nitya-ram-life-spoiled

ಮೊದಲ ಗಂಡನಿಂದ ಜೀವನ ಹಾಳಾಯ್ತ ರಚ್ಚು ಅಕ್ಕ ನಿತ್ಯಾ ರಾಮ ಜೀವನ..? ಅಸಲಿಗೆ ಆಗಿದ್ದೇನು

Entertainment/ಮನರಂಜನೆ

ನಿತ್ಯಾ ರಾಮ್ ಒಬ್ಬ ಭಾರತೀಯ ನಟಿ ಮತ್ತು ರೂಪದರ್ಶಿ, ಇವರು ಮುಖ್ಯವಾಗಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಟಿವಿ ಧಾರಾವಾಹಿ ಉದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. 31 ಜನವರಿ 1988 ರಂದು ಕರ್ನಾಟಕದ ತುಮಕೂರಿನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ನಿತ್ಯಾ ರಾಮ್ ಜನಿಸಿದರು.  ತಂದೆಯ ಹೆಸರು ಕೆ.ಎಸ್. ರಾಮು. ಇವರು ವೃತ್ತಿಪರ ಶಾಸ್ತ್ರೀಯ ನೃತ್ಯಗಾರ ಆಗಿದ್ದರು. ತರಬೇತಿ ಪಡೆದ ಭರತ ನಾಟ್ಯಂ ನೃತ್ಯಗಾರ್ತಿ ಸಹ ಹೌದು ಇವರು. ನಿತ್ಯಾ ರಾಮ್ ಅವರಿಗೆ ಒಬ್ಬ ಮುಂದಾದ ತಂಗಿ ಇದ್ದು ಅದುವೇ ನಮ್ಮ ರಚು ಡಿಂಪಲ್ ಕ್ವೀನ್ ರಚಿತಾ ರಾಮ್.
2010 ರಲ್ಲಿ ಕನ್ನಡ ಧಾರಾವಾಹಿ ಬೆಂಕಿಯಲ್ಲಿ ಅರಳಿದ ಹೂವು ಮೂಲಕ ನಿತ್ಯಾ ತನ್ನ ಮೊದಲ ನಟನೆಯನ್ನು ಮಾಡಿದರು. ನಂತರ ರಾಜಕುಮಾರಿ, ಎರಡು ಕನಸು, ಹಾಗೆ ತಮಿಳು ತೆಲುಗಿನಲ್ಲಿಯೂ ಸಹ ಕೆಲ ಸೀರಿಯಲ್ ಮೂಲಕ ಮಿಂಚಿದ್ದರು. ಇವರ ನಂದಿನಿ ಸೀರಿಯಲ್ ದೊಡ್ಡ ಯಶಸ್ಸು ಕಂಡಿತ್ತು.

ಹೌದು, ನಿತ್ಯಾ ರಾಮ್ ಅವರು ತಂಗಿ ರಚಿತಾ ರಾಮ್ ಅವರಷ್ಟೇ ತುಂಬಾನೇ ಹೆಸರು ಮಾಡಬೇಕಿತ್ತು, ಆದರೆ ಅವರಿಗೆ ಸಮಯ ಸಾತ್ ಕೊಡಲಿಲ್ಲ… 2013ರಲ್ಲಿ ವಿನೋದ್ ಗೌಡ ಎಂಬುವವರ ಜೊತೆಗೆ ಮದುವೆ ಮಾಡಿಕೊಳ್ಳುತ್ತಾರೆ ನಿತ್ಯಾ ರಾಮ್. ಆದರೆ ಇವರಿಬ್ಬರ ದಾಂಪತ್ಯ ಜೀವನ ಹೇಳಿಕೊಳ್ಳುವ ಮಟ್ಟಿಗೆ ಇರಲಿಲ್ಲ. ಸಿನಿಮಾದಲ್ಲಿ ಹೆಸರು ಮಾಡಬೇಕು, ನಾನು ಕೂಡ ದೊಡ್ಡದಾಗಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸನ್ನು ನಿತ್ಯ ರಾಮ್ ಅವರು ಹೊಂದಿದ್ದರಂತೆ. ಆದರೆ ಆರಂಭದಲ್ಲಿ ಇದಕ್ಕೆಲ್ಲ ಒಪ್ಪಿಗೆ ನೀಡುತ್ತಿದ್ದ ಇವರ ಪತಿ, ವಿನೋದ್ ಗೌಡ, ನಂತರದಲ್ಲಿ ಹೋಗುತ್ತಾ ಹೋಗುತ್ತಾ ನೀನು ಮನೆಯಲ್ಲಿಯೇ ಇರು, ಯಾವ ಸಿನಿಮಾ ಬಣ್ಣದ ಲೋಕ ನಿನಗೆ ಬೇಡ ಎಂಬುದಾಗಿ ನಿತ್ಯಾ ಕನಸುಗಳನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದ್ದರಂತೆ.

ಇದನ್ನು ನೋಡಿ ನೋಡಿ ಬೇಸತ್ತು ನಿತ್ಯ ರಾಮ್ ಅವರು ನಾನು ಸಿನಿಮಾ ಶೂಟಿಂಗ್ ಗೆ ಹೋಗಿಯೆ ಹೋಗ್ತೇನೆ, ಸಿನಿಮಾದಲ್ಲಿ ದೊಡ್ಡ ಕನಸು ಹೊತ್ತಿದ್ದೇನೆ, ಅದನ್ನು ಯಶಸ್ವಿ ಮಾಡಿಕೊಂಡೇ ತಿರುತ್ತೇನೆ ಎಂದು ಗಂಡನ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದರು ನಿತ್ಯ ರಾಮ್ ಎಂದು ತಿಳಿದುಬಂದಿದೆ.. ನಟಿ ನಿತ್ಯಾ ರಾಮ್ ಅವರು ಗಂಡನ ಜೊತೆಗೆ ಜಗಳ ಆಗಾಗ ಆಗುತ್ತಿದ್ದನ್ನು ನೋಡಿ ಇದರಿಂದ ನಾನು ಹೊರಬರಬೇಕು ಎಂದು ಅವರಿಗೆ 2014ರಲ್ಲಿ ವಿಚ್ಛೇದನ ನೀಡುತ್ತಾರೆ. ನಂತರದಲ್ಲಿ ಸಿನಿಮಾದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಾರೆ ನಿತ್ಯಾ ರಾಮ್, ಆದ್ರೆ 2017-18 ಕಳೆಯುತ್ತಾ ಬಂದಂತೆ ಇವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತವೆ.

ಮತ್ತೆ ಸಿನಿಮಾದಲ್ಲಿ ಯಾವ ಹೆಸರು ಮಾಡಲು ಆಗದ ರೀತಿ ಇವರು ಕುಗ್ಗಿ ಹೋಗುತ್ತಾರೆ. ನಂತರ 2019ರಲ್ಲಿ ಗೌತಮ್ ಎಂಬ ಫ್ಯಾಮಿಲಿ ಫ್ರೆಂಡ್ ನ ಜೊತೆ ಎರಡನೇ ಮದುವೆ ಮಾಡಿಕೊಳ್ಳುತ್ತಾರೆ ನಿತ್ಯ ರಾಮ್. ನಂತರದಲ್ಲಿ ಆಗಿದ್ದೇನು, ಸಿನಿಮಾ ಕನಸನ್ನು ನಿತ್ಯ ರಾಮ್ ಯಾವ ರೀತಿ ಇಟ್ಟುಕೊಂಡಿದ್ದರು, ಈಗ ಆಸ್ಟ್ರೇಲಿಯಾದಲ್ಲಿ ಇವರು ತಮ್ಮ ಎರಡನೇ ಪತಿ ಜೊತೆ ಹೇಗಿದ್ದಾರೆ, ಇವರ ಮೊದಲ ಪತಿ ಇವರ ಕನಸಿಗೆ ಯಾವ ರೀತಿ ಅಡ್ಡಿ ಆದ್ರೂ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.