ಬಾಲಿವುಡ್ ನಟ ಸೈಫ್ ಅಲಿ ಖಾನ್ ಇತ್ತೀಚೆಗಷ್ಟೇ ತಮ್ಮ 50 ನೇ ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಗಸ್ಟ್ 16 ರಂದು ಆಚರಿಸಿಕೊಂಡಿದ್ದರು. ಸೈಫ್ ಅಲಿ ಖಾನ್ ತಮ್ಮ ವಯಸ್ಸಿನ 50 ನೇ ವರ್ಷವನ್ನು ತಲುಪಿದಾಗ, ಅವರು ತಮ್ಮ ಜೀವನದಿಂದ ಬಹಳಷ್ಟು ಕಲಿತಿದ್ದೇನೆ ಎಂದಿದ್ದಾರೆ. ಸೈಫ್‌ಗೆ‌ ಒಬ್ಬ ಮಗನಿದ್ದಾನೆ. ತೈಮೂರ್ ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೊಂಡಿದ್ದಾನೆ ಎಂದು ಈ ಬಗ್ಗೆ ಮಾತನಾಡಿದ ಸೈಫ್ ಅಲಿ ಖಾನ್, “ಮಕ್ಕಳು ಕಷ್ಟದ ಸಂದರ್ಭಗಳಲ್ಲಿ ತಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತಾರೆಂದು ನೋಡಿದರೆ ತುಂಬಾ ಆಶ್ಚರ್ಯವಾಗುತ್ತದೆ.. ತೈಮೂರ್ ಕೂಡ ಮನೆಯೊಳಗೆ ತಿರುಗಾಡುತ್ತಾನೆ. ಅದೃಷ್ಟವಶಾತ್ ಅವನು ಮನೆಯ ಪೀಠೋಪಕರಣಗಳನ್ನ ಒ’ಡೆದು ಹಾ’ಕುವುದಿ’ಲ್ಲ. ಜ’ಗಳ ಮಾಡುವುದಿಲ್ಲ, ನಮ್ಮ ಮನೆ ಚಿಕ್ಕದಾಗಿದೆ. ನಮ್ಮ ಮನೆಯಲ್ಲಿ ಸಣ್ಣ ಮಗು ಇರುವುದರಿಂದ ನಮ್ಮ ಮನೆಯಲ್ಲಿರುವ ಪೀಠೋಪಕರಣಗಳನ್ನು ತೆಗೆಯಬೇಕು ಎಂದು ಅನೇಕ ಪೋಷಕರು ಹೇಳಿದ್ದರು. ಆದರೆ ಅದೃಷ್ಟವಶಾತ್ ನಾವು ತೈಮೂರ್‌ನೊಂದಿಗೆ ಈ ಸ’ಮಸ್ಯೆಯ’ನ್ನು ಎದುರಿಸಲಿಲ್ಲ” ಎಂದು ಹೇಳಿದರು

ತೈಮೂರ್ ಅಲಿ ಖಾನ್ ಡ್ರೀಮ್ ಏನು ಅನ್ನೋದನ್ನ ತಿಳಿಸಿದ‌ ಸೈಫ್ ಅಲಿ ಖಾನ್

ಸಂಭಾಷಣೆಯ ಸಮಯದಲ್ಲಿ, ತೈಮೂರ್ ತನ್ನ ಹೆತ್ತವರಂತೆ ನಟನಾಗಲು ಬಯಸುತ್ತಾನೆಯೇ ಅಥವಾ ಅಜ್ಜನಂತಹ ಕ್ರಿಕೆಟಿಗನಾಗಲು ಬಯಸುತ್ತಾನೆಯೇ ಎಂದು ಸೈಫ್‌ಗೆ ಕೇಳಿದಾಗ ಉತ್ತರಿಸಿದ ಸೈಫ್ “ಆತ ಕ್ರಿಕೆಟ್ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ. ನನ್ನ ಹಿರಿಯ ಮಗ ಇಬ್ರಾಹಿಂಗೆ ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿ ಇದೆ. ನಾನು ಅನೇಕ ಬಾರಿ ಬ್ಯಾಟ್ ಅನ್ನು ತೈಮೂರ್ ಕೈಯಲ್ಲಿ ಇಡಲು ಪ್ರಯತ್ನಿಸಿದೆ ಆದರೆ ಅವನು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದನು. ತೈಮೂರ್‌ಗೆ ಕಲೆಯ ಬಗ್ಗೆ ತುಂಬಾ ಆಸಕ್ತಿ ಇದೆ. ಆತ ಚಿತ್ರಕಲೆ, ವರ್ಣಚಿತ್ರಗಳು ಮತ್ತು ಸಿಗ್ಜಿಂಗ್ ಅನ್ನು ಇಷ್ಟಪಡುತ್ತಾನೆ. ಅವನು ಅನೇಕ ರೀತಿಯ ಮುಖಗಳನ್ನು ಮಾಡುತ್ತಾನೆ. ಈ ದಿನಗಳಲ್ಲಿ ಅವನು ಭಗವಾನ್ ರಾಮನಾಗಲು ಬಯಸುತ್ತಿದ್ದಾನೆ. ಅವನು ಭಗವಾನ್ ರಾಮನಂತೆ ಬಟ್ಟೆಯನ್ನ ಧರಿಸುತ್ತಿದ್ದಾನೆ ಮತ್ತು ಕೈಯಲ್ಲಿ ಬಾಣವನ್ನು ಹಿಡಿಯಲು ಇಷ್ಟಪಡುತ್ತಾನೆ” ಎಂದು ಹೇಳಿದರು.

ನಾವು ಕಠಿಣ ಪರಿಶ್ರಮ ಪಡುತ್ತೇವೆ

ಈ ದಿನಗಳಲ್ಲಿ ನಡೆಯುತ್ತಿರುವ ನೆಪೋಟಿಸಂ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸೈಫ್‌ಗೆ ಕೇಳಿದಾಗ “ಈ ಚರ್ಚೆಯ ಬಗ್ಗೆ ನಾನು ಪ್ರತಿಕ್ರಿಯಿಸಬಹುದೆಂದು ನಾನು ಭಾವಿಸುವುದಿಲ್ಲ. ನಾನು ಕಷ್ಟಪಟ್ಟು ದುಡಿದು ಮೇಲೆ ಬಂದಿದ್ದೇನೆ. ಹೌದು ನಾನು ಕೂಡ ಸ್ಟಾರ್ ಮಗ. ನಾವೆಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತೇವೆ ಎಂದು ಭಾವಿಸುತ್ತೇವೆ. ಆದ್ದರಿಂದ, ಈ ವಿಷಯವನ್ನು ಇತರರಿಗೆ ಚರ್ಚೆಗೆ ಬಿಡಬೇಕು. ನನ್ನ ಪ್ರಕಾರ ಚಿತ್ರೋದ್ಯಮವೂ ಪ್ರಜಾಪ್ರಭುತ್ವ ಮತ್ತು ಗುಣಾತ್ಮಕವಾಗಿದೆ. ಆದರೆ ಖಂಡಿತವಾಗಿಯೂ ಭ್ರಷ್ಟ ಪ್ರಭಾವಗಳು ಕೆಲವೊಮ್ಮೆ ಇಲ್ಲಿ ಕಂಡುಬರುತ್ತವೆ” ಎಂದರು.

ತನ್ನ ಜೀವನದ ಈ ಹಂತದಲ್ಲಿ, ಸೈಫ್ ಅದೃಷ್ಟದಿಂದ ಮಾತ್ರ ನಡೆಯಲು ಬಯಸುತ್ತೇನೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಅಡುಗೆ ಮಾಡುವುದು, ಕೆಲಸ ಮಾಡುವುದು ಮತ್ತು ಆಟವಾಡುವುದು ಮುಂತಾದ ಕೆಲಸಗಳನ್ನು ಮಾಡುವಾಗ ನಾನು ನನ್ನ ಜೀವನದಲ್ಲಿ ಸಂತೋಷವಾಗಿದ್ದೇನೆ. ಇವೆಲ್ಲವನ್ನೂ ಹೊರತುಪಡಿಸಿ ಬೇರೆ ವಿಷಯಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.

Saif-Ali-Khan

ಲಾಕ್‌ಡೌನ್ ಸಮಯದಲ್ಲಿ ಹಿಂ’ದೂ ಧ’ರ್ಮದ ಬಗ್ಗೆ ವಿ’ವಾದಾ’ತ್ಮಕ ಹೇಳಿಕೆ ಕೊಟ್ಟಿದ್ದ ಸೈಫ್

ಜಾಗತಿಕ ಸಾಂಕ್ರಾಮಿಕ ಕರೋನಾ ವೈರಸ್ (ಕೋವಿಡ್-19) ತಡೆಗಟ್ಟಲು ದೇಶದಲ್ಲಿ ಲಾಕ್‌ಡೌನ್ ಇದ್ದ ಕಾರಣ ಪ್ರತಿಯೊಬ್ಬರೂ ತಮ್ಮ ಸಮಯವನ್ನು ಮನೆಯಲ್ಲಿಯೇ ಕಳೆದಿದ್ದರು. ಬಾಲಿವುಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕರೋನಾ ವಿ’ರುದ್ಧದ ಹೋರಾಟದಲ್ಲಿ ಜನರು ಒಗ್ಗಟ್ಟಿನಿಂದ ಇರಬೇಕೆಂದು ಆಗ್ರಹಿಸಿದ್ದರು. ಈ ಬಿಕ್ಕಟ್ಟಿನ ಸಮಯದಲ್ಲಿ, ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸವನ್ನು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕೆಂದರೆ ನಾವು ಮನೆಯಲ್ಲಿಯೇ ಇರುವುದು ಅವಶ್ಯಕ ಎಂದು ಅವರು ಹೇಳಿದ್ದರು.

ಇದರೊಂದಿಗೆ ದೇಶದಲ್ಲಿ ರಾಜಕೀಯ ವಾತಾವರಣ ಹದಗೆಡುತ್ತಿರುವ ಹಾಗು ದೇಶಪ್ರೇಮವನ್ನು ಸಾಬೀತುಪಡಿಸುವುದು ಮುಂತಾದ ವಿವಾದಿತ ವಿಷಯಗಳ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇ-ಕಾನ್‌ಕ್ಲೇವ್ ನಲ್ಲಿ ನಡೆದ ಚರ್ಚೆಯ ಸಮಯದಲ್ಲಿ, ಮಾತನಾಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ “ನಾನು ಎಂದಿಗೂ ರಾಜಕೀಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಒಬ್ಬ ಕಲಾವಿದನಾಗಿ ನಾನು ಜನರನ್ನು ಐಕ್ಯತೆ ಮೂಡಿಸುವಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದ್ದರು.

ಕೊರೋನಾ ಮಹಾಮಾರಿಯಂತಹ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶಭಕ್ತಿ ಅಥವಾ ದೇಶಪ್ರೇಮವನ್ನು ಸಾಬೀತುಪಡಿಸಲು ಮುಗಿಬಿದ್ದಿರುವ ಜನರ ಮನಸ್ಥಿತಿಯನ್ನು ಸೈಫ್ ಪ್ರಶ್ನಿಸಿದ್ದರು. “ಇಂತಹ ಸಮಯದಲ್ಲಿ ದೇಶಪ್ರೇಮವನ್ನು, ದೇಶಭಕ್ತಿಯನ್ನ ಸಾಬೀತುಪಡಿಸುವುದರ ಅರ್ಥವಾದರೂ ಏನು? ಭಾರತೀಯನಾಗಿರಬೇಕು ಅಂದರೆ ಆ ವ್ಯಕ್ಯಿ ಹಿಂದೂವಾಗಿಯೇ ಹುಟ್ಟಿರಬೇಕು ಎಂದು ಅರ್ಥವೇ? ಅಥವ ವ್ಯಕ್ತಿಯೊಬ್ಬ ಭಾರತದಲ್ಲಿ ಜನಿಸಿದರೆ ಸಾಕಾ?” ಎಂದು ಪರೋಕ್ಷವಾಗಿ ಅರ್ಥವಿಲ್ಲದ ಚರ್ಚೆಯಲ್ಲಿ ಹಿಂ’ದೂ ಧ’ರ್ಮವ’ನ್ನ ಎಳೆದು ತಂದು ತನ್ನ ಹಿಂ’ದೂ ವಿ’ರೋಧಿ ಮಾನಸಿಕೆಯನ್ನ ಮತ್ತೆ ಜಗಜ್ಜಾಹೀರು ಮಾಡಿದ್ದರು.

ಕಳೆದ ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದ ಪಾಲಗಢ್ ನಲ್ಲಿ ಹಿಂ’ದೂ ಸಂ’ತರ ಹ’ತ್ಯೆಯಾ’ದಾಗ ಅದು ರಾಷ್ಟ್ರ ಮಟ್ಟದ ಸುದ್ದಿಯಾದರೂ ಕೂಡ ಈ ಹಿಂದೆ ಉತ್ತರಪ್ರದೇಶದಲ್ಲಿ ಸ’ತ್ತ ಗೋಕ’ಳ್ಳ ಅಖ್ಲಾಕ್ ಬಗ್ಗೆಯಾಗಲಿ, ಜಮ್ಮುವಿನ ಕಥುವಾ ದಲ್ಲಿ ನಡೆದ ಆಸಿಫಾ ಎಂಬ ಬಾಲಕಿಯ ಕೊ’ಲೆಯ ಬಗ್ಗೆ ಬುದ್ಧಿಜೀವಿಗಳು, ಸೆಕ್ಯೂಲರ್ ಗಳು, ಬಾಲಿವುಡ್ ಮಂದಿ ಹೇಗೆ ಪ್ರತಿಕ್ರಿಯಿಸಿ ಕೈಯಲ್ಲಿ ಪ್ಲೆಕಾರ್ಡ್ ಹಿಡಿದುಕೊಂಡು ಹೇಗೆ ಪ್ರ’ತಿಭಟಿಸಿ’ದ್ದರೋ ಆ ರೀತಿಯ ಪ್ರ’ತಿಭಟ’ನೆ ಸಂತರ ಕೊ’ಲೆ ಯಲ್ಲಿ ಮಾತ್ರ ಕಂಡುಬರಲೇ ಇಲ್ಲ.

ಪಾಲಗಢ್ ನಲ್ಲಾದ ಘಟನೆಯ ಬಗ್ಗೆ ತುಟಿಬಿಚ್ಚದ ಸೈಫ್ ಅಲಿ ಖಾನ್ ಮಾತ್ರ ಈಗ ದೇಶಭಕ್ತನಾಗಿರಲು ವ್ಯಕ್ತಿ ಹಿಂ’ದೂ ಧ’ರ್ಮದ’ಲ್ಲಿಯೇ ಹುಟ್ಟಿರಬೇಕಾ? ಎಂದು ಪ್ರಶ್ನಿಸುವುದರ ಮೂಲಕ ಮತ್ತೆ ತನ್ನ ಕೊ’ಳಕು ಬುದ್ಧಿಯನ್ನು ಪ್ರದರ್ಶಿಸಿದ್ದಾರೆ. ಈತನಿಗೆ ಭಾರತದ ಮೇಲೆ ಅಷ್ಟೇ ಗೌರವ ಇದ್ದಿತ್ತೆಂದರೆ ಭಾರತದ ಮೇಲೆ ಆ’ಕ್ರಮ’ಣ ಮಾಡಿ ಇಲ್ಲಿನ ಜನರನ್ನ ಹ‹ತ್ಯೆ ಮಾ’ಡಿದ್ದ ವಿ’ಕೃ’ತ ಮ’ತಾಂ’ಧ ತೈಮೂರ್‌ನ ಹೆಸರನ್ನ ತನ್ನ ಮಗನಿಗೆ ಇಡುತ್ತಿರಲಿಲ್ಲ ಹಾಗು ಈಗ ಅದೇ ಮಗ ಶ್ರೀರಾಮನ ಹಾಗೆ ಆಗಬೇಕೆಂದಿದ್ದಾನೆ ಅಂತ ಯಾಕೆ ಹೇಳ್ತಾನೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಜನ ಸೈಫ್‌ಗೆ ಹಿ’ಗ್ಗಾಮು’ಗ್ಗಾ ತ’ರಾಟೆ’ಗೆ ತೆಗೆದುಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •