ಹೌದು ಹೆಣ್ಣುಮಕ್ಕಳು ಅಡುಗೆ ಮನೆಯಲ್ಲಿ ಯಾವ ರೀತಿ ಇರಬೇಕು? ಮತ್ತು ಯಾವುದನ್ನು ಮಾಡಬೇಕು? ಯಾವ ತಪ್ಪು ಮಾಡಬಾರದು? ಜೊತೆಗೆ ಅಡುಗೆಮನೆಯ ಯಾವ ವಸ್ತುಗಳನ್ನು ನೆಲಕ್ಕೆ ಬೀಳದಂತೆ ನೋಡಿಕೊಳ್ಳಬೇಕು? ಒಂದು ವೇಳೆ ಅಡಿಗೆಮನೆಯ ಈ ವಸ್ತುಗಳು ನೆಲಕ್ಕೆ ಬಿದ್ದಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತವೆ? ಮತ್ತು ದೇವರ ವಿಚಾರದಲ್ಲಿ ಏನು ಮಾಡಬೇಕು? ಯಾವುದನ್ನು ಉಪಯೋಗ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲಿದ್ದೇವೆ.

ಹೌದು ಅಡುಗೆ ಮನೆಯ ಹೆಣ್ಣುಮಕ್ಕಳು ಉಪ್ಪನ್ನು ನೆಲಕ್ಕೆ ಚೆಲ್ಲದಂತೆ ನೋಡಿಕೊಳ್ಳಬೇಕಂತೆ, ಒಂದು ವೇಳೆ ನೆಲಕ್ಕೆ ಉಪ್ಪು ಚೆಲ್ಲಿದರೆ ಮನೆಯಲ್ಲಿ ಗಲಾಟೆಗಳು ಆರಂಭವಾಗುವ ಮುನ್ಸೂಚನೆಯಂತೆ, ಕದನ ಮತ್ತು ಜಗಳಕ್ಕೆ ದಾರಿಮಾಡಿಕೊಡುತ್ತದೆ ಎಂದು ಕೇಳಿಬಂದಿದೆ. ಮತ್ತು ಅಡುಗೆಮನೆಯಲ್ಲಿರುವ ಕರಿಮೆಣಸನ್ನು ಕೂಡ ಯಾವತ್ತೂ ನೆಲಕ್ಕೆ ಚೆಲ್ಲದ ಹಾಗೆ ನೋಡಿಕೊಳ್ಳಬೇಕು. ಒಂದು ವೇಳೆ ನೆಲಕ್ಕೆ ಕರಿಮೆಣಸು ಬಿದ್ದಲ್ಲಿ, ಆರ್ಥಿಕ ಸಮಸ್ಯೆ ಎದುರಾಗಲಿದ್ದು, ಹೆಚ್ಚು ಹಣ ಖರ್ಚಾಗುತ್ತದೆ, ಮತ್ತು ಆಕ್ಸಿಡೆಂಟ್ ಆಗುವ ಸಾಧ್ಯತೆಯಿರುತ್ತದೆಯಂತೆ. ಹಾಗೇನೆ ಅದೃಷ್ಟ ಹೋಗಿ ದುರದೃಷ್ಟ ಬರಬಹುದು ಎನ್ನುವ ಮಾಹಿತಿ ಹೇಳಿದ್ದಾರೆನ್ನಲಾಗಿದೆ.

Kitchen-girl

ಮತ್ತು ಮನೆಯಲ್ಲಿ ಯಾವಾಗಲೂ ಕಲ್ಲುಪ್ಪನ್ನು ಬಳಸ ಬೇಕಂತೆ. ಮನೆಯ ನೆಲ ವರಿಸುವಾಗ ಕಲ್ಲುಪ್ಪನ್ನು ಮಿಕ್ಸ್ ಮಾಡಿ ನೆಲ ವರೆಸಬೇಕಂತೆ. ಮತ್ತು ಮನೆಯಲ್ಲಿ ಪ್ರತಿದಿನ ಪೂಜೆ ಮಾಡಬೇಕು, ಜೊತೆಗೆ ಜಗಲಿಯಲ್ಲಿ ಎರಡು ಮಾಮೂಲಿ ದೀಪಗಳು, ಒಂದು ಕಾಮಾಕ್ಷಿ ದೀಪವನ್ನು ಮಾತ್ರ ಹಚ್ಚಬೇಕು ಎಂದು ಹೇಳಿದ್ದಾರೆ. ಮನೆಯಲ್ಲಿ ನಂದಾದೀಪ ಹಚ್ಚುವ ಅವಕಾಶವಿಲ್ಲ, ಕಾರಣ ಮನೆಯಲ್ಲಿರುವ ಹೆಣ್ಣುಮಕ್ಕಳೇ, ನಂದಾದೀಪವಾಗಿ ಮನೆ ಬೆಳಗಲು ಬಂದಿರುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ದೇವರ ಮನೆಯಲ್ಲಿ ದೀಪ ಹಚ್ಚುವಾಗ ಮಂಗಳವಾರ ಮತ್ತು ಶುಕ್ರವಾರ ಮಾತ್ರ ತುಪ್ಪದ ಎಣ್ಣೆ ಬಳಸಬೇಕಂತೆ. ಮಿಕ್ಕಿದ್ದೆಲ್ಲಾ ದಿನಗಳಲ್ಲಿ ಪೂಜೆಗೆ ಎರಳೆಣ್ಣೆ ಬಳಸಬೇಕಂತೆ.

ಮತ್ತು ಪ್ರತಿದಿನ ಮಲಗುವ ಹೊತ್ತಿಗೆ ದೀಪವನ್ನು ಆರಿಸಬೇಕು, ಆ ದೀಪವನ್ನು ಎಂದಿಗೂ ಬಾಯಿಂದ ಅಥವಾ ಕೈಯಿಂದ ಆರಿಸುವ ಬದಲು, ಹೂವು, ಹತ್ತಿಯ ಮೂಲಕ ದೀಪವನ್ನು ಆರಿಸಬೇಕು ಎನ್ನುವ ಮಾಹಿತಿ ನೀಡಿದ್ದಾರೆ. ಇನ್ನು ಕೆಲವರು ಕಳಸ ನೆಲಕ್ಕೆ ಉರುಳಿಸಿದರೆ ಏನಾಗಬಹುದು ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರ, ‘ ದೇವರ ವಿಚಾರದಲ್ಲಿ ತುಂಬಾ ಜಾಗರೂಕತೆಯಿಂದ ಭಯ-ಭಕ್ತಿಯಿಂದ ಪೂಜೆ ಮಾಡಿ, ಇಂತಹ ತಪ್ಪುಗಳನ್ನು ಮಾಡದಿರುವುದೇ’  ಇದಕ್ಕೆ ಉತ್ತರ ಎಂದು ಹೇಳಿದ್ದಾರೆ.

ಹಾಗೇನೇ ಮುಟ್ಟಾದ ಯುವತಿಯರು ದೀಪ ಹಚ್ಚಬಹುದಾ? ಎನ್ನುವ ಪ್ರಶ್ನೆಯನ್ನು ಇನ್ನೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರ ‘ ನಿಮ್ಮ ಮನೆಯಲ್ಲಿ ಇಬ್ಬರು ಮೂವರು ಹೆಣ್ಣುಮಕ್ಕಳು ಇದ್ದಲ್ಲಿ ಮುಟ್ಟಾದ ಯುವತಿಯನ್ನು ಬಿಟ್ಟು ಉಳಿದ ಹೆಣ್ಣುಮಕ್ಕಳು ದೀಪ ಹಚ್ಚಬಹುದು ಎಂದು ಹೇಳಿದ್ದಾರೆ. ಹೌದು ಈ ಎಲ್ಲಾ ನಿಯಮಗಳನ್ನು ಅನುಸರಿಸಿ, ಅಡುಗೆಮನೆಯಲ್ಲಿ ತುಂಬಾ ಜಾಗರೂಕತೆಯಿಂದ ಕೆಲವೊಂದು ತಪ್ಪನ್ನು ಮಾಡದಿದ್ದರೆ, ಮನೆಗೆ ಐಶ್ವರ್ಯ, ನೆಮ್ಮದಿ, ಸುಖ, ಶಾಂತಿ ಸಿಗುತ್ತದೆ. ಹಾಗೇನೇ ಆರ್ಥಿಕ ಪರಿಸ್ಥಿತಿಯೂ ಕೂಡ ಸುಧಾರಿಸುತ್ತದೆ. ಮತ್ತು ತುಂಬಾ ಸುಖಕರ ಜೀವನ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತಿದೆ. ಮೇಲಿನ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ ಜೊತೆಗೆ ಹೆಚ್ಚು ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •