ಭೋಪಾಲ್: ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನ್ನ ಪತಿ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ ಬಾಡ್ಲಿಯಲ್ಲಿ ನಡೆದಿದೆ. ಇಬ್ಬರನ್ನ ಕೊಲೆಗೈದಿರುವ ಆರೋಪಿ ಲೋಕೇಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ಲೋಕೇಶ್ ಬಾಡ್ಲಿ ನಗರದಲ್ಲಿ ಪತ್ನಿ ಅನಿತಾ (28) ಜೊತೆ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಲೋಕೇಶ್ ಜೊತೆಯಲ್ಲಿಯೇ ರವಿ ಅಲಿಯಾಸ್ ಪ್ರವೀಣ್ ಸಹ ಕೆಲಸ ಮಾಡಿಕೊಂಡಿದ್ದನು. ಲೋಕೇಶ್ ಪತ್ನಿ ಅನಿತಾ ಮತ್ತು ಪ್ರವೀಣ್ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಮನೆಗೆ ಬಂದ ಲೋಕೇಶನಿಗೆ ಪತ್ನಿಯ ಅಕ್ರಮ ಸಂಬಂಧ ತಿಳಿದಿದೆ. ಗೆಳೆಯನ ಜೊತೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ಬರನ್ನು ಲೋಕೇಶ್ ಕೊಲೆ ಮಾಡಿದ್ದಾನೆ.

wife-with-boyfriend

 

ಕೋಪದಲ್ಲಿ ಲೋಕೇಶ್ ಪತ್ನಿಗೆ ಲಾಠಿಯಿಂದ ಹೊಡೆದು ಕೊಲೆಗೈದು ಶವವನ್ನ ಮನೆಯಿಂದ ಹೊರಗೆ ಎಸೆದಿದ್ದಾನೆ. ಹಲ್ಲೆಯ ಪರಿಣಾಮ ಪ್ರವೀಣ್ ಎರಡೂ ಕಣ್ಣುಗಳನ್ನ ಕಿತ್ತಿ ಕೊಂದಿದ್ದಾನೆ. ನಂತರ ಪ್ರವೀಣ್ ಶವವನ್ನ ಬೈಕಿನಲ್ಲಿ ಇರಿಸಿಕೊಂಡು ಬಾದ್ಲಿ ಹೊರವಲಯದ ಸೇತುವೆ ಬಳಿ ಎಸೆದಿದ್ದಾನೆ.

ಮದ್ಯ ಸೇವಿಸಿ ಗ್ರಾಮಸ್ಥರ ಬಳಿ ಓಡೋಡಿ ಬಂದ ಲೋಕೇಶ್, ಮನೆಯಲ್ಲಿ ಪತ್ನಿಗೆ ಏನೋ ಆಗಿದೆ. ಆಕೆಯ ತಲೆಯಿಂದ ರಕ್ತ ಬರುತ್ತಿದೆ ಎಂದು ಹೇಳಿದ್ದಾನೆ. ಲೋಕೇಶ್ ಬಟ್ಟೆ ಮೇಲೆ ರಕ್ತದ ಕಲೆಗಳನ್ನ ಕಂಡು ಗ್ರಾಮಸ್ಥರು ಮನೆಗೆ ಹೋಗಿದ್ದಾರೆ. ಮನೆಯ ಹೊರಗೆ ಅನಿತಾ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿ, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಲೋಕೇಶ್ ನನ್ನು ಹಿಡಿದು ನಿಲ್ಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಲೋಕೇಶ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಿಚ್ಚಿಟ್ಟಿದ್ದಾನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಎರಡೂ ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇತ್ತ ಲೋಕೇಶ್ ಜೈಲುಪಾಲಾಗಿದ್ದಾನೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •