ಪಾಟ್ನಾ: ಪತ್ನಿ ನೀಡಿದ ಚಾಕುವಿನಿಂದ ಸ್ವಂತ ತಮ್ಮನನ್ನೇ ಅಣ್ಣ ಕೊಲೆಗೈದಿರುವ ಘಟನೆ ಬಿಹಾರದ ಛಪ್ರಾದ ಭಗವಾನ ಬಜಾರ್ ಕ್ಷೇತ್ರದ ಶಿವ ಬಜಾರ್ ಗಲ್ಲಿಯಲ್ಲಿ ನಡೆದಿದೆ.

ಅರವಿಂದ್ ಚೌಧರಿ ಅಣ್ಣನಿಂದ ಕೊಲೆಯಾದ ತಮ್ಮ. ಆರೋಪಿ ಅಣ್ಣ ಚಂದನ್, ತಾಯಿ ಜೊತೆ ಜಗಳ ಆಡುತ್ತಿದ್ದನು. ಈ ವೇಳೆ ಅಲ್ಲಿಗೆ ಬಂದ ಸೋದರ ಅಮ್ಮನೊಂದಿಗೆ ಹೀಗೆ ನಡೆದುಕೊಳ್ಳುವುದು ಉಚಿತವಲ್ಲ ಎಂದು ತಿಳಿ ಹೇಳಿದ್ದಾನೆ. ಈ ಸಂದರ್ಭದಲ್ಲಿ ಚಂದನ್ ಮತ್ತು ಅರವಿಂದ್ ನಡುವೆ ಜಗಳ ಆರಂಭವಾಗಿದೆ.
ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಚಂದನ್ ಗೆ ಪತ್ನಿ ಚಾಕು ನೀಡಿದ್ದಾಳೆ. ಪತ್ನಿ ನೀಡಿದ ಚಾಕುವಿನಿಂದ ಸೋದರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
Anna-killed
ಗಂಭೀರವಾಗಿ ಗಾಯಗೊಂಡಿದ್ದ ಚಂದನ್ ನನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚು ರಕ್ತಸ್ರಾವವಾದ ಹಿನ್ನೆಲೆ ಅರವಿಂದ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮೃತ ಅರವಿಂದ್ ಆಟೋ ಚಾಲನೆ ಮಾಡಿಕೊಂಡು ಇಡೀ ಕುಟುಂಬದ ನಿರ್ವಹಣೆ ಮಾಡುತ್ತಿದ್ದನು.
ವಿಷಯ ತಿಳಿಯುತ್ತಿದ್ದಂತೆ ಖಾಸಗಿ ಆಸ್ಪತ್ರೆಯಲ್ಲಿದ್ದ ಶವವನ್ನ ವಶಕ್ಕೆ ಪಡೆದು, ಮರಣೋತ್ತರ ಶವ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಆರೋಪಿ ಚಂದನ್ ಚೌಧರಿ ಮತ್ತು ಪ್ರಿಯಾಂಕಾ ಚೌಧರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಮೃತ ಅರವಿಂದ್ ಪತ್ನಿ ಹೇಳಿಕೆಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆಗೆ ಬಳಸಲಾದ ಚಾಕು ಸಹ ವಶಕ್ಕೆ ಪಡೆಯಲಾಗಿದೆ ಎಂದು ಭಗವಾನ್ ಬಜಾರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮುಕೇಶ್ ಕುಮಾರ್ ಹೇಳಿದ್ದಾರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •