ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪಿಎಂ ನವಾಜ್ ಶರೀಫ್ ಪುತ್ರಿ ಮರಿಯಮ್ ನವಾಜ್ ಸದ್ಯದ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಾವು ಜೈಲಿನಲ್ಲಿದ್ದ ವೇಳೆ ಇಮ್ರಾನ್ ಸರ್ಕಾರ್ ತಮ್ಮ ಕೋಣೆ ಮತ್ತು ಬಾತ್‍ರೂಮಿನಲ್ಲಿ ಕ್ಯಾಮೆರಾ ಅಳವಡಿಸಿತ್ತು ಎಂದು ಆರೋಪಿಸಿದ್ದಾರೆ.

ಇಮ್ರಾನ್ ಸರ್ಕಾರ ಮಹಿಳೆಯನ್ನ ಅವಮಾನಿಸಿದೆ. ಜೈಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ರೆ ಇಮ್ರಾನ್ ಸರ್ಕಾರಕ್ಕೆ ಜನರ ಮುಂದೆ ಬರೋದಕ್ಕೂ ನಾಚಿಕೆ ಪಡಬೇಕಾಗುತ್ತದೆ. ಜೈಲಿನ ಮಹಿಳೆಯರ ಹೇಗೆ ನಡೆದುಕೊಳ್ಳಲಾಗುತ್ತೆ ಎಂಬ ಸತ್ಯ ಹೇಳಿದ್ರೆ ಆಡಳಿತದಲ್ಲಿರೋರಿಗೆ ಮುಖ ತೋರಿಸೋದಕ್ಕೆ ಲಾಯಕ್ ಆಗಿರಲ್ಲ. ತಂದೆಯ ಮುಂದೆಯೇ ಆತನ ಮಗಳನ್ನ ಬಂಧಿಸೋದ ಆಕೆಯ ಮೇಲೆ ಬಲ ಪ್ರಯೋಗಿಸುವ ಸರ್ಕಾರವಿದು ಎಂದು ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Daughter-Nawaz-Sharif

ಕೆಲ ದಿನಗಳ ಹಿಂದೆ ಮರಿಯಮ್ ಉಳಿದುಕೊಂಡಿದ್ದ ಹೋಟೆಲ್ ಕೋಣೆಯೊಳಗೆ ಪೊಲೀಸರು ನುಗ್ಗಿದ್ದರು. ಹೋಟೆಲ್ ನಲ್ಲಿದ್ದ ಮರಿಯಮ್ ಪತಿಯನ್ನ ಬಂಧಿಸಿದ್ದರು. ಚೌಧರಿ ಶುಗರ್ ಮಿಲ್ ಪ್ರಕರಣದಲ್ಲಿ ಮರಿಯಮ್ ಅವರ ಬಂಧನವಾಗಿತ್ತು. ಇಮ್ರಾನ್ ಖಾನ್ ಅವಧಿಯಲ್ಲಿ ಮರಿಯಮ್ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •