murdeshwara-drone-view

ಡ್ರೋನ್ ಕ್ಯಾಮೆರಾದಲ್ಲಿ ಶ್ರೀಕ್ಷೇತ್ರ ಮುರುಡೇಶ್ವರದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ

Entertainment/ಮನರಂಜನೆ Heap/ರಾಶಿ ಭವಿಷ್ಯ

ಮುರುಡೇಶ್ವರ – ಇದು ಕರ್ನಾಟಕ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಒಂದು ಪುಣ್ಯ ಕ್ಷೇತ್ರ. ಇಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ 2ನೇ ಎತ್ತರದ ಶಿವನ ಬೃಹತ್ ಮತ್ತು ಅದ್ಭುತ ಪ್ರತಿಮೆ ಇದೆ ಹಾಗೆಯೇ ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರ ಕೂಡ ಇದೆ. ಇವೆಲ್ಲವನ್ನೂ ನೇರವಾಗಿ ಹೋಗಿ ನೋಡಿ ಕಣ್ತುಂಬಿಕೊಳ್ಳುವುದೇ ಚೆಂದ, ಇದು ಧಾರ್ಮಿಕ ಜನರನ್ನಷ್ಟೇ ತನ್ನತ್ತ ಸೆಳೆಯದೆ ಪ್ರವಾಸಿಗಳನ್ನೂ ಆಕರ್ಷಿಸುತ್ತಿದೆ.

ಇನ್ನು ದಕ್ಷಿಣ ಕನ್ನಡದ ಪ್ರದೇಶಗಳನ್ನು ನೆಲದ ಬದಲು ಆಕಾಶದಿಂದ ನೋಡುವುದು ಇನ್ನೂ ಚೆಂದ, ಬನ್ನಿ ಮುರುಡೇಶ್ವರ ಎಂಬ ಅದ್ಭುತ ಸ್ಥಳವನ್ನು ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ನೋಡೋಣ. ನಿಮ್ಮ ನೆಟ್ವರ್ಕ್ ಸ್ಲೋ ಇದ್ದರೆ ವಿಡಿಯೊ ಕಾಣಿಸುವುದು ಸ್ವಲ್ಪ ತಡವಾಗುವುದು, ದಯವಿಟ್ಟು ಅರ್ದ ನಿಮಿಷ ಕಾಯ್ದು ನೋಡಿ… ಅದಕ್ಕೂ ಮೊದಲು ಮುರುಡೇಶ್ವರದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ…

ಶಿವನ ಲಿಂಗ, ಶಿವನ ಬೃಹತ್ ಪ್ರತಿಮೆ, ರಾಜ ಗೋಪುರ ಮಾತ್ರವಲ್ಲದೇ, ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಮಾತೆಯ ಪ್ರತಿಮೆ ಇರುವ ರಾಮಮಂದಿರವನ್ನು ಮತ್ತು ಶನಿ ದೇವಸ್ಥಾನವನ್ನು ಕೂಡ ನಿರ್ಮಿಸಲಾಗಿದೆ. ಹೈ ವೇ ಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಭವ್ಯವಾಗಿದ್ದು ದೇವಾಲಯದ ಬಳಿ ಎರಡು ಆನೆಗಳು ಕೂಡ ಪ್ರವಾಸಿಗರ ಮನ ಸೆಳೆಯುತ್ತವೆ.

ಈ ದೇವಾಲಯವನ್ನು ಮೂರು ಕಡೆಗಳಿಂದ ಅರೆಬಿಯನ್ ಸಮುದ್ರ ಸುತ್ತುವರೆದಿದೆ. ಚರಿತ್ರೆಯಲ್ಲಿ ಗಣೇಶ ಬ್ರಾಹ್ಮಣ ಹುಡುಗನ ಅವತಾರದಲ್ಲಿದ್ದಾಗ ರಾವಣನ ಬೇಡಿಕೆಯಂತೆ ಕೈಲ್ಲಿದ್ದ ಆತ್ಮಲಿಂಗವನ್ನು ಕೆಳಗಿಟ್ಟ, ಇದು ಅದೇ ಸ್ಥಳ ಇದು ಎಂದು ಹೇಳಲಾಗಿದೆ. ಈ ಕಾರಣಕ್ಕೇ ಈ ಕ್ಷೇತ್ರ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇಲ್ಲಿನ 123 ಅಡಿ ಎತ್ತರದ ಶಿವನ ಪ್ರತಿಮೆ ನೋಡುಗರ ಮನದಲ್ಲಿ ಭವ್ಯತೆ ತುಂಬುತ್ತದೆ.
ದೇವಾಲಯದ ಆವರಣದಲ್ಲಿ ಸೇವಕಿಯರ ಹಲವು ಕೆತ್ತನೆಗಳನ್ನು ಕಾಣಬಹುದು. ಅಲ್ಲಿ 20 ಮಹಡಿಗಳುಳ್ಳ ರಾಜಗೋಪುರವನ್ನೂ ಹಾಗೂ ಅದರ ಮುಖ್ಯದ್ವಾರದ ಬಳಿ ಎರಡು ಬೃಹತ್ತಾದ ಆನೆಗಳನ್ನೂ ಕಾಣಬಹುದು. ದೇವಾಲಯವನ್ನು ಗ್ರಾನೈಟ್ ಬಳಸಿ ನಿರ್ಮಿಸಲಾಗಿದ್ದು ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯನ್ನು ಇಲ್ಲಿ ನೋಡಬಹುದು. ಕಣ್ಮನ ಸೆಳೆಯುವ ಈ ಶೈಲಿಯನ್ನು ಖುದ್ದು ನೋಡಿಯೇ ಕಣ್ತುಂಬಿಕೊಳ್ಳಬೇಕು.

ಇನ್ನು ಮುರುಡೇಶ್ವರ ಬೀಚ್ ಬಗ್ಗೆ ಹೇಳಬೇಕೆಂದರೆ, ಇದು ಮುರುಡೇಶ್ವರದಲ್ಲಿ ಅತ್ಯಂತ ಜನಪ್ರಿಯ ಬೀಚ್ ಆಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಇದು ತನ್ನತ್ತ ಸೆಳೆಯುತ್ತದೆ. ನೀವು ಮುರುಡೇಶ್ವರ ಮತ್ತು ಸುತ್ತಮುತ್ತಲಿನ ಪ್ರವಾಸದಲ್ಲಿದ್ದರೆ ಈ ಸೌಂದರ್ಯ ಸವಿಯುವುದನ್ನು ತಪ್ಪಿಸಿಕೊಳ್ಳಬೇಡಿ, ಈಗ ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡಿದ ಶ್ರೀಕ್ಷೇತ್ರದ ದರ್ಶನ ಪಡೆಯಿರಿ.

ಶರತ್ ಚಂದ್ರ ಎಂಬುವವರು ಡ್ರೋನ್ ಮೂಲಕ ಚಿತ್ರೀಕರಿಸಿದ ಅದ್ಭುತ ಏರಿಯಲ್ ವಿವ್ ಇದು. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅವರು ವಿಡಿಯೊ ಅಪ್ ಲೋಡ್ ಮಾಡಿದ್ದು, ಇದುವರೆಗೆ 1.6 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಅಚ್ಚುಕಟ್ಟಾದ ಈ ವಿಡಿಯೊ ಮುರುಡೇಶ್ವರದ ಅತಿ ಎತ್ತರದ ಶಿವನ ಪ್ರತಿಮೆ, ಅತಿ ಎತ್ತರದ ಗೋಪುರ, ಇತರೆ ಜಲಕ್ರೀಡೆಗಳನ್ನು ಕೂಡ ಅಚ್ಚುಕಟ್ಟಾಗಿ ಕವರ್ ಮಾಡಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.