಗಿ ಉಳಿಯಲಿಲ್ಲ. ಈ ಬಗ್ಗೆ ಅವರೇ ಹೇಳಿಕೆ ನೀಡಿರುವ ಪ್ರೇಮ ಅವರು ಕಳೆದ ಹತ್ತು ವರ್ಷಗಳಿಂದ ಪತಿಯಿಂದ ಬೇರೆಯಾಗಿ ತಂದೆ ತಾಯಿಯ ಜೊತೆ ವಾಸಿಸುತ್ತಿದ್ದಾರಂತೆ.

ಇಬ್ಬರು ಬೇರೆಬೇರೆ ವ್ಯಕ್ತಿತ್ವದ ಗುಣವನ್ನು ಹೊಂದಿರುವುದರಿಂದ ಇಬ್ಬರಲ್ಲೂ ಹೊಂದಾಣಿಕೆ ಮೂಡದೆ ಇವರಿಬ್ಬರು ಬೇರೆಯಾಗಿದ್ದಾರೆ. ಆದರೆ ಇದಾದ ಬಳಿಕ ನಟಿ ಪ್ರೇಮ ಅವರಿಗೆ ಕ್ಯಾನ್ಸರ್ ಆಗಿದೆ ಅವರು ಟ್ರೀಟ್ಮೆಂಟ್ ಗಾಗಿ ಯಾವುದೋ ದೇಶಕ್ಕೆ ಹೋಗಿದ್ದಾರೆ ಎಂದು ಹಾಗೂ ಮತ್ತೊಂದು ಸಲ ನಟಿ ಪ್ರೇಮ ಅವರು ವಿವಾಹ ಜೀವನದ ಬೇಸರದಿಂದ ಕುಟುಂಬವನ್ನು ತ್ಯಜಿಸಿ ಆಶ್ರಮ ಸೇರಿದ್ದಾರೆ ಎನ್ನುವ ರೀತಿಯ ಗಾಳಿ ಸುದ್ದಿಗಳು ಕೂಡ ಹಬ್ಬಿದವು. ಇದರಿಂದ ತೀರ ಬೇಸರಗೊಂಡಿದ್ದ ಪ್ರೇಮ ಅವರು ಒಮ್ಮೆ ಈ ಸುಳ್ಳು ವದಂತಿಗಳ ಬಗ್ಗೆ ಮಾಧ್ಯಮಗಳ ಜೊತೆ ಹೇಳಿಕೊಂಡು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ಈಗ ಬಹಳ ವರ್ಷಗಳಿಗ ಬಳಿಕ ಉಪೇಂದ್ರ ಮತ್ತೆ ಬಾ ಎನ್ನುವ ಸಿನಿಮಾದ ಮೂಲಕ ಮತ್ತೆ ಪ್ರೇಮ ಅವರು ಬಣ್ಣ ಹಚ್ಚಲು ಶುರು ಮಾಡಿದ್ದಾರೆ.

Prema: ಪ್ರೇಮಾರ ಎರಡನೇ ಮದುವೆ ಸುದ್ದಿ: ಸ್ಪಷ್ಟನೆ ಕೊಟ್ಟ ನಟಿ..!

ಈಗೀಗ ಮತ್ತೆ ಮೊದಲಿನಂತೆ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿರುವ ನಟಿ ಪ್ರೇಮ ಅವರನ್ನು ಮಾಧ್ಯಮದ ವರದಿಗಾರರೊಬ್ಬರು ಇನ್ನೊಂದು ಮದುವೆ ಆಗುವ ಬಗ್ಗೆ ಪ್ರಶ್ನೆ ಮಾಡಿದಾಗ ಇಲ್ಲಿಯವರೆಗೂ ನನಗೆ ಆ ರೀತಿ ಯೋಚನೆ ಮೂಡಿಲ್ಲ ಆದರೆ ಆದರೂ ಆಗಬಹುದು. ಏನಾದರೂ ನಾನು ಮತ್ತೆ ಮದುವೆ ಆಗುವುದಾದರೆ ನನ್ನ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಒಳ್ಳೆಯ ಮನಸ್ಸು ಇರುವ ವ್ಯಕ್ತಿ ಜೊತೆಗಾರರಾಗಿ ಸಿಕ್ಕರೆ ಅಷ್ಟೇ ಸಾಕು ಎಂದು ಹೇಳಿಕೊಂಡಿದ್ದಾರೆ. ಅವರ ಈ ಮಾತನ್ನು ಕೇಳಿ ಅಭಿಮಾನಿಗಳು ಪ್ರೇಮಾ ಅವರಿಗೆ ಅವರ ನಿರೀಕ್ಷೆಯ ಹುಡುಗ ಸಿಕ್ಕಿ ಬೇಗ ಮದುವೆ ಆದರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಪ್ರೇಮ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು,
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...