ಪ್ರತಿದಿನ ವಿದ್ಯಾರ್ಥಿಗಳಿಗೆ 10 GB ಡೇಟಾ ನೀಡಲಿದೆ ಮೋದಿ ಸರ್ಕಾರ,ಅಸಲಿಯತ್ತು ನೋಡಿ ಈಗಲೇ.

ಸ್ನೇಹಿತರೆ ಇದು ಸಂಪೂರ್ಣ ಡಿಜಿಟಲ್ ಯುಗ ಇಲ್ಲಿ ಈಗ ಎಲ್ಲ ಕೆಲಸವೂ ಕೂಡ ಕೂತಲ್ಲಿಯೇ ಆಗುವಷ್ಟು ತಂತ್ರಜ್ಞಾನ ಮುಂದುವರಿದಿದೆ. ಹೀಗಿರುವಾಗ ಜನರು ಕೂಡ ಈ ತಂತ್ರಜ್ಞಾನವನ್ನೇ ಹೆಚ್ಚು ಅವಲಂಬಿಸಿದ್ದಾರೆ. ದಿನನಿತ್ಯದ ಸಾವಿರಾರು ಸಂಗತಿಗಳನ್ನು ಜನರು ಆನ್ಲೈನ್ ಮೂಲಕವೇ ತಿಳಿದುಕೊಳ್ಳುತ್ತಾರೆ ಹಾಗು ಇತರರಿಗೂ ತಿಳಿಸುತ್ತಾರೆ. ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಡುವುದು ಈಗ ಬಹಳ ಬೇಗ, ಅದಕ್ಕೆ ಮುಖ್ಯ ಕಾರಣ ಇಂಟರ್ನೆಟ್. ಹೀಗೆ ಈ ಇಂಟರ್ನೆಟ್ ಎನ್ನುವುದು ಮನುಕುಲಕ್ಕೆ ಎಷ್ಟು ಒಳ್ಳೆಯದೋ ಅದೇ ರೀತಿ ಅದರ ದುರ್ಬಳಕೆ ಕೂಡ ಅಷ್ಟೇ ಅಪಾಯಕಾರಿ ಆಗಿದೆ.

ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿದ್ಯಾವಂತರೇ ಈ ರೀತಿಯ ಅಂತರ್ಜಾಲದ ದುರ್ಬಳಕೆ ಮಾಡಿಕೊಂಡು ಜನರನ್ನು ಲೂಟಿ ಮಾಡುತ್ತಿದ್ದಾರೆ, ಅದು ಕೂಡ ನಿಮಗೆ ತಿಳಿಯದಂತೆ. ಅಂತಹುದೇ ಒಂದು ಸುದ್ದಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ. ಪ್ರತಿ ನಿತ್ಯ ನಿಮ್ಮ ವಾಟ್ಸಾಪ್ ನಲ್ಲಿ ಅನೇಕ ಸಂದೇಶಗಳು ಬರುತ್ತಲೇ ಇರುತ್ತವೆ, ಆ ಆಫರ್ ಇದೆ, ಈ ಆಫ಼ರ್ ಇದೆ ಎಂದು ಸಾಕಷ್ಟು ಲಿಂಕ್ ಗಳು ನಿಮ್ಮ ಮೊಬೈಲ್ ಗೆ ಬರುತ್ತವೆ. ಆದರೆ ಈ ಲಿಂಕ್ ಗಳ ಹಿಂದಿನ ರಹಸ್ಯವೇ ಬೇರೆ.

10-GB-data

ಹೌದು ಪಕ್ಕಾ ಸರ್ಕಾರೀ ವೆಬ್ಸೈಟ್ ಅಥವಾ ಕಂಪನಿಗಳ ವೆಬ್ಸೈಟ್ ರೀತಿ ಇರುವ ಈ ಲಿಂಕ್ ಗಳನ್ನೂ ನೀವು ಒತ್ತಿದರೆ ಮುಗಿತು ಕಥೆ, ಕ್ಶಣ ಮಾತ್ರದಲ್ಲಿ ನಿಮ್ಮ ಖಾಸಗಿ ಮಾಹಿತಿಗಳು ಬ್ಯಾಂಕ್ ವಿವರಗಳು ಎಲ್ಲವು ಕೂಡ ಆ ಖದೀಮರ ಕೈಗೆ ಸೇರುತ್ತದೆ. ಇಷ್ಟೇ ಅಲ್ಲದೆ ನಿಮ್ಮ ಮೊಬೈಲ್ ನಲ್ಲಿ ಅನೇಕ ವೈರಸ್ ಗಳು ಕೂಡ ನುಗ್ಗಬಹುದು. ಈಗ ಅದೇ ರೀತಿಯಲ್ಲಿ ಮತ್ತೊಂದು ಸಂದೇಶ ವೈರಲ್ ಆಗುತ್ತಿದೆ. ಹೌದು ಲಾಕ್ ಡೌನ್ ಇರುವುದರಿಂದ ಸದ್ಯ ಶಾಲೆಗಳು ಮುಚ್ಚಿವೆ, ಹೀಗಾಗಿ ವಿದ್ಯಾರ್ಥಿಗಳು ಓಂಲಿನೆ ಮೂಲಕವೇ ಶಿಕ್ಷಣಕ್ಕೆ ಮುಂದಾಗಿದ್ದಾರೆ, ಅವರ ಸಹಾಯಕ್ಕಾಗಿ ಮೋದಿ ಸರ್ಕಾರ ದಿನಕ್ಕೆ ಹತ್ತು ಜಿಬಿ ಡೇಟಾ ನೀಡುತ್ತಿದೆ ಎಂದು ಒಂದು ಲಿಂಕ್ ಸಹಿತ ಖದೀಮರು ಈ ಸಂದೇಶ ವೈರಲ್ ಮಾಡಿದ್ದಾರೆ. ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಪುಗ್ಸಟ್ಟೆ ಡೇಟಾ ಸಿಗುತ್ತದೆ ಎಂದು ಅನೇಕ ಪೋಷಕರು ಈ ಲಿಂಕ್ ವತ್ತಿ ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ದಯವಾಯಿತ್ತು ಇಂತಹ ಸಂದೇಶಗಳಿಗೆ ಯಾರು ಕೂಡ ಪ್ರತಿಕ್ರಿಯೆ ನೀಡಬೇಡಿ. ಇದೊಂದು ನಿಮ್ಮನ್ನು ಮೋಸಗೊಳಿಸುವ ಜಾಲ ಆಗಿರುತ್ತದೆ.

ಕರೋನಾ ಯುಗದಲ್ಲಿ ಮೋದಿ ಸರ್ಕಾರ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಪ್ರತಿದಿನ 10 ಜಿಬಿ ಉಚಿತ ಇಂಟರ್ನೆಟ್ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ವೈರಲ್ ಸಂದೇಶದೊಂದಿಗೆ ಲಿಂಕ್ ಇದೆ, ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ಉಚಿತ ಡೇಟಾ ಸಿಗುತ್ತದೆ ಎಂದು ತಿಳಿಸಲಾಗುತ್ತಿದೆ. ಎಂಎಚ್‌ಆರ್‌ಡಿಯ ಅಧಿಕೃತ ವೆಬ್‌ಸೈಟ್ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಉಚಿತ ಇಂಟರ್ನೆಟ್ ಡೇಟಾವನ್ನು ಒದಗಿಸಲು ಸಂಬಂಧಿಸಿದ ಯಾವುದೇ ಯೋಜನೆ ನಾವು ಘೋಷಿಸಿಲ್ಲ ಎಂದಿದೆ . ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಟ್ವಿಟರ್ ಹ್ಯಾಂಡಲ್ ಪರಿಶೀಲಿಸಿದ ಬಳಿಕವೂ ಕೂಡ  ಯಾವುದೇ ಮಾಹಿತಿ ಇಲ್ಲ. ಹೀಗಾಗಿ ದಯವಿಟ್ಟು ಮೋಸ ಹೋಗಬೇಡಿ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...