ಮುಚ್ಚುಮರೆ ಇಲ್ಲದೆ ಕುಟುಂಬದ ಖಾಸಗಿ ವಿಷಯ ತಿಳಿಸಿದ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಶಾಯಿ

ಸ್ಯಾಂಡಲ್‌ವುಡ್‌ನ (Sandalwood) ಹಿರಿಯ ನಟ ಸುಂದರ್ ರಾಜ್ (Sundar Raj) ಅವರದ್ದು ಕಲಾವಿದರ ಕುಟುಂಬ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಟಕ ಕ್ಷೇತ್ರದಲ್ಲಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಬಂದು ಪ್ರಸಿದ್ದಿ ‌ಪಡೆದವರು, ನಟಿ ಮೇಘನಾ (Meghana Raj) ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಆಡಿ ಬೆಳೆದವರು. ಇವರ ತಂದೆ ತಾಯಿಯರು ಪ್ರಮೀಳಾ ಜೋಷಾಯ್ ಮತ್ತು ಸುಂದರ್ ರಾಜ್ ಇಬ್ಬರು ಕೂಡ 4 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಸ್ಯಾಂಡಲ್ ವುಡ್ ಗೆ ಸೇವೆ ಸಲ್ಲಿಸಿದ್ದಾರೆ.

ತನ್ನ ಗಂಡನಿಗೆ ಕೋಪ ಜಾಸ್ತಿ ಎಂದ ನಟಿ

ಸುಂದರ್ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಮತ್ತು ಪ್ರತಿಭಾನ್ವಿತ ನಟ. ಇವರ ಪತ್ನಿ ಪ್ರಮೀಳಾ ಜೋಷಾಯಿ ಮತ್ತು ಪುತ್ರಿ ಮೇಘನಾ ರಾಜ್ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ . ತಮಿಳುನಾಡು ಮೂಲದ ಇವರು ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ ತಂಡದಲ್ಲಿದ್ದರು. ನಂತರ ಚಿತ್ರರಂಗ ಪ್ರವೇಶಿಸಿದ ಇವರು ಕಾಡು , ಪಲ್ಲವಿ ಅನುಪಲ್ಲವಿ ,ಇಮ್ಮಡಿ ಪುಲಕೇಶಿ ವಿಜಯ ಕ್ರಾಂತಿ ಮುಂತಾದ ಚಿತ್ರಗಳಲ್ಲಿ ನಟಿಸಿದರು, ಪ್ರಮೀಳಾ ಜೋಷಾಯಿ ಅವರಿಗೆ ಗಂಡನ ಗುಣ ಬದಲಾಯಿಸುದಾದರೆ ಏನು ಹೇಳುತ್ತೀರಿ ಅಂದಾಗ ಮೂಗಿನ ಮೇಲೆ ಸದಾ ಸಿಟ್ಟು ,ಈ ಸಿಟ್ಟನ್ನು ಬದಲಾಯಿಸಬೇಕು.

ಯಾಕೆ ಸಿಟ್ಟು ಮಾಡಿಕೊಳ್ಳುತ್ತಾರೆ ಗೊತ್ತಿಲ್ಲ. ಏನೋ ಹೇಳಿ ಅವರಿಗೆ ಇಷ್ಟ ಆಗಿಲ್ಲ ಅಂದ್ರೆ ಅಲ್ಲೇ ಸಿಟ್ಟು ಮಾಡಿಕೊಂಡು ಹೇಳುತ್ತಾರೆ ಅದನ್ನು ಬದಲಾಯಿಸಬೇಕು. ಒಳ್ಳೆ ಗುಣ ಏನೆಂದರೆ ಅ ಕೋಪದಿಂದ ಬೇಗ ಹೊರ ಬರುತ್ತಾರೆ. ನಾನು ಕೋಪ ಮಾಡಿಕೊಂಡರೆ ಅದೇ ಕೋಪದಲ್ಲಿ ದಿನ ಇರುತ್ತೇನೆ ಅಂದಿದ್ದಾರೆ.

ಮೇಘನಾಗೆ ಸಪೋರ್ಟ್ ವ್ ಆಗಿ ಇರುವ ಪ್ರಮೀಳಾ ಜೋಷಾಯ್

ಮೇಘನಾ ರಾಜ್‌ ಪಾಲಕರಾದ ಸುಂದರ್‌ ರಾಜ್‌ ಮತ್ತು ಪ್ರಮೀಳಾ ಜೋಷಾಯ್‌ ಮೇಘಾನಗೆ ಪ್ರತಿವಿಚಾರದಲ್ಲೂ ಸಪೊರ್ಟ್ ಇದ್ದಾರೆ, ಮೇಘನಾ ರಾಜ್, ಚಿರಂಜೀವಿ ಅವರನ್ನು ಪ್ರೀತಿ ಮಾಡಿದಾಗ, ಎರಡು ಕುಟುಂಬಗಳು ಮುಂದೆ ನಿಂತು ಖುಷಿಯಿಂದ ಮದುವೆ ಮಾಡಿದ್ರು. ಅಂದಿನಿಂದ ಮೇಘನಾ, ಚಿರು ಸಹ ಸಂತೋಷದಿಂದ ಇದ್ರು.‌‌

ಅದ್ರೆ ಚಿರುವಿನ ಅಕಾಲಿಕ ಮರಣ ಮೇಘನಾ ಬದುಕು ಬದಲಾಯಿತು, ‌‌ ಮೇಘಾನ ವಿಚಾರಕ್ಕೆ ಎಂದಿಗೂ ಇವರು ಒತ್ತು ನೀಡಿ ಸಪೋರ್ಟ್ ಮಾಡುತ್ತಾರೆ, ‌ ಕುಟುಂಬದಲ್ಲಿ ಎಲ್ಲರೂ ಕಲಾವಿದರೇ ಇದ್ದು ಮೇಘನಾ , ಶಕ್ತಿ ಪ್ರಸಾದ್, ಅರ್ಜುನ್ ಸರ್ಜಾ, ಚಿರು, ಧ್ರುವ ಸರ್ಜಾ ಹೀಗೆ ಎಲ್ಲರೂ ಕಲಾವಿದರೆ ಎಂದು ಪ್ರಮೀಳಾ ಜೊಶಾಯಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

You might also like

Comments are closed.