ಹೊಸ ನ್ಯಾಯಬೆಲೆ ಅಂಗಡಿ ಮಂಜುರಾತಿಗಾಗಿ ಅರ್ಜಿಗಳು ಆಹ್ವಾನ:ಅರ್ಜಿ ಸಲ್ಲಿಸಲು ಏಪ್ರಿಲ್ ಕೊನೆಯ ದಿನಾಂಕ

ಸರ್ಕಾರದ ಒಂದು ಪ್ರಮುಖ ಭಾಗವಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಲಕ್ಷಾಂತರ ಮಂದಿಯ ಹಸಿವನ್ನು ನೀಗಿಸುವ ಮತ್ತು ಸರ್ಕಾರದ ಸೇವೆ ಕೂಡ ಆಗಿರುವ ಈ ಕೆಲಸವನ್ನು ಮಾಡಲು ಸಾಕಷ್ಟು ಯುವಕರು ಉತ್ಸಾಹ ಹೊಂದಿದ್ದಾರೆ. ಆದರೆ ಅದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎನ್ನುವುದರ ಖಚಿತ ಮಾಹಿತಿ ಇಲ್ಲದೆ ವಿಫಲರಾಗಿದ್ದಾರೆ.

ಈ ರೀತಿ ನೀವು ಕೂಡ ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ಪಡೆದು ನಿಮ್ಮ ಊರಿನಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎನ್ನುವ ಇಚ್ಛೆ ಹೊಂದಿದ್ದರೆ ಈ ಉಪಯುಕ್ತ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ಈಗ ಸರ್ಕಾರ ಎಲ್ಲಿ ಮತ್ತು ಎಷ್ಟು ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಆದೇಶ ನೀಡಿದೆ ಎನ್ನುವುದನ್ನು ತಿಳಿದುಕೊಳ್ಳಿ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಈಗಾಗಲೇ ಅರ್ಜಿ ಸ್ವೀಕೃತಿ ಪ್ರಕ್ರಿಯೆ ಆರಂಭ ಆಗಿದ್ದು ಏಪ್ರಿಲ್ 1ನೇ ತಾರೀಕು ಇದಕ್ಕೆ ಅಂತಿಮ ಗಡುವಾಗಿದೆ. ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿ ವಿಷಯದ ಬಗ್ಗೆ ಆಸಕ್ತಿ ಹೊಂದಿದ್ದು, ಅರ್ಹ ಅಭ್ಯರ್ಥಿಗಳು ಕೂಡ ನೀವಾಗಿದ್ದರೆ ಇದಕ್ಕೆ ಸಂಬಂಧಪಟ್ಟ ಅರ್ಜಿಯನ್ನು ಪಡೆದುಕೊಂಡು ಅದನ್ನು ಭರ್ತಿ ಮಾಡbEku.

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆಸಕ್ತಿ ಇದೆಯೇ? –  ಇಲ್ಲಿಗೆ ಅರ್ಜಿ ಸಲ್ಲಿಸಿ – KANNADIGA WORLD

ನಂತರ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ಸಹಾಯಕ ನಿರ್ದೇಶಕರು, ಆನಾಸಾ ಪಡಿತರ ಪ್ರದೇಶ, ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಭವನ, ಗದಗ ಇಲ್ಲಿ ನಿಗದಿತ ನಮೂನೆ ಎ ಅಲ್ಲಿ ನಿಗದಿಪಡಿಸಿರುವ ಎಲ್ಲಾ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕಾಗಿದೆ. ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಹೊಸ ನ್ಯಾಯಬೆಲೆ ಅಂಗಡಿ ತೆಗೆಯಲು ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಪ್ರತಿಯನ್ನು ಗದಗದ ತಹಸಿಲ್ದಾರ್ ಕಛೇರಿಯಲ್ಲಿ ಪಡೆಯಬಹುದಾಗಿದೆ.

ನಂತರ ನಮೂನೆ ಎ ಅಲ್ಲಿ ನಿಗದಿಪಡಿಸಿರುವ ಎಲ್ಲಾ ದಾಖಲಾತಿಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಸಿದ್ಧಪಡಿಸಿಕೊಂಡು ಮೇಲೆ ತಿಳಿಸಿದ ವಿಳಾಸಕ್ಕೆ ಅರ್ಜಿ ಜೊತೆ ದಾಖಲೆಗಳನ್ನು ಲಗತಿಸಿ ಕೊಡಬೇಕಾಗಿರುತ್ತದೆ. ಈ ವಿಷಯದ ಕುರಿತಾಗಿ ಏನೇ ಗೊಂದಲಗಳಿದ್ದರೂ ಅಥವಾ ಮತ್ತಷ್ಟು ಮಾಹಿತಿ ಬೇಕಿದ್ದರೂ ತಪ್ಪದೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರ ಕಛೇರಿ ಅಥವಾ ಗದಗ ತಹಶಿಲ್ದಾರ್ ಕಚೇರಿಯನ್ನು ಅಭ್ಯರ್ಥಿಗಳು ಮತ್ತು ಆಸಕ್ತರು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಗದಗ ಜಿಲ್ಲೆಯ ಗಂಗಿಮಡಿ ಆಸುಪಾಸಿನ ಆಸಕ್ತ ಯುವಕರು ತಪ್ಪದೇ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ 24.1% ಮೀಸಲಾತಿ ನೀಡಬೇಕು ಎನ್ನುವ ಕೋರಿಕೆ ಇರುವುದರಿಂದ ಸಂಬಂಧಪಟ್ಟ ಇಲಾಖೆಯನ್ನು ಅಥವಾ ಕಚೇರಿಯನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡು ತಪ್ಪದೆ ಅರ್ಜಿ ಸಲ್ಲಿಸಿ.

ಆತ್ಮೀಯರೇ, ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸ ಬೇಕಾಗಿ ವಿನಂತಿ.

ಅಕ್ಕಿರಾಂಪುರದಲ್ಲಿ ಪಡಿತರ ವಿತರಣೆ ವಿಚಾರಕ್ಕೆ ಪ್ರಕ್ಷುಬ್ಧ ವಾತಾವರಣ!

ಯಾವ ಜಿಲ್ಲೆ ಯಾವ ತಾಲೂಕಿನ ಯಾವ ಗ್ರಾಮದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ?

ಗದಗ್ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಮಂಜುರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಅರ್ಜಿ ಸಲ್ಲಿಸಲು ಏಪ್ರಿಲ್ 1 ಕೊನೆಯ ದಿನಾಂಕವಾಗಿದೆ.

ಅರ್ಜಿಗಳನ್ನು ಹೇಗೆ ಸಲ್ಲಿಸಬೇಕು?

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಹಾಯಕ ನಿರ್ದೇಶಕರು, ಅನಾಸ್, ಪಡಿತರ ಪ್ರದೇಶ ಗದಗ , ನಮೂನೆ ಏ ರಲ್ಲಿ ನಿಗದಿಪಡಿಸಿರುವ ದಾಖಲೆಗಳನ್ನು ಆ ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಪಡಿತರ ಪ್ರದೇಶ ಅಥವಾ ಉಪನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಭವನ, ಗದಗ ಇವರ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.

You might also like

Comments are closed.