ನಮ್ಮ ದೇಶ ಕೃಷಿ ಅವಲಂಭಿತವಾದ ದೇಶವಾದ ಕಾರಣ ದೇಶದಲ್ಲಿ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿಗೆ ತರಲಾಗುತ್ತಲೇ ಇದೆ, ರೈತರಿಗೆ ಸಹಾಯ ಆಗಲಿ ಮತ್ತು ಅವರು ಎಲ್ಲರಂತೆ ಖುಷಿಯಿಂದ ಜೀವನ ಮಾಡಲಿ ಅನ್ನುವ ಉದ್ದೇಶದಿಂದ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಲೇ ಇದೆ. ಇನ್ನು ಮತ್ತೆ ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರ ಎರಡು ಬಂಪರ್ ಸಿಹಿ ಸುದ್ದಿಯನ್ನ ನೀಡಿದ್ದು ನೀವು ಕೂಡ ರೈತರಾಗಿದ್ದರೆ ನೀವು ಈ ಮಾಹಿತಿಯನ್ನ ತಪ್ಪದೆ ತಿಳಿದುಕೊಳ್ಳಿ. ಹೌದು ಈ ಹಿಂದೆ ರೈತರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನ ಜಾರಿಗೆ ತರಲಾಗಿದ್ದು ಈ ಯೋಜನೆಯನ್ನ ಲಾಭವನ್ನ ದೇಶದ ಬಹುಸಂಖ್ಯಾ ರೈತರು ಪಡೆದುಕೊಂಡಿದ್ದರು ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈಗ ಈ ಯೋಜನೆಯನ್ನ ದೊಡ್ಡ ಬದಲಾವಣೆಯನ್ನ ಮಾಡಲಾಗಿದ್ದು ಈಗಾಗಲೇ ಈ ಯೋಜನೆಯಿಂದ ಹಣವನ್ನ ಪಡೆದ ರೈತರು ಮತ್ತು ಇನ್ನು ಕೂಡ ಹಣವನ್ನ ಪಡೆಯದ ರೈತರು ಈ ಮಾಹಿತಿಯನ್ನ ತಪ್ಪದೆ ತಿಳಿದುಕೊಳ್ಳುವುದು ಉತ್ತಮ ಎಂದು ಹೇಳಬಹುದು. ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನ ಅಡಿಯಲ್ಲಿ ರೈತರಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ 94 ಸಾವಿರ ಕೋಟಿ ರೂಪಾಯಿಯನ್ನ ಮೀಸಲು ಇಡಲಾಗಿದೆ ಮತ್ತು ದೇಶದ 11 ಕೋಟಿಗೂ ಹೆಚ್ಚಿನ ಈ ರೈತರು ಈ ಹಣದ ಲಾಭವನ್ನ ಪಡೆದುಕೊಂಡಿದ್ದಾರೆ. ಇನ್ನು ಕೆಲವು ರೈತರು ಇನ್ನು ಕೂಡ ತಮ್ಮ ಖಾತೆಯನ್ನ ಆಧಾರ್ ಗೆ ಲಿಂಕ್ ಮಾಡದ ಕಾರಣ ಇನ್ನು ಈ ಯೋಜನೆಯನ್ನ ಲಾಭವನ್ನ ಪಡೆದುಕೊಂಡಿಲ್ಲ ಮತ್ತು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಮಾತ್ರ ರೈತರು ಈ ಯೋಜನೆಯ ಲಾಭವನ್ನ ಪಡೆಯಹುದಾಗಿದೆ.

Kisan-Samman-yojana

ಇನ್ನು ಇನ್ನುಮುಂದೆ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನ ಸಂಪೂರ್ಣವಾಗಿ ಪಡೆಯಬೇಕಾದರೆ ಅವರು ತಮ್ಮ ಆಧಾರ್ ವಾರ್ಡ್ ಗೆ ಬ್ಯಾಂಕ್ ಖಾತೆಯನ್ನ ಲಿಂಕ್ ಮಾಡಲೇಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀವು ಈ ಯೋಜನೆಯ ಲಾಭವನ್ನ ಪಡೆಯಲು ಸಾಧ್ಯವಿಲ್ಲವಾಗಿದೆ. ಇನ್ನು ರೈತರಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ಕಿಸಾನ್ ಸಮ್ಮಾನ್ ಯೋಜನೆಯ ಜೊತೆಯಲ್ಲಿ ಜಾರಿಗೆ ತಂದ ಇನ್ನೊಂದು ಯೋಜನೆ ಅಂದರೆ ಅದೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದಾಗಿದೆ. ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ದೇಶದ ಪ್ರತಿಯೊಬ್ಬ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿ ನೀಡಲಾಗುತ್ತದೆ.

ಇನ್ನು ಈಗ ಕೇಂದ್ರ ಸರ್ಕಾರ ಇನ್ನೊಂದು ದೊಡ್ಡ ನಿರ್ಧಾರವನ್ನ ಮಾಡಿದ್ದು ಈ ನಿರ್ಧಾರ ಅನಿಷ್ಠಾನಕ್ಕೆ ಬಂದರೆ ರೈತರಿಗೆ ಈ 6 ಸಾವಿರ ರೂಪಾಯಿಯ ಜೊತೆಗೆ ಇನ್ನು 5 ಸಾವಿರ ರೂಪಾಯಿ ಸಿಗಲಿದೆ ಮತ್ತು ಈ ಹಣವನ್ನ ರೈತರಿಗೆ ರಸಗೊಬ್ಬರ ಕೊಳ್ಳಲು ನೀಡಲಾಗುತ್ತದೆ. ಇನ್ನು ಇದರ ಕುರಿತು ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು ಕೇಂದ್ರ ಸರ್ಕಾರಕ್ಕೆ ಕೆಲವು ಶಿಫಾರಸ್ಸುಗಳನ್ನ ಕೂಡ ನೀಡಿದೆ ಮತ್ತು ರೈತರಿಗೆ ಈ ಹಣ ಕಂತುಗಳ ರೂಪದಲ್ಲಿ ಅವರವರ ಖಾತೆಗೆ ಜಮಾವಣೆ ಆಗಲಿದೆ. ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ಇನ್ನುಮುಂದೆ ವಾರ್ಷಿಕವಾಗಿ 11 ಸಾವಿರ ರೂಪಾಯಿ ಸಿಗಲಿದೆ, ಸ್ನೇಹಿತರೆ ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •