ಭಾನುವಾರ ಅಬುಧಾಬಿಯಲ್ಲಿ ನಡೆದ ಐಪಿಎಲ ಪಂದ್ಯದಲ್ಲಿ ಭಾನುವಾರ ನಡೆದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದಿತ್ತು. ಭಾನುವಾರ ನಡೆದ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರದ ಪಂದ್ಯ ಗೆದ್ದು ಬೀಗಿದ ನಾಯಕ ವಿರಾಟ್ ಕೊಹ್ಲಿ ತಮ್ಮ ಮಡದಿಯ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಗೆಲುವಿನ ನಂತರ ರೊಮ್ಯಾಂಟಿಕ್ ಮೂಡಿಗೆ ಜಾರಿರುವ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಇಳಿ ಸಂಜೆಯಲಿ ನೀರಿನೊಳಗೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಫೋಟೋ ತೆಗೆದಿದ್ದು, ಬೆಂಗಳೂರು ತಂಡದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಎಂದು ಕೂಡಾ ತಿಳಿಸಿದ್ದಾರೆ.

ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಮತ್ತು ಅನುಷ್ಕಾ ದಂಪತಿ, ಮೊಟ್ಟ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕಪ್ ಗೆಲ್ಲುವ ತವಕದಲ್ಲಿದ್ದಾರೆ. ಕಳೆದ ಒಂದು ವಾರದಿಂದ ಅನುಷ್ಕಾ ಶರ್ಮಾ ಅವರು ದುಬೈನಲ್ಲೇ ಇದ್ದು, ಕಳೆದ ಮೂರು ಪಂದ್ಯಗಳಲ್ಲಿ ಮೈದಾನಕ್ಕೆ ಬಂದು ಬೆಂಗಳೂರು ತಂಡವನ್ನು ಹುರಿದುಂಬಿಸಿದ್ದಾರೆ ಬೆಂಬಲ ನೀಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲೂ ಕೂಡ ಅನುಷ್ಕಾ ಶರ್ಮಾ ಹಾಜರಿದ್ದು, ಪತಿಯ ತಂಡಕ್ಕೆ ಚೀಯರ್ ಮಾಡಿದ್ದರು. ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಪಂದ್ಯ ನಡೆದಾಗಲೂ ಕೂಡ ಅನುಷ್ಕಾ ಬಂದಿದ್ದರು. ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡಿದ್ದರು. ಅಂದಿನ ಪಂದ್ಯದಲ್ಲಿ RCB ನಾಯಕನಾಗಿ ಉತ್ತಮವಾಗಿ ಆಡಿದ್ದ ವಿರಾಟ್ 52 ಬಾಲಿಗೆ 90 ರನ್ ಸಿಡಿಸಿ ಮಿಂಚಿದ್ದರು. ಇದರಿಂದ ಸಂತೋಷಗೊಂಡ ಅನುಷ್ಕಾ ಡ್ರೆಸಿಂಗ್ ರೂಮಿನಿಂದಲೇ ಫ್ಲೈಯಿಂಗ್ ಕಿಸ್ ಕೊಟ್ಟು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.

kohli-Anushka-Sharma

ಐಪಿಎಲ್ 13 ಆವೃತ್ತಿಯಿಂದಲೂ ಕೊಹ್ಲಿ RCB ತಂಡದಲ್ಲಿಯೆ ಆಡುತ್ತಿದ್ದಾರೆ. ಜೊತೆಗೆ 2013 ರಿಂದ ತಂಡದ ನಾಯಕನಾಗಿದ್ದಾರೆ. ಆದರೆ ಇಲ್ಲಿಯವರೆಗೂ ಒಂದೂ ಬಾರಿಯೂ ಕಪ್ ಗೆದ್ದಿಲ್ಲ. ಆದರೆ ಈ ವರ್ಷದ ಐಪಿಎಲ್‍ನಲ್ಲಿ RCB ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ. ಎಬಿಡಿ ವಿಲಿಯರ್ಸ್ ಮತ್ತು ಕೊಹ್ಲಿ ಉತ್ತಮ ಫಾರ್ಮ್‍ನಲ್ಲಿ ಇದ್ದಾರೆ. ಈಗಾಗಲೇ 9 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ ಆರರಲ್ಲಿ ಗೆದ್ದು ಮೂರರಲ್ಲಿ ಸೋತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಈ ಬಾರಿ ಆದರೂ RCB ತಂಡ ಕಪ್ ಗೆಲ್ಲುವುದೋ ಎಂದು ಕಾದು ನೋಡಬೇಕಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •