ನಾಸಾ ಹಂಚಿಕೊಂಡ ಸೂರ್ಯನ ಮೇಲ್ಮೈ ನ ಅದ್ಭುತ ದೃಶ್ಯ; 49 ಲಕ್ಷಕ್ಕಿಂತಲೂ ಅಧಿಕ ಜನರಿಂದ ವೀಕ್ಷಣೆ ಪಡೆದ ವಿಡಿಯೋ ಒಮ್ಮೆ ನೋಡಿ!

Today News / ಕನ್ನಡ ಸುದ್ದಿಗಳು

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಮೇಲ್ಮೈನಲ್ಲಿ ನಡೆಯುವಂತಹ ಅದ್ಭುತ ಘಟನೆಗಳು ನೋಟವನ್ನು ಬಿಡುಗಡೆ ಮಾಡಿದೆ. ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಅದ್ಭುತವಾದ ನೋಟವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಶೇರ್ ಆದ ಕೆಲವೇ ಗಂಟೆಗಳಲ್ಲಿ 35 ಲಕ್ಷಕ್ಕಿಂತಲೂ ಅಧಿಕ ಜನರು ವಿಸ್ಮಯ ಎನಿಸುವ ಈ ವಿಡಿಯೋವನ್ನು ನೋಡಿದ್ದಾರೆ. ನಾಸಾ ಬಿಡುಗಡೆ ಮಾಡಿರುವ ಈ ಹೊಸ ವಿಡಿಯೋ ಸೂರ್ಯನ ಮೇಲ್ಮೈನಲ್ಲಿ ನಡೆಯುವಂತಹ ಕರೋನಲ್ ಮಾಸ್ ಎಜೆಕ್ಷನ್ ಪ್ರಕ್ರಿಯೆಯನ್ನು ತೋರಿಸುತ್ತಿದೆ ಎನ್ನಲಾಗಿದ್ದು, ಸೌರ ಪ್ಲಾಜ್ಮಾದ ವಿಶಾಲವಾದ ಅಲೆಗಳು ಅಂತರಿಕ್ಷದಲ್ಲಿ ಕೋಟ್ಯಂತರ ಕಣಗಳನ್ನು 1600,000 ಕಿಲೋಮೀಟರ್ ಪ್ರತಿ ಗಂಟೆ ವೇಗದಲ್ಲಿ ಹರಿಸುತ್ತಿದೆ.

ನಾಸಾ ಈ ಚಿತ್ರವನ್ನು ಹಂಚಿಕೊಂಡಿರುವ ಜೊತೆಗೆ, ಸೌರಮಂಡಲದ ನಮ್ಮ ವಿಮರ್ಶೆ, ಒಂದು ನಕ್ಷತ್ರ ಎಂದು ಬರೆದುಕೊಂಡಿದ್ದು, ಆದರೆ ಇದೊಂದು ಅದ್ಭುತ ನಕ್ಷತ್ರ. ನಮ್ಮ ಸೂರ್ಯನ ಈ ಚಿತ್ರವು ಕರೋನಲ್ ಮಾಸ್ ಎಜೆಕ್ಷನ್ ಎನ್ನುವ ಪ್ರಕ್ರಿಯೆಯಾಗಿದೆ ಅಥವಾ CME, ಅದರ ಮೇಲ್ಮೈಯಿಂದ ಹೊರಹೊಮ್ಮುತ್ತದೆ. 2013 ರಲ್ಲಿ, ನಮ್ಮ ಸೌರ ಡೈನಾಮಿಕ್ಸ್ ಅಬ್ಸರ್ವೇಟರಿ (SDO) ಈ ನಿರ್ದಿಷ್ಟ CME ಅನ್ನು ತೀವ್ರ ನೇರಳಾತೀತ ಬೆಳಕಿನಲ್ಲಿ ಗಮನಿಸಿತ್ತು, ಆದರೆ ಅವು ಭೂಮಿಯ ಕಡೆಗೆ ಬಂದಿರಲಿಲ್ಲವೆಂದು NASA ವರದಿ ಮಾಡಿದೆ.
ಸೂರ್ಯನ ಮೇಲ್ಮೈಯಲ್ಲಿ ವಿಕಿರಣದ ಪ್ರಬಲವಾದ ಸ್ಫೋಟಗಳಿಂದ ಸೃಷ್ಟಿಯಾದಂತಹು ಈ ಸೌರ ಜ್ವಾಲೆಗಳು.

ಇವು ತಾತ್ಕಾಲಿಕವಾಗಿ ಸಂವಹನ ಮತ್ತು ನ್ಯಾವಿಗೇಷನ್ ಬ್ಲಾಕ್‌ಔಟ್‌ಗಳನ್ನು ಉಂಟು ಮಾಡಬಲ್ಲವು. ಇವು ವಿದ್ಯುತ್ ಲೈನ್‌ಗಳನ್ನು ಟ್ರಿಪ್ ಮಾಡಬಹುದು ಮತ್ತು ಅವು ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಇದೇ ಕಾರಣದಿಂದಾಗಿಯೇ ಕೆಲವೊಂದು ಸಂದರ್ಭಗಳಲ್ಲಿ ಇಡೀ ವಿಶ್ವದ ಅನೇಕ ಭಾಗಗಳಲ್ಲಿ ವಿದ್ಯುತ್ ಹರಿವು ನಿಂತು ಹೋಗುತ್ತದೆ. ಬಾಹ್ಯಾಕಾಶ ಹವಾಮಾನದಲ್ಲಿ ಕಂಡು ಬರುವಂತಹ ಇಂತಹ ಆಸಕ್ತಿಕರ ಮತ್ತು ರೋಚಕ ಅಂಶಗಳನ್ನು ಪತ್ತೆ ಹಚ್ಚಲು ನಮ್ಮ ಸೌರ ವೀಕ್ಷಣಾಲಯಗಳ ನೆಟ್‌ವರ್ಕ್ ನಮಗೆ ಸಹಾಯ ಮಾಡುವುದು ಸಮಾಧಾನಕರವಾದ ವಿಷಯವಾಗಿದೆ ಎಂದು ನಾಸಾ ಹೇಳಿದೆ.

ನಾಸಾ ಮಾಡಿದ ಈ ಪೋಸ್ಟ್ ವೈರಲ್ ಆದ ಮೇಲೆ,
ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಇನ್‌ಸ್ಟಾಗ್ರಾಮ್ ಬಳಕೆದಾರೊಬ್ಬರು, ಅನುಮಾನದಿಂದ ಇದು ನಿಜವಾದ ದೃಶ್ಯಗಳೇ?? ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಾಸಾ ಪ್ರತಿಕ್ರಿಯೆಯನ್ನು ನೀಡಿದ್ದು, ‘ಹೌದು! ನಮ್ಮ ಸೌರ ಡೈನಾಮಿಕ್ಸ್ ವೀಕ್ಷಣಾಲಯವು ಇದನ್ನು ಬೆಳಕಿನ ಫಿಲ್ಟರ್ ಮೂಲಕ ಸೆರೆಹಿಡಿದಿದ್ದು, ಈ ಬಾಹ್ಯಾಕಾಶ ನೌಕೆ ಸೂರ್ಯನ ಸುತ್ತ ಸುತ್ತುತ್ತದೆ ಮತ್ತು ಅದರ ಚಟುವಟಿಕೆಯನ್ನು ಗಮನಿಸುತ್ತಿದ್ದು, ಇದರ ಸಹಾಯದಿಂದ ನಾವು ಸೂರ್ಯನ ಬಗ್ಗೆ ಬಹಳ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಈ ದೃಶ್ಯವನ್ನು ನೋಡಿ ಬಹಳ ಪ್ರಶಂಸೆಗಳನ್ನು ನೀಡಿದ್ದಾರೆ. ಸೂರ್ಯನ ಮೇಲ್ಮೈಯಿಂದ ಉತ್ಪತ್ತಿಯಾಗುವ ಸೌರ ಬಿರುಗಾಳಿಗಳನ್ನು ನಾವು ಅಪಾಯಕಾರಿಯಲ್ಲ ಎಂದು ಹೇಳಲು ಸಾಧ್ಯವಿಲ್ಲ.

ವಿಡಿಯೋ ನೋಡಿ.

ಏಕೆಂದರೆ ಇಂತಹ ಸೌರ ಬಿರುಗಾಳಿಗಳು ನಮ್ಮ ಭೂಮಿಯ ಹೊರಗಿನ ವಾತಾವರಣವನ್ನು ಬಿಸಿ ಮಾಡಬಹುದು, ಈ ಪ್ರಕ್ರಿಯೆಯು ಉಪಗ್ರಹಗಳ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತವೆ. ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿ ಗಳ ಕಾರ್ಯದಲ್ಲಿ ಹಸ್ತಕ್ಷೇಪ ಉಂಟು ಮಾಡಿ, ಅವರ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ವಿದ್ಯುತ್ ತಂತಿಯಲ್ಲಿನ ಕರೆಂಟ್ ಅಧಿಕವಾಗಿ ಸಂಚರಿಸಬಹುದು, ಇದರಿಂದ ಇದ್ದಕ್ಕಿದ್ದಂತೆ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಫೋಟವಾಗಬಹುದು.. ಆದಾಗ್ಯೂ,ಇದು ವಿರಳವಾಗಿ ಸಂಭವಿಸುತ್ತದೆ ಎನ್ನಲಾಗಿದೆ. ಏಕೆಂದರೆ ಭೂಮಿಯ ಕಾಂತೀಯ ಕ್ಷೇತ್ರವು ಅದರ ವಿರುದ್ಧ ರಕ್ಷಣಾತ್ಮಕ ವಲಯದಂತೆ ಕಾರ್ಯವನ್ನು ನಿರ್ವಹಿಸುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.