ಕನ್ನಡ ಕಿರುತೆರೆಯ ಸೆನ್ಸೇಷನಲ್ ಹೀರೋ ಎನ್ನಲಾಗುವ ಜೊತೆಜೊತೆಯಲಿ ಧಾರಾವಾಹಿ‌ ಖ್ಯಾತಿಯ ಅನಿರುದ್ಧ್ ಅವರು ಇದೀಗ ಧಾರಾವಾಹಿ ನಿಂತು ಹೋಗುವ ವಿಚಾರವನ್ನು ಮಾತನಾಡಿದ್ದಾರೆ.. ಹೌದು ಕಳೆದ ಜೀ ಕನ್ನಡ ವಾಹಿನಿಯಲ್ಲಿ ಶುರುವಾದ ಜೊತೆಜೊತೆಯಲಿ ಧಾರಾವಾಹಿ ಕಿರುತೆರೆಯಲ್ಲಿ ದೊಡ್ಡ ಯಶಸ್ಸನ್ನು ಪಡೆಯಿತು.. ರೇಟಿಂಗ್ ವಿಚಾರದಲ್ಲಿ ಮೊದಲ ವಾರವೇ ದಾಖಲೆ ಬರೆಯಿತು.‌ ಸೌತ್ ಕಿರುತೆರೆ ಇಂಡಸ್ಟ್ರಿಗಳು ಕನ್ನಡ ಕಿರುತೆರೆಯ ಬಗ್ಗೆ ಮಾತನಾಡಿಕೊಳ್ಳುವಂತೆ ಮಾಡಿತ್ತು..

ಕಳೆದ ಒಂದು ವರ್ಷದಿಂದಲೂ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿ ತನ್ನ ಯಶಸ್ವಿ ಪಯಣವನ್ನು ಮುಂದುವರೆಸುತ್ತಿದೆ.. ಇನ್ನು ಈ ಧಾರಾವಾಹಿ ಮೂಲಕ‌ ಸಿನಿಮಾದಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್ಧ್ ಅವರು ದೊಡ್ಡ ಮಟ್ಟದ ಯಶಸ್ಸನ್ನು ಪಡೆದರು.. ಇನ್ನು ಈ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಾಯಕಿ ಮೇಘಾ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾಗಿ ಸದ್ಯ ಸ್ಯಾಂಡಲ್ವುಡ್ ನ ಗೋಲ್ಡನ್ ಸ್ಟಾರ್‌ ಗಣೇಶ್ ಅವರ ಸಿನಿಮಾದಲ್ಲಿ ಅವಕಾಶ ಪಡೆದರು..

serial-Actress-Anu

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಅನಿರುದ್ಧ ಅವರು ಆಗಿಂದ್ದಾಗೆ ಅಭಿಮಾನಿಗಳೊಟ್ಟಿಗೆ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಇದೀಗ ಧಾರಾವಾಹಿಗಳು ನಿಂತು ಹೋಗುತ್ತವೆ ದಯವಿಟ್ಟು ಎಲ್ಲರನ್ನು ಪ್ರೀತಿಸಿ ಎಂದಿದ್ದಾರೆ.. ಹೌದು ಈಗಿರುವ ಧಾರಾವಾಹಿಗಳು ಮುಂದೆ ಇರೋದಿಲ್ಲ.. ಎಲ್ಲರೂ ಮನರಂಜನೆ ಕೊಡ್ತಾರೆ.. ಕೆಲ ದಿನಗಳ ನಂತರ ಬೇರೆ ಧಾರಾವಾಹಿಗಳು ಬರ್ತಾವೆ.. ಎಲ್ಲರನ್ನು ಎಲ್ಲವನ್ನು ಪ್ರೀತಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಇಲ್ಲಿದೆ ನೋಡಿ ಅನಿರುದ್ಧ್ ಅವರು ಹೇಳಿರುವ ಮಾತುಗಳು..

“ಎಲ್ಲಾ ಧಾರಾವಾಹಿಗಳನ್ನೂ, ಎಲ್ಲಾ ಕಲಾವಿದರನ್ನೂ ಪ್ರೀತ್ಸಿ.. ಕೆಲವು ವರ್ಷಗಳಾದ ಮೇಲೆ ಹೊಸ ಧಾರಾವಾಹಿಗಳು, ಬೇರೆ ಕಲಾವಿದರು ನಮ್ಮನ್ನ ರಂಜಿಸೋಕೆ ಬರ್ತಾರೆ.. ಅಲ್ಲಿವರೆಗೂ ಈ ಹಂತನ ಸಂಪೂರ್ಣವಾಗಿ ಆನಂದಿಸಿ.. ‘ವಸುಧೈವ ಕುಟುಂಬಕಂ’.. ನಾವು ಎಲ್ಲರೂ ಒಂದು ಕುಟುಂಬ.. ಪ್ರೀತ್ಸಿ, ಪ್ರೀತ್ಸಿ, ಕೇವಲ ಪ್ರೀತ್ಸಿ ಎಲ್ಲರನ್ನೂ, ಎಲ್ಲವನ್ನೂ..” ಎಂದು ಬರೆದು ಫೋಟೋ ಜೊತೆಗೆ ಪೋಸ್ಟ್ ಮಾಡಿದ್ದಾರೆ.. ಇನ್ನು ಸದ್ಯದಲ್ಲಿಯೇ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಬರುತ್ತಿದ್ದು ಈ ಬಾರಿಯೂ ಆನ್ಲೈನ್ ಮೂಲಕ ನೆಚ್ಚಿನ ಕಿರುತೆರೆ ನಟ ನಟಿಯರನ್ನು ಆಯ್ಕೆ ಮಾಡಬಹುದಾಗಿದ್ದು ಈ ಬಗ್ಗೆ ಅನಿರುದ್ಧ್ ಅವರು ಪೋಸ್ಟ್ ಮಾಡಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •