ಸಾಲು ಸಾಲು ಕಷ್ಟಗಳು..ದಯವಿಟ್ಟು ಬಿಟ್ಟುಬಿಡಿ..ಎಲ್ಲವನ್ನು ತೆರೆದಿಟ್ಟ ವಿನೋದ್ ರಾಜ್‌..

ವಿನೋದ್ ರಾಜ್ ಹಾಗೂ ಲೀಲಾವತಿ ಅವರು ಸದ್ಯ ತಾವಾಯ್ತು ತಮ್ಮ ಪಾಡಾಯ್ತು ಅಂತ ತೋಟ ಪರಿಸರ ಕೃಷಿ ಎಂದುಕೊಂಡು ಜೀವನ ಸಾಗಿಸುತ್ತಿದ್ದಾರೆ.. ಆದರೆ ಅದ್ಯಾಕೋ‌ ವಿನೋದ್ ರಾಜ್ ಹಾಗೂ ಲೀಲಾವತಿ ಅವರಿಗೆ ಸಾಲು ಸಾಲು ಕಷ್ಟಗಳು ಎದುರಾಗುತ್ತಿದೆ.. ಸಾಲು ಸಾಲು ನೋವುಗಳನ್ನು ಅನುಭವಿಸುತ್ತಿದ್ದಾರೆ.. ಈ ನಡುವೆ ಇದೀಗ ಮತ್ತೊಂದು ಕಷ್ಟ ಎದುರಾಗಿದ್ದು ನಮ್ಮನ್ನು ದಯವಿಟ್ಟು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ..

ಹೌದು ನಿನ್ನೆಯಷ್ಟೇ ವಿನೋದ್ ರಾಜ್ ಹಾಗೂ ಲೀಲಾವತಿ ಅವರು ರವಿ ಬೆಳೆಗೆರೆ ಅವರ ಅಂತ್ಯ ಸಂಸ್ಕಾರದಲ್ಲಿ‌ ಪಾಲ್ಗೊಂಡು ನೋವು ಹಂಚಿಕೊಂಡಿದ್ದರು.. ತಮ್ಮ ಜೀವನದಲ್ಲಿ ರವಿ ಬೆಳೆಗೆರೆ ಅವರು ಎಷ್ಟು ಸಹಾಯ ಮಾಡಿದ್ದರು ಎಂಬುದನ್ನು ತಿಳಿಸಿದ್ದರು.. ಹೇಳಿಕೊಳ್ಳಲಾಗದಂತಹ ವಿಚಾರಗಳು ಇದೆ.. ಇಂದು ನಾನು ನಮ್ಮ ತಾಯಿ ಇದೀವಿ ಎಂದರೆ ಅದಕ್ಕೆ ರವಿ ಬೆಳೆಗೆರೆ ಅವರೇ ಕಾರಣ.. ಅವರ ಈ ಸಾವು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು..

ರವಿ ಬೆಳೆಗೆರೆ ಅವರ ಅಂತ್ಯ ಸಂಸ್ಕಾರ ಮುಗಿದು ಹೊರ ಬರುತ್ತಿದ್ದ ಸಮಯದಲ್ಲಿ ವಿನೋದ್ ರಾಜ್ ಅವರಿಗೆ ಫೇಸ್ಬುಕ್ ನಲ್ಲಿ ತಮ್ಮ ಹೆಸರಲ್ಲಿ‌ ನಕಲಿ‌ ಖಾತೆ ತೆರೆದು ಅದರಲ್ಲಿ ಹೆಣ್ಣು ಮಕ್ಕಳ‌ ಕೆಟ್ಟ ಫೋಟೋಗಳನ್ನು ಹಾಕುತ್ತಿರುವ ವಿಚಾರ ತಿಳಿದು ಬಹಳ ನೋವು ಪಟ್ಟ ವಿನೋದ್ ರಾಜ್ ಅವರು ಸೀದಾ ಸೈಬರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ವಿಚಾರ ತಿಳಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು..

Vinod-Raj-Lilavati

ಈ ಬಗ್ಗೆ ಇಂದು ಮಾತನಾಡಿರುವ ವಿನೋದ್ ರಾಜ್ ಅವರು “ನನಗೆ ಬಹಳ ಬೇಸರವಾಗಿದೆ.. ಯಾಕ್ ಹೀಗೆ ಮಾಡ್ತಿದ್ದೀರಾ? ಸಾಯಿಪ್ರಕಾಶ್ ಅವರು ಫೋನ್ ಮಾಡಿದ ನಂತರವೇ ನನಗೆ ಈ ವಿಚಾರ ತಿಳಿಯಿತು. ನನಗೆ ಫೇಸ್ಬುಕ್ ಇನ್ಸ್ಟಾಗ್ರಾಂ ಅದೆಲ್ಲಾ ಗೊತ್ತೇ ಇಲ್ಲಾ.. ನಾನು ನನ್ನ ತಾಯಿ ನಾವಾಯ್ತು ನಮ್ಮ ಪಾಡಾಯ್ತು ಅಂತ ಪರಿಸರ, ತೋಟ, ಆಸ್ಪತ್ರೆ ಹಾಗೂ ಪ್ರಾಣಿಗಳೊಂದಿಗೆ ಜೀವಿಸುತ್ತಿದ್ದೇವೆ.. ದಯವಿಟ್ಟು ನಮಗೆ ಮಾನಸಿಕವಾಗಿ ನೋವು ಕೊಡಬೇಡಿ.. ಈ ರೀತಿ ಮಾಡಿ ನಮಗೆ ಕೆಟ್ಟ ಹೆಸರು ತರಬೇಡಿ.. ಇದು ಮನೆಹಾಳು ಮಾಡುವ ಕೆಲಸ.. ದಯವಿಟ್ಟು ಈ ಕೆಲಸ ಮಾಡಬೇಡಿ..

ನಾವು ಈಗಾಗಲೇ ಸಾಲು ಸಾಲು ಕಷ್ಟಗಳನ್ನು ಎದುರಿಸಿ.. ನೋವು ನೋಡಿ ನೋಡಿ ಬದುಕುತ್ತಿದ್ದೇವೆ.. ಈಗ ಈ ನಕಲಿ‌ ಖಾತೆಯಿಂದ ಮತ್ತಷ್ಟು ನೋವಾಗಿದೆ.. ಈಗಾಗಲೇ ತಪ್ಪಿತಸ್ಥರ ಮೇಲೆ ಕಾನೂನಿನ ರೀತಿ ಸೂಕ್ತ ಕ್ರಮಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ.. ಈಗಲಾದರೂ ಇಂತಹ ಕೆಲಸಗಳನ್ನು ನಿಲ್ಲಿಸಿ ಎಂದಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •