ಕಾಮು-ಕ ಶಿಕ್ಷಕನಿಗೆ ಬಿಸಿಬಿಸಿ ಕಜ್ಜಾಯ ಕೊಟ್ಟ ವಿದ್ಯಾರ್ಥಿನಿಯರು! ಈತ ಮಾಡಿದ ಕೆಲಸವೇನು ನೋಡಿ!!

Entertainment/ಮನರಂಜನೆ

ಶಿಕ್ಷಕ ಅಂದ್ರೆ ಕೇವಲ ಪುಸ್ತಕದಲ್ಲಿ ಇರುವ ಪಾಠವನ್ನು ಹೇಳಿಕೊಡುವುದು ಮಾತ್ರವಲ್ಲ, ವಿದ್ಯಾರ್ಥಿಗಳ ಜೀವನ ಸುಂದರವಾಗಿ ರೂಪಿತ ಆಗೋದಕ್ಕೆ ಆತ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ವಿದ್ಯೆಯ ಜೊತೆಗೆ ಸನ್ನಡತೆ, ಸನ್ಮಾರ್ಗ, ಉತ್ತಮ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಶಿಕ್ಷಕನಾದವನು ತುಂಬಬೇಕು ಒಂದು ವೇಳೆ ವಿದ್ಯಾರ್ಥಿಗಳು ತಪ್ಪು ಹಾದಿ ತುಳಿದರು ಕೂಡ ಶಿಕ್ಷಕನಾದವನು ವಿದ್ಯಾರ್ಥಿಗಳನ್ನು ಸರಿದಾರಿಗೆ ತರಬೇಕಾಗಿರುವುದು ಆತನ ಕರ್ತವ್ಯ.

ಆದರೆ ನಮ್ಮ ದುರಾದೃಷ್ಟ ನೋಡಿ, ಇತ್ತೀಚಿಗೆ ಶಿಕ್ಷಕರು ವಿದ್ಯೆ ಕಲಿಸುವುದನ್ನು ಬಿಟ್ಟು ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುತ್ತಿರುವ ಸಾಕಷ್ಟು ಘಟನೆಗಳು ನಡೆದು ಹೋಗಿವೆ. ಬೇಲಿಯೇ ಎದ್ದು ಹೊಲ ಮೈದಂತೆ ಅಂತಾರಲ್ಲ ಹಾಗೆಯೇ ಶಿಕ್ಷಕನೂ ವರ್ತಿಸಿದ್ದಾನೆ. ಇದೀಗ ಶ್ರೀರಂಗಪಟ್ಟಣದಲ್ಲಿಯೂ ಕೂಡ ಒಬ್ಬ ನ-ಯವಂ-ಚಕ ಹಾಗೂ ಕಾ-ಮು-ಕ ಶಿಕ್ಷಕನ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆದರೆ ಕಾ-ಮು-ಕ ಶಿಕ್ಷಕನ ಈ ಘಟನೆ ಸ್ವಲ್ಪ ವಿಭಿನ್ನವಾಗಿದೆ. ಯಾಕಂದ್ರೆ ಇಲ್ಲಿ ವಿದ್ಯಾರ್ಥಿನಿಯರು ಹೆದರಿಕೊಂಡು ಆತ ಹೇಳಿದಂತೆ ಕೇಳಿಲ್ಲ. ಬದಲಾಗಿ ಆ ಶಿಕ್ಷಕನನ್ನ ಚೆನ್ನಾಗಿ ಥಳಿಸಿ ಗ್ರಾಮದ ಮಂದಿಯ ಎದುರು ನಿಲ್ಲಿಸಿದ್ದರು. ಹೌದು, ಈ ಘಟನೆಗೆ ನಡೆದಿರುವುದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಟ್ಟೇರಿ ಗ್ರಾಮದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ.

ಶಿಕ್ಷಕನ ವರ್ತನೆಯನ್ನು ಖಂಡಿಸಿದ ವಿದ್ಯಾರ್ಥಿನಿಯರು ಕೋಲು ದೊಣ್ಣೆ ಹಿಡಿದುಕೊಂಡು ಶಿಕ್ಷಕರಿಗೆ ಚೆನ್ನಾಗಿ ಥಳಿಸಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಟ್ಟೇರಿ ಗ್ರಾಮದಲ್ಲಿ ಸ್ಥಳೀಯರ ಎದುರು ಶಿಕ್ಷಕನನ್ನು ತಂದು ನಿಲ್ಲಿಸಿದ್ದಾರೆ. ಕಟ್ಟಿರಿ ಗ್ರಾಮದ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿಯರು ಚಿನ್ಮಯಾನಂದ ಮೂರ್ತಿ ಎನ್ನುವ ಶಿಕ್ಷಕನನ್ನ ಚೆನ್ನಾಗಿ ಭಾರಿಸಿದ್ದಾರೆ.

ನಿನ್ನೆ ತಡರಾತ್ರಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಲು ಮುಂದಾದ ಶಿಕ್ಷಕ. ಆಗ ಕೂಡಲೇ ಎಚ್ಚೆತ್ತುಕೊಂಡ ಆಕೆಯ ಸಹಪಾಠಿ, ಉಳಿದ ಸಹಪಾಠಿಗಳನ್ನ ಸೇರಿಸಿಕೊಂಡು ಕೈಯಲ್ಲಿ ಕೋಲು ದೊಣ್ಣೆ ಎಲ್ಲವನ್ನ ಹಿಡಿದುಕೊಂಡು ಬಂದು ಕಾ-ಮು-ಕ ಶಿಕ್ಷಕನ ಮೇಲೆ ದಾಳಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಂಡ್ಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಧೈರ್ಯವನ್ನ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಹ್ಯಾಂಡ್ಸ್ ಆಫ್ ಹೇಳಿದ್ದಾರೆ. ಕೆ ಆರ್ ಎಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಪೊಲೀಸರು ಬಂಧಿಯಾಗಿರುವ ಶಿಕ್ಷಕನನ್ನ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ ವಿದ್ಯಾರ್ಥಿ ನಿಲಯದಲ್ಲಿ ಇರುವ ವಿದ್ಯಾರ್ಥಿನಿಯರಿಗೆ ಲೈಂಗಿ-ಕ ಕಿ-ರುಕು-ಳು ಕೊಟ್ಟಿರುವ ಸಾಕಷ್ಟು ಘಟನೆಗಳು ನಡೆದಿದೆ. ಇದೀಗ ಈ ಶಿಕ್ಷಕರು ಕೂಡ ವಿದ್ಯಾರ್ಥಿನಿಯರಿಗೆ ಪಾಠ ಹೇಳಿಕೊಡುವ ಬದಲು ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಆದರೆ ಹುಡುಗಿಯರು ಅದಕ್ಕೆ ಬಗ್ಗದೇ ಶಿಕ್ಷಕನನ್ನ ಚೆನ್ನಾಗಿ ಗೂಸಾ ಕೊಟ್ಟು ಹಿಡಿ ಶಾಪ ಹಾಕಿದ್ದಾರೆ. ಹೆಣ್ಣು ಮಕ್ಕಳು ಯಾರಿಗೂ ಹೆದರದೆ ಈ ರೀತಿ ಧೈರ್ಯದಿಂದ ವರ್ತಿಸಿದರೆ ಖಂಡಿತವಾಗಿಯೂ ಇಂತಹ ಅನಾಹುತಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಬಹುದು ಅಲ್ಲವೇ? ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...