ಬ್ರೇಕಿಂಗ್ ನ್ಯೂಸ್.. ಕುಸುಮಾ ಅವರ ವಿರುದ್ಧ ಎಫ್ ಐ ಆರ್ ದಾಖಲು..

ರಾಜ್ಯದ ವಿಧಾನಸಭಾ ಉಪಚುನಾವಣೆಯ ಹೈ ವೋಲ್ಟೇಜ್ ಕಣವಾದ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಅವರ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.. ಹೌದು ನಾಮಪತ್ರ ಸಲ್ಲಿಕೆಯ ವೇಳೆ ನೀಡಿದ್ದ ಅಫಿಡೆವಿಟ್ ನಲ್ಲಿ ಕುಸುಮಾ ಅವರ ಮೇಲೆ ಯಾವುದೇ ಕೇಸ್ ಇಲ್ಲದಿರುವುದರ ಮಾಹಿತಿ ನೀಡಿದ್ದರು.. ಆದರೆ ನಾಮಒಅತ್ರ ಸಲ್ಲಿಕೆಯ ದಿನವೇ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.. ಕುಸುಮಾ ಅವರು‌ ಮಾತ್ರವಲ್ಲ ಕುಸುಮಾ ಅವರ ಜೊತೆಗೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಡ್ರೈವರ್ ಮೇಲೆಯೂ ದಾಖಲಾಗಿದೆ..

ಹೌದು ಇಂದು ಕುಸುಮಾ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.. ಸಲ್ಲಿಸುವ ಸಮಯದಲ್ಲಿ ಚುನಾವಣಾ ಕಚೇರಿಯಿಂದ ನೂರು ಮೀಟರ್ ದೂರದಲ್ಲಿಯೇ ಕಾರ್ ನಿಲ್ಲಿಸಿ ಕಚೇರಿಯ ಒಳಗೆ ನಾಮಪತ್ರ ಸಲ್ಲಿಸಲು ಜೊತೆಯಲ್ಲಿ ಬರುವವರ ಜೊತೆಗೆ ನಡೆದುಕೊಂಡೇ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಬೇಕಾಗಿತ್ತು.. ಆದರೆ ಸಿದ್ದರಾಮಯ್ಯ ಅವರ ಕಾರು ಬ್ಯಾತಿಕೇಡ್ ದಾಟಿ ಕಚೇರಿಯ ಮುಂಭಾಗ ಹೋಗಿ ನಿಂತಿತು.. ಅವರ ಕಾರ್ ಹಿಂಭಾಗವೇ ಕುಸುಮಾ ಅವರ ಕಾರ್ ಸಹ ಹೋಯಿತು..

Kusuma-FIR

ಇದೀಗ ಇಬ್ಬರ ಮೇಲೆಯೂ ಆರ್ ಆರ್ ನಗರ ಪೊಲೀಸರು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದ್ದು ಐ ಪಿ ಸಿ ಸೆಕ್ಷನ್ 353 ರ ಅಡಿಯಲ್ಲಿ ಐಫ್ ಐ ಆರ್ ದಾಖಲಿಸಿಕೊಂಡಿದ್ದಾರೆ..

ಬೆಳಿಗ್ಗೆಯಷ್ಟೇ ಯಾವುದೇ ಕೇಸ್ ಇರದ ಕುಸುಮಾ ಅವರ ಮೇಲೆ ಸಂಜೆಯ ಹೊತ್ತಿಗೆ ಕೇಸ್ ಬಿದ್ದಿದ್ದು ಚುನಾವಣೆಯ ಅಖಾಡ ಮತ್ತಷ್ಟು ಕಾವೇರುತ್ತಿದೆ ಎನ್ನಬಹುದು.. ಅತ್ತ ಮುನಿರತ್ನ ಅವರು ಸಹ ಇಂದು ಬಿಜೆಪಿ ಪಕ್ಷದ ಪರವಾಗಿ ಇಂದು ನಾಮಪತ್ರ ಸಲ್ಲಿಸಿದ್ದು ಮತ್ತೊಮ್ಮೆ ಶಾಸಕನ ಗದ್ದುಗೆಗೆ ಏರುವ ವಿಶ್ವಾಸದಲ್ಲಿದ್ದಾರೆ..

ನಾಳೆಯಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ.. ಒಟ್ಟಿನಲ್ಲಿ ರಾಜರಾಜೇಶ್ವರಿ ತಾಯಿಯ ಸನ್ನಿಧಾನದಲ್ಲಿ ಮುನಿರತ್ನ ಅವರ ಜನ ಬೆಂಬಲದಿಂದ ಕಮಲ ಅರಳುವುದೋ ಅಥವಾ ಕುಸುಮಾ ಅವರ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಶಾಸಕ ಸ್ಥಾನ ಪಡೆಯುವುದೋ ಕಾದು ನೋಡಬೇಕಿದೆ..

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...