martin-movie

ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಹಾಟ್ ನಟಿ ಅನ್ವೇಷಿ ಜೈನ್ ನಿಜಕ್ಕೂ ಯಾರು ಗೊತ್ತಾ ನೋಡಿ?…

CINEMA/ಸಿನಿಮಾ Entertainment/ಮನರಂಜನೆ

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ನಟ ಧ್ರುವ ಸರ್ಜಾ. ಸದ್ಯ ನಟ ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಮಾರ್ಟಿನ್ ಸಿನಿಮಾ ಇನ್ನೇನು ಶೀಘ್ರದಲ್ಲೇ ಸೆಟ್ಟೇರಲಿದೆ. ಇನ್ನು ಈ ಸಿನಿಮಾದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ.

ಇನ್ನು ಎ ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಇದೀಗ ಎಲ್ಲರಲ್ಲೂ ಸಾಕಷ್ಟು ನಿರೀಕ್ಷೆಯನ್ನು ಉಂಟು ಮಾಡಿದೆ. ಇನ್ನು ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಅನ್ವೇಷಿ ಜೈನ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ನಟಿ ಅನ್ವೇಷಿ ಜೈನ್ ಅವರ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಅಷ್ಟಕ್ಕೂ ನಟಿ ಅನ್ವೇಷಿ ಜೈನ್ ಯಾರು? ಅವರ ಹಿನ್ನೆಲೆ ಏನು ಎನ್ನುವ ಸಾಕಷ್ಟು ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ…

ನಟಿ ಅನ್ವೇಷಿ ಜೈನ್ ಅವರು ಇದೇ ಮೊದಲ ಬಾರಿಗೆ ಕನ್ನಡದ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದು, ಅವರು ನಟ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿರುವುದು ಮತ್ತಷ್ಟು ವಿಶೇಷ. ಇನ್ನು ನಟಿ ಅನ್ವೇಷಿ ಜೈನ್ ಅವರು ಈ ಮೊದಲು ಸಹ ಸಾಕಷ್ಟು ಸಿನಿಮಾಗಳು ಹಾಗೂ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ ಅನ್ವೇಷಿ ಅವರು ಆಗಾಗ ತಮ್ಮ ಹಾಟ್ ಫೋಟೋಗಳ ಮೂಲಕ ನೆಟ್ಟಿಗರ ಘಮನ ಸೆಳೆಯುತ್ತಿರುತ್ತಾರೆ. ಇನ್ನು ನಟಿ ಅನ್ವೇಷಿ ಜೈನ್ ಅವರು ಬಾಲಿವುಡ್ ನಲ್ಲಿ ಸಾಕಷ್ಟು ವೆಬ್ ಸರಣಿಗಳಲ್ಲಿ ಅದ್ಭುತವಾಗಿ ಮಿಂಚಿದ್ದಾರೆ.

ಇನ್ನು ಏಕ್ತಾ ಕಪೂರ್ ಅವರ Alt ಬಾಲಾಜಿಯ ಕೆಲವು ವೆಬ್ ಸರಣಿಗಳಲ್ಲಿ ಸಹ ಅವರು ನಟಿಸಿದ್ದಾರೆ. ಜೊತೆಗೆ ಕೆಲವು ಬೀ ಗ್ರೇಡ್ ವೆಬ್ ಸರಣಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಇನ್ನು ಇದೆ ಮೊದಲ ಬಾರಿಗೆ ನಟಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದು, ಅವರು ನಾನು ಇಂತಹ ದೊಡ್ಡ ಹಾಗೂ ಅದ್ಭುತ ಸಿನಿಮಾದಲ್ಲಿ ಭಾಗಿಯಾಗಿದ್ದೇನೆ ಎಂದು ನನಗೆ ಗೊತ್ತಿರಲಿಲ್ಲ.

ನಾನು ಮೊದಲು ಎಲ್ಲಾ ಸಿನಿಮಾ ರೀತಿಯೆ ಇದು ಸಹ ಒಂದು ಸಾಧಾರಣ ಸಿನಿಮಾ ಎಂದುಕೊಂಡೆ. ಆದರೆ ನಿಜಕ್ಕೂ ಇಂತಹ ಅದ್ಭುತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ಮಾರ್ಟಿನ್ ಸಿನಿಮಾ ಸಮಾಜದ ಮೇಲೆ ಒಳ್ಳೆಯ ಪ್ರಭಾವ ಬೀರಲಿದೆ ಎಂಬುದು ಈ ಸಿನಿಮಾದ ಟ್ರೇಲರ್ ಬಿಡುಗಡೆಯ ನಂತರ ನನಗೆ ಹರಿವಾಯಿತು ಎಂದಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...