ಸಿಹಿಸುದ್ದಿ ಹಂಚಿಕೊಂಡ ಬಿಗ್ ಬಾಸ್ ಖ್ಯಾತಿಯ ಸಂಜನಾ..‌

ಬಿಗ್ ಬಾಸ್ ಒಂದ್ ರೀತಿ ಅಲ್ಲೇ ಡ್ರಾ ಅಲ್ಲೇ ಬಹುಮಾನ ಇದ್ದಂಗೆ.. ಬಿಗ್ ಬಾಸ್ ಪ್ರಸಾರವಾಗುತ್ತಿದ್ದಾಗ ಮಾತ್ರ ಅವರು ಪ್ರಖ್ಯಾತ ರಾಗಿರ್ತಾರೆ.. ಆದರೆ ಆನಂತರ ಬಹಳಷ್ಟು ಸ್ಪರ್ಧಿಗಳನ್ನ ನೆನಪಿಸಿಕೊಂಡರೂ ನೆನಪಿಗೆ ಬಾರದಂತಾಗುತ್ತದೆ… ಆದರೆ ಕೆಲವರು ಮಾತ್ರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಿಕ್ಕ ಹೆಸರನ್ನು ಸದುಪಯೋಗ ಪಡಿಸಿಕೊಂಡು ಮುಂದಿನ ವೃತ್ತಿ ಬದುಕನ್ನ ರೂಪಿಸಿಕೊಂಡವರೂ ಕೆಲವರು ಇದ್ದಾರೆ..

ಇನ್ನು ಬಿಗ್ ಬಾಸ್ ಇಷ್ಟು ಸೀಸನ್ ಗಳಲ್ಲಿ ಮನರಂಜನೆಯ ವಿಚಾರಕ್ಕೆ ಬಂದರೆ ಬಿಗ್ ಬಾಸ್ ಸೀಸನ್ 4 ಕೊಂಚ ಮುಂಚೂಣಿಯಲ್ಲಿ ನಿಲ್ಲಬಹುದು.. ಕಾರಣ ಆ ಸೀಸನ್ ನಲ್ಲಿ ಇದ್ದ ಸ್ಪರ್ಧಿಗಳು.. ಹೌದು ಪ್ರಥಮ್, ಕಿರಿಕ್ ಕೀರ್ತಿ, ಭುವನ್ ಪೊನ್ನಣ್ಣ, ಮಾಳವಿಕ ಅವಿನಾಶ್, ರೇಖಾ, ಶೀತಲ್ ಶೆಟ್ಟಿ, ನಿರಂಜನ್ ದೇಶ್ಪಾಂಡೆ, ಕಾರುಣ್ಯ ರಾಮ್ ಸೇರಿದಂತೆ ಆ ಸೀಸನ್‌ ನಲ್ಲಿ ಇದ್ದವರೆಲ್ಲಾ ಬಹುತೇಕ ಚಿರಪರಿಚಿತರೇ ಆಗಿದ್ದಾರೆ.. ಇನ್ನು ಆ ಸೀಸನ್ ನಲ್ಲಿ ಪ್ರಥಮ್ ಬಹಳವಾಗಿ ಇಷ್ಟಪಟ್ಟಿದ್ದ ಸಂಜನಾ ಚಿದಾನಂದ್ ಅವರೀಗ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..

ಮೂಲತಃ ಮಾಡೆಲ್ ಆಗಿದ್ದ ಸಂಜನಾ ಬಿಗ್ಬಾಸ್ ಗೆ ಹೋಗಿ ಬಂದ ನಂತರ ಕೆಲ ಶೋಗಳನ್ನು ಬಿಟ್ಟರೆ ಬೇರೆಲ್ಲೂ ಕಾಣಿಸಿಕೊಳ್ಳಲಿಲ್ಲ.. ಬಿಗ್ ಬಾಸ್ ನಲ್ಲಿ ಮನರಂಜನೆಗಾಗಿ ಸಂಜನಾ ಹಿಂದೆ ಬಿದ್ದಿದ್ದ ಪ್ರಥಮ್ ರ ಸಂಚಿಕೆಗಳು ಬಹಳ ಒಳ್ಳ್ರ್ಯ ಟಿ ಆರ್ ಪಿ ಯನ್ನೇ ಪಡೆದಿದ್ದವು.. ಅತ್ತ ಸಂಜನಾ ಮನಸ್ಸು ಮಾತ್ರ ಭುವನ್ ಮೇಲೆ ಇದ್ದದ್ದು ವಾಸ್ತವ.. ಬಿಗ್ ಬಾಸ್ ಶೋ ಮುಗಿದ ಬಳಿಕವೂ ಸಂಜನಾ ಕೆಲ ದಿನ ಭುವನ್ ಜೊತೆ ಕಾಣಿಸಿಕೊಂಡಿದ್ದರು.. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು‌.. ಆದರೆ ಈಗಲೂ ಅವರ ನಡುವಿನ ಸ್ನೇಹ ಹಾಗೆ ಇದೆಯೋ ಏನೋ ತಿಳಿಯದು.. ಆದರೆ ಇದೀಗ ಅದೆಲ್ಲವನ್ನು ಹೊರತುಪಡಿಸಿ ಸಂಜಮಾ ಶುಭ ಸಮಾಚಾರವೊಂದನ್ನು ಹಂಚಿಕೊಂಡಿದ್ದಾರೆ..

Sanjan-Chidanand

ಹೌದು ಸಂಜನಾ ಜೀ ಕನ್ನಡ ವಾಹಿನಿಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಹೌದು ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೊನಾಲಿ ಎಂಬ ಹೀರೋಯಿನ್ ಪಾತ್ರವನ್ನು ಸಂಜನಾ ಮಾಡುತ್ತಿದ್ದು, ಅದರಲ್ಲಿ ಬ್ರಹ್ಮಗಂಟು ಹೀರೋ ಲಕ್ಕಿ ಹಾಗೂ ಸಂಜನಾಗೆ‌ ಮೋಸ್ಟ್ ಡಿಸೈರೆಬಲ್ ಪ್ರಶಸ್ಥಿ ಲಭಿಸಿದ್ದು ಪ್ರಶಸ್ತಿ ಸ್ವೀಕರಿಸಲು ಇಬ್ಬರ ಗ್ರ್ಯಾಂಡ್ ಎಂಟ್ರಿಯಾಗುತ್ತಿದೆ.. ಈಗಾಗಲೇ ಸಾಕಷ್ಟು ಧಾರಾವಾಹಿಗಳು, ಶೋಗಳಲ್ಲಿ ಅಭಿನಯಿಸಿದ್ದ ಸಂಜನಾ ತಮ್ಮದೇ ಆದ ಬ್ಯೂಟಿಕ್ ಆರಂಭಿಸುವ ಪ್ಲ್ಯಾನ್ ನಲ್ಲಿ ಇದ್ದರು..

ಮಧು ಮಕ್ಕಳಿಗೆ ಜ್ಯುವೆಲರಿ ಬಟ್ಟೆ ಸಿದ್ಧಪಡಿಸುವ ಡಿಸೈನರ್ ಶಾಪ್ ಆರಂಭಿಸುವ ಪ್ಲ್ಯಾನ್ ನಲ್ಲಿ ಇದ್ದ ಸಂಜನಾ ಇದೀಗ ಇದ್ದಕ್ಕಿದ್ದ ಹಾಗೆ ಮತ್ತೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದು ಅವರ ಪಾತ್ರ ತಾತ್ಕಾಲಿಕವಾದದ್ದೋ ಅಥವಾ ಲಕ್ಕಿಗೆ ಮತ್ತೊಂದು ಜೋಡಿಯಾಗುತ್ತಾ ದೀರ್ಘಕಾಲದ ವರೆಗೆ ಅವರ ಪಾತ್ರ ಮುಂದುವರೆದು ಧಾರಾವಾಹಿಯಲ್ಲಿ ಮತ್ತಷ್ಟು ದಿನಗಳು ಕಾಣಿಸಿಕೊಳ್ಳುವರೋ ಕಾದು ನೋಡಬೇಕಿದೆ.. ತಾವು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ವಿಚಾರ ಹಂಚಿಕೊಂಡ ಸಂಜನಾ “ಹೊಸ ಸುದ್ದಿ.. ಕಾಯುತ್ತಿರಿ” ಎಂದಿದ್ದಾರೆ..

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...