ಬೈಕ್ ಕ್ರೇಜ್ ಯಾರಿಗಿಲ್ಲ. ಎಲ್ಲರಿಗೂ ಬೈಕ್ ಮೇಲೆ ರೈಡ್ ಹೋಗುವುದು ಎಂದರೆ ಒಂದು ಖುಷಿ. ಹಾಗೆ ಬೈಲ್ ತೆಗೆದುಕೊಳ್ಳುವವರೆಲ್ಲರೂ ಹೆಚ್ಚಾಗಿ ಗಮನಿಸುವುದು ಮೈಲೇಜ್. ಮೈಲೇಜ್ ಹೆಚ್ಚು ಕೊಡುವ ಬೈಕ್ ಹೆಚ್ಚು ಬೇಡಿಕೆ ಇರುತ್ತದೆ. ಹಾಗಾದರೆ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು ಯಾವುದು ಎಂದು ನಾವು ತಿಳಿಯೋಣ.

ಆಫೀಸ್ ತಿರುಗಾಟಕ್ಕೆ, ಪೇಪರ್ ಹಾಕಲು, ಹಾಲು ಹಾಕಲು ಈ ರೀತಿಯ ಕೆಲಸಗಳನ್ನು ಮಾಡಲು ಉತ್ತಮ ಮೈಲೇಜ್ ಇರುವ ಬೈಕ್ ಗಳು ಬೇಕು. ಈ ರೀತಿಯ ಮೈಲೇಜ್ ಹೆಚ್ಚು ಕೊಡುವ ಐದು ಬೆಸ್ಟ್ ಬೈಕ್ ಗಳ ಹೆಸರು ಇಲ್ಲಿ ನೀಡಲಾಗಿದೆ. ಮೊದಲನೆಯದಾಗಿ ಹೊಂಡಾ ಸಿಡಿ 110ಸಿಸಿ ಬೈಕ್ ಸಿಟಿಯಲ್ಲಿ ಓಡಾಡುವುದಾದರೆ ಮೈಲೇಜ್ 60 ಕಿ.ಮೀ. ಮತ್ತು ಹೈವೆಯಲ್ಲಿ ಮೈಲೇಜ್ 65 ಕಿ.ಮೀ. ಈ ಹೊಂಡಾ ಬೈಕ್ ನ ವೆರಿಯೆಂಟ್ ಎಕ್ಸ್ ಶೋರೂಮ್ ಬೆಲೆ 64,687 ರೂಪಾಯಿಗಳು. ಹೊಂಡಾ ಡಿಲೆಕ್ಸ್ ವೆರಿಯೆಂಟ್ ನ ಎಕ್ಸ್ ಶೋರೂಮ್ ಬೆಲೆ 65,687 ರೂಪಾಯಿಗಳು. ಎರಡನೇಯ ಬೈಕ್ ಸ್ಪ್ಲೆಂಡರ್ ಪ್ಲಸ್ ಬೈಕ್. ಇದು 100 ಸಿಸಿ ಬೈಕ್ ಆಗಿದೆ. ಸ್ಪ್ಲೆಂಡರ್ ಬೈಕ್ ಸಿಟಿಯ ಓಡಾಟಕ್ಕೆ 65 ಕಿ.ಮೀ. ಹೈವೆಯ ಬಳಕೆ ಆದರೆ 70 ಕಿ.ಮೀ. ಮೈಲೇಜ್ ಕೊಡುತ್ತದೆ. ಈ ಬೈಕ್ ನ ಮೊದಲ ವೆರಿಯೆಂಟ್ ಎಕ್ಸ್ ಶೋರೂಮ್ ಬೆಲೆ 62,890 ರೂಪಾಯಿಗಳು. ಎರಡನೆ ವೆರಿಯೆಂಟ್ ಬೆಲೆ 64, 150 ರೂಪಾಯಿಗಳು ಆಗಿವೆ. ಮೂರನೆಯದಾಗಿ ಹೀರೋ ಎಚ್.ಎಫ್. ಡಿಲಕ್ಸ್. ಈ ಬೈಕ್ ಹೈವೆಯಲ್ಲಿ ಬಳಸುವುದಾದರೆ 70 ಕಿ.ಮೀ. ಸಿಟಿಯ ಬಳಕೆ ಆದರೆ 65 ಕಿ.ಮೀ ಆಗಿದೆ. ಈ ಬೈಕ್ ನ ಮೊದಲ ವೆರಿಯೆಂಟ್ ಪ್ರೈಸ್ 49,585 ರೂಪಾಯಿಗಳು. ಎರಡನೆಯ ವೆರಿಯೆಂಟ್ ಬೆಲೆ 57, 475 ರೂಪಾಯಿಗಳು.

More-mileage

ಬಜಾಜ್ ಪ್ಲಾಟಿನಾ 100ಸಿಸಿ ಬೈಕ್ ನಾಲ್ಕನೆಯ ಬೈಕ್. ಜೊತೆಗೆ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್. ಈ ಬೈಕ್ ನಲ್ಲಿ ಸಿಟಿಯ ಬಳಕೆ ಆದರೆ 70 ಕಿ.ಮೀ. ಈ ಬೈಕ್ ನಲ್ಲಿ ಹೈವೆ ಬಳಕೆ ಆದರೆ 75 ಕಿ.ಮೀ ಮೈಲೇಜ್ ಕೊಡುತ್ತದೆ. ಮೊದಲ ವೆರಿಯೆಂಟ್ ಎಕ್ಸ್ ಶೋರೂಮ್ ಬೆಲೆ 58,848 ರೂಪಾಯಿಗಳು. ಎರಡನೆ ವೆರಿಯೆಂಟ್ ಎಕ್ಸ್ ಶೋರೂಮ್ ಬೆಲೆ 61,000 ರೂಪಾಯಿಗಳು ಇವೆ. ಬಜಾಜ್ ಸಿಟಿ 100 ಬೈಕ್ ಅನ್ನು ಬಜಾಜ್ ಪ್ಲಾಟಿನಾ ಬೈಕ್ ಬದಲಿಗೆ ಬಳಸಬಹುದು. ಕೊನೆಯ ಬೈಕ್ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್. ಇಂಜಿನ್ 110 ಸಿಸಿ ಹೊಂದಿದೆ. ಇದು ಕೂಡಾ ಅತಿ ಹೆಚ್ಚು ಮೈಲೇಜ್ ಕೊಡುತ್ತದೆ. ಈ ಬೈಕ್ ಸಿಟಿ ರೈಡ್ ಆದರೆ 80 ಕಿ.ಮೀ. ಮೈಲೇಜ್ ಸಿಗುತ್ತದೆ. ಹೈವೆ ಬಳಕೆ ಆದರೆ 85 ಕಿ.ಮೀ. ಮೈಲೇಜ್ ಕೊಡುತ್ತದೆ. ಮತ್ತು ಈ ಬೈಕ್ ನ ಮೊದಲ ವೆರಿಯೆಂಟ್ ಬೈಕ್ ಎಕ್ಸ್ ಶೋರೂಮ್ ಬೆಲೆ 62,638 ರೂಪಾಯಿಗಳು. ಎರಡನೇ ವೆರಿಯೆಂಟ್ ಎಕ್ಸ್ ಶೋರೂಮ್ ಬೆಲೆ 63,138 ರೂಪಾಯಿಗಳು ಆಗಿದೆ.

ಇವು ಐದು ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ರೈಡ್ ಗಳಾಗಿದೆ. ಜೊತೆಗೆ ಕಡಿಮೆ ವೆಚ್ಚದಲ್ಲಿ ಸಿಗುವ ಬೈಕ್ ಗಳು ಆಗಿವೆ. ಮೈಲೇಜ್ ಹೆಚ್ಚು ಬೇಕು ಎನ್ನುವವರು ಈ ಬೈಕ್ ಗಳನ್ನು ಗಮನಿಸಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •