ಹಿಂದೂ ಸಂಪ್ರದಾಯದಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಸ್ವರ್ಗ ಹಾಗೂ ಪಾಪ ಮಾಡಿದವರಿಗೆ ನರಕ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.ಇದರಿಂದ ಎಲ್ಲರೂ ಕೂಡ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ನಂಬಿದ್ದಾರೆ ಹಾಗೆ ಪಾಪ ಮಾಡಿದ್ದರಿಂದ ನರಕಯಾತನೆ ಪಡಬೇಕಾಗುತ್ತದೆ ಎಂದು ಕೂಡ ದೃಡವಾಗಿ ನಂಬಿದ್ದಾರೆಆದರೆ ಮಹಾಭಾರತದ ಕಥೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ನೀವು ಅವಲೋಕಿಸಿದರೆ ಇಲ್ಲಿ ಕೆಲವು ತದ್ವಿರುದ್ಧ ಘಟನೆಗಳು ಆಗಿದ್ದನ್ನು ನೀವು ನೋಡಬಹುದು.

ನಿಮಗೆಲ್ಲಾ ಗೊತ್ತಿರುವಂತೆ ಮಹಾಭಾರತದ ಮಹಾ ಖಳನಾಯಕನೆಂದೆ ಕುಖ್ಯಾತಿಯಾಗಿದ್ದ ದುರ್ಯೋಧನನಿಗೂ ಕೂಡ ಸ್ವರ್ಗ ಪ್ರಾಪ್ತಿ ಆಗಿತ್ತಂತೆ.ಇನ್ನು ಇಷ್ಟೆಲ್ಲ ಪಾ ಪಗಳನ್ನು ಮಾಡಿದರೂ ಕೂಡ ಅದು ಹೇಗೆ ಸ್ವರ್ಗ ಪ್ರಾಪ್ತಿಯಾಯ್ತು ಎಂದು ಆದರೆ ಇದು ಸತ್ಯ .ಇನ್ನು ಅಷ್ಟೆಲ್ಲಾ ಪಾಪಗಳನ್ನು ಮಾಡಿದರೂ ಕೂಡ ಆ ದುರ್ಯೋಧನನಿಗೆ ಸ್ವರ್ಗ ಹೇಗೆ ಪ್ರಾಪ್ತಿಯಾಯ್ತು ಎಂದು ತಿಳಿಯೋಣ ಬನ್ನಿ..

ಕುರುಕ್ಷೇತ್ರ ಕದನದಲ್ಲಿ ಅಧರ್ಮದ ವಿರುದ್ಧ ಹೋರಾಟದಲ್ಲಿ ದುರ್ಯೋಧನ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರೂ ಕೂಡ ಆತನಿಗೆ ಸ್ವರ್ಗ ಲಭಿಸುತ್ತದೆ. ಅದಕ್ಕೆ ಕಾರಣ ಅವನಲ್ಲಿದ್ದ ಕೆಲವು ಅದ್ಭುತ ಗುಣಗಳು ಎಂದು ನಂಬಲಾಗಿದೆ.ತುಂಬಿದ ಸಭೆಯಲ್ಲಿ ತನ್ನ ತಂದೆ ತಾಯಿಗಳ ಎದುರಲ್ಲಿ ಡ್ರೌಪದಿಗೆ ಮತ್ತು ಪಾಂಡು ಕುಮಾರರಿಗೆ ಅದೆಷ್ಟೊ ಅವಮಾನ ಮಾಡಿದ , ಜೂಜಾಟದಲ್ಲಿ ಮೋಸದಿಂದ 14 ವರ್ಷ ಪಾಂಡವರನ್ನು ಕಾಡಿಗಟ್ಟುವ ದುರ್ಯೋಧನನಿಗೆ ಸ್ವರ್ಗ ಎಂದರೆ ಹಲವಾರು ಜನ ನಂಬುವುದೇ ಇಲ್ಲ ಆದರೆ ಇದಕ್ಕೆ ಹಲವಾರು ಕಾರಣಗಳಿವೆ.

Duryodhana-war

ದುರ್ಯೋಧನ ಎಷ್ಟೇ ಅ ಧ ರ್ಮಿಯಾಗಿ ನಡೆದು ಕೊಂಡರು ಕೂಡ ಯಾವುದೇ ಪಾ ಪವನ್ನು ತನ್ನ ಕೆಲಸದಿಂದ ಯಾವತ್ತೂ ಮಾಡಿಲ್ಲ.ಹಲವಾರು ಕೆಲಸಗಳನ್ನು ತನ್ನ ಮಾವ ಶಕುನಿ ಕೈಯಿಂದ ಮಾಡಿಸುತ್ತಾನೆ.ನಿಮಗೆ ಗೊತ್ತಿರುವ ಹಾಗೆ ತುಂಬಿದ ಸಭೆಯಲ್ಲಿ ದ್ರೌಪದಿಯ ವ ಸ್ತ್ರ ಹರಣ ಮಾಡಲಾಗುತ್ತದೆ ಆದರೆ ಯಾವುದೇಕೆಲಸವನ್ನು ದುರ್ಯೋಧನ ನೇರವಾಗಿ ಮಾಡಿಲ್ಲಾ.ದ್ರೌಪದಿಯ ವ ಸ್ತ್ರ ಹ ರ ಣವನ್ನು ಸೋದರನಾದಂತ ದುಶ್ಯಾಸನ ನಿಂದ ಮಾಡಿಸುತ್ತಾನೆ.

ತನ್ನ ಕರ್ತವ್ಯದಲ್ಲಿ ಮತ್ತು ಆಡಳಿತದಲ್ಲಿ ಬಹಳ ನಿಷ್ಠೆ ಹೊಂದಿದ್ದ ದುರ್ಯೋಧನ ಮಹಾಭಾರತದ ಯುದ್ಧದ ನಂತರ ಪಾಂಡವರೆಲ್ಲ ಸತ್ತು ಸ್ವರ್ಗಕ್ಕೆ ಬಂದಾಗ ಅಲ್ಲಿ ದುರ್ಯೋಧನ ಇರುವುದನ್ನು ಕಂಡು ಭೀಮ ಯುಧಿಷ್ಠಿರನಿಗೆ ಪ್ರಶ್ನೆ ಕೇಳುತ್ತಾನೆ.”ದುರ್ಯೋಧನ ಇಷ್ಟೆಲ್ಲಾ ಮಾಡಿದರೂ ಅದು ಹೇಗೆ ದುರ್ಯೋಧನ ಸ್ವರ್ಗಕ್ಕೆ ಬಂದ?”ಎಂದು ಆಗ ಯಮಧರ್ಮರಾಯ ಸುಯೋಧನನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಕೊಡುತ್ತಾನೆ.

ದುರ್ಯೋಧನ ಒಬ್ಬ ಒಳ್ಳೆಯ ರಾಜ ಮತ್ತು ಸ್ನೇಹಕ್ಕೆ ಬೆಲೆ ಕೊಡುತ್ತಿದ್ದ ವ್ಯಕ್ತಿಯಾಗಿದ್ದ.ಶಕುನಿಯನ್ನು ತನ್ನ ಕೈಗೊಂಬೆಯಾಗಿರಿಸಿ ಹಲವಾರು ಆಟಗಳನ್ನು ಪಾಂಡವರ ವಿರುದ್ಧ ಆಡುತ್ತಾನೆ.
ಕುರು ಸಾಮ್ರಾಜ್ಯ ನಾಶಪಡಿಸಬೇಕೆಂಬ ಕಾರಣದಿಂದಾಗಿ ಬಂದ ಶಕುನಿಯ ಮಾತು ಕೇಳಿ ದುರ್ಯೋಧನ ಕೆಟ್ಟವನಾಗುತ್ತಾನೆ ಖಳನಾಯಕನಾಗುತ್ತಾನೆ.ಇದೇ ಕಾರಣಕ್ಕೆ ಹಲವಾರು ಕೆಟ್ಟ ಕಾರ್ಯಕ್ರಮಗಳನ್ನು ಅವನು ಮಾಡಿದ್ದಾನೆ.ಆದರೆ ದುರ್ಯೋಧನನು ತನ್ನ ಸ್ವಇಚ್ಛೆ ಇಂದ ಯಾವುದೇ ಕೆಟ್ಟ ಕೆಲಸಗಳನ್ನು ಮಾಡುವ ಇಚ್ಛೆ ಇರಲಿಲ್ಲ.ಎಲ್ಲವೂ ಆ ಕುತಂತ್ರಿ ಶಕುನಿಯ ಕಾಟದಿಂದಲೇ ಅವನು ಮಾಡುತ್ತಾನೆ.

ದೇವರ ನಿಯಮದ ಪ್ರಕಾರ ಯಾವ ವ್ಯಕ್ತಿ ಕರ್ತವ್ಯ ನಿಷ್ಠನೋ ಆತನಿಗೆ ಸ್ವರ್ಗ ಎನ್ನುವ ಮಾತಿದೆ.ಅದರಂತೆ ಕೊಟ್ಟ ಮಾತನ್ನು ಎಂದಿಗೂ ತಪ್ಪದ ಸುಯೋಧನ ಆಡಳಿತದಲ್ಲಿ ನಿಷ್ಠಾವಂತನಾಗಿದ್ದ.ಕರ್ಣ ನನ್ನು ಸೂತಪುತ್ರ ಎಂದು ಎಲ್ಲರೂ ಅವಮಾನ ಮಾಡಿದರೂ ಸಹ ದುರ್ಯೋಧನ ಮಾತ್ರ ತನ್ನ ಪಟ್ಟ ಸ್ನೇಹಿತನನ್ನು ಕೈಬಿಡುವುದಿಲ್ಲ,ಅವನನ್ನು ಅಂಗ ದೇಶದ ರಾಜನನ್ನಾಗಿ ಮಾಡುತ್ತಾನೆ.ಮುಂದೆ ಇವರಿಬ್ಬರು ಪ್ರಾಣ ಸ್ನೇಹಿತರಾಗುತ್ತಾರೆ.ದುರ್ಯೋಧನನು ಪಕ್ಷಪಾತ ಇಲ್ಲದೆ ಎಲ್ಲ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದನು.

ಅಧಿಕಾರ ಮತ್ತು ಪ್ರತಿಭೆಯ ಬಗ್ಗೆ ದುರ್ಯೋಧನ ಕೇಳಿದ ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ದ್ರೋಣಾಚಾರ್ಯರು ಕೃಷ್ಣನಿಗೆ ದುರ್ಯೋಧನನ ಬಗ್ಗೆ ದೂರು ಹೇಳುತ್ತಿದ್ದರು.ಇವನ ಪ್ರಶ್ನೆಗಳು ವ್ಯವಸ್ಥಿತ ದೋಷಗಳನ್ನು ಎತ್ತಿ ತೋರಿಸುತ್ತಿದ್ದವು.ಇದನ್ನು ಸಂಪ್ರದಾಯವಾದಿ ಬುದ್ಧಿ ಇದ್ದವರು ಒಪ್ಪಿ ಕೊಳ್ಳುತ್ತಿರಲಿಲ್ಲ .ದುರ್ಯೋಧನ ಗುರು ಬಲರಾಮನಿಗೂ ಅಂದರೆ ಕೃಷ್ಣನ ಅಣ್ಣನಿಗೆ ದುರ್ಯೋಧನ ಅಂದ್ರೆ ಅಷ್ಟೇ ಇಷ್ಟವಾಗಿದ್ದರು.ಆದ್ದರಿಂದಲೇ ಅವರು ದುರ್ಯೋಧನನಿಗೆ ಗಧಾ ವಿದ್ಯೆ ಹೇಳಿಕೊಡುತ್ತಾರೆ.

ಸುಯೋಧನ ಭೀಮನಷ್ಟೇ ಶಕ್ತಿ ಶಾಲಿಯಾಗಿದ್ದನು ಆದರೆ ಕೃಷ್ಣನ ಸಹಾಯದಿಂದ ಭೀಮ ದುರ್ಯೋಧನನ ಮೇಲೆ ಗದಾಯುದ್ಧದಲ್ಲಿ ಗೆಲ್ಲುತ್ತಾನೆ .ದುರ್ಯೋಧನ ಸಮಾಜದ ಕೆಳ ವರ್ಗದ ಬಗ್ಗೆ ಬಡವರ ಬಗ್ಗೆ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ,ಈ ಕಾರಣದಿಂದಲೇ ಭೀಷ್ಮ ಕೂಡ ಒಳಗಿಂದ ಒಳಗೆ ದುರ್ಯೋಧನನ ಬಗ್ಗೆ ಮಮತೆ ಹಾಗೂ ಪ್ರೀತಿ ತೋರಿಸುತ್ತಿದ್ದರು. ಅದೇ ಕಾರಣಕ್ಕೆ ಭೀಷ್ಮ ಮಹಾಭಾರತದ ಕುರುಕ್ಷೇತ್ರದ ಯುದ್ದದಲ್ಲಿ ದುರ್ಯೋಧನ ಪರವಾಗಿ ಯುದ್ಧ ಮಾಡುತ್ತಾರೆ.ಯುದ್ಧದ ಕೊನೆಯಲ್ಲಿ ತನ್ನ ಒಡಹುಟ್ಟಿದವರು ಮತ್ತು ಬಳಗದವರನ್ನೆಲ್ಲ ಕಳೆದುಕೊಂಡರು ಕೂಡ ದುರ್ಯೋಧನ ದುಃಖಿಸಿರಲಿಲ್ಲ ಆದರೆ ತನ್ನ ಪ್ರಿಯಮಿತ್ರ ಕರ್ಣನ ಸಾವು ಆತನ ದುಃಖ ತಡೆಯಲಾಗದೆ ವೈಶಂಪಾಯನ ಸರೋವರದಲ್ಲಿ ತಪೋನಿತನಾಗಿರುತ್ತಾನೆ.

ಈ ಎಲ್ಲ ಒಳ್ಳೆಯ ಗುಣ ಹೊಂದಿದ್ದ ಸುಯೋಧನನಿಗೂ ಕೂಡ ಅಲ್ಪ ಕಾಲ ಸ್ವರ್ಗ ಪ್ರಾಪ್ತಿಯನ್ನು ಪುರಾಣಗಳು ಸಾರುತ್ತವೆ.ಈ ಒಂದು ಕಾರಣಕ್ಕೆ ಭಾರತ ದೇಶದ ಕೇರಳ ರಾಜ್ಯದಲ್ಲಿ ದುರ್ಯೋಧನನಿಗಾಗಿ ಅತಿ ದೊಡ್ಡದಾದಂತ ದೇವಸ್ಥಾನವನ್ನು ಕೂಡ ಕಟ್ಟಲಾಗಿದೆ.ಪ್ರತಿ ವರ್ಷ ಇಲ್ಲಿ ಕೌರವೇಶನಿಗೆ ಜಾತ್ರೆ ಕೂಡ ನಡೆಯುತ್ತದೆ.ಇದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕುರುವ ಎನ್ನುವ ಸಮುದಾಯ ಮಾತ್ರವೇ ದುರ್ಯೋಧನನ್ನು ಆರಾಧಿಸುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •