
ಸೆಲೆಬ್ರಿಟಿಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೊ ಅಥವಾ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅದೇ ರೀತಿ ನಮ್ಮ ಸ್ಯಾಂಡಲ್ ವುಡ್ ನ ಸಂತೂರ್ ಮಮ್ಮಿ ಯಾಗಿರುವ ಶ್ವೇತಾ ಶ್ರೀವಾತ್ಸವ್ ಕೂಡ ಸದಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುತ್ತಿರುತ್ತಾರೆ. ಇದೀಗ ಹೆಚ್ಚಾಗಿ ಅವರು ಮಗಳು ಅಶ್ಮಿತಾ ಜೊತೆಯೇ ಫೋಟೊ, ವಿಡಿಯೋ ಶೇರ್ ಮಾಡುತ್ತಿರುತ್ತಾರೆ.
ಶ್ವೇತಾ ಶ್ರೀವಾತ್ಸವ್ ಅವರು ಇದೀಗ ಒಂದು ವಿಡಿಯೋ ಶೇರ್ ಮಾಡಿದ್ದು ಅದು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದೆ ಅಂದರೆ ತಪ್ಪಾಗಲ್ಲ. ಯಾಕಂದರೆ ಅಷ್ಟು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹೌದು,ಬಾಲಿವುಡ್ ನಲ್ಲಿ ಕರೀನಾ ಕಪೂರ್ ಡ್ಯಾನ್ಸ್ ಮಾಡಿದ್ದ ಬೇಬೂ ಮೆ ಬೇಬೂ ಅನ್ನುವ ಹಾಡಿಗೆ ಶ್ವೇತಾ ಶ್ರೀ ವಾತ್ಸವ್ ಹಳದಿ ಬಣ್ಣದ ಹಾ-ಟ್ ಡ್ರೆಸ್ ಹಾಕಿ ತ್ ಸೆ-ಕ್ಸಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
ಇವರ ಡ್ಯಾನ್ಸ್ ನೋಡಿ ನಿಜಕ್ಕೂ ಇವರಿಗೆ ಮದುವೆ ಆಗಿ ಮಗು ಇದೆಯಾ ಎಂಬ ಭಾವನೆ ಬರುತ್ತದೆ. ಅಷ್ಟು ಬೋಲ್ಡ್ ಆಗಿ ಕಂಡು ಬಂದಿದ್ದಾರೆ. ಶ್ವೇತಾ ಶ್ರೀವಾತ್ಸವ್ ಅವರು ಇನ್ಸ್ಟಾಗ್ರಾಂ ನಲ್ಲಿ ಸದಾ ಒಂದಲ್ಲ ಒಂದು ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಅವರ ವರ್ಕೌಟ್ ವಿಡಿಯೋ, ಅದೇ ರೀತಿ ಮಗಳು ಅಶ್ಮಿತಾ ಜೊತೆ ಆಟ ಆಡುವ ಅಥವಾ ಮಗಳ ವಿಡಿಯೋವನ್ನು , ಫ್ಯಾಮಿಲಿ ಔಟಿಂಗ್ ಫೋಟೋಗಳನ್ನು, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಅವರು ತಮ್ಮ ಮಗಳನ್ನು ನೋಡಿಕೊಳ್ಳುವ ರೀತಿಗೆ ಎಲ್ಲರೂ ಭೇಷ್ ಅಂದಿದ್ದಾರೆ. ಅಷ್ಟೆ ಅಲ್ಲ ಮಗಳಿಗೆ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅನ್ನುವುದನ್ನು, ಅದೇ ರೀತಿ ಸಂಪ್ರದಾಯ ಸಂಸ್ಕೃತಿಗಳ ಬಗ್ಗೆ ಈಗಿನಿಂದಲೇ ಹೇಳಿಕೊಡುತ್ತಿದ್ದಾರೆ. ಇದು ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.ಅವರು ಶೂಟಿಂಗ್ ನಲ್ಲಿ ಅದೆಷ್ಟೇ ಬ್ಯುಸಿ ಇದ್ದರೂ ಮಗಳ ಜೊತೆ ಟೈಂ ಕಳೆಯುವುದನ್ನು ಮಿಸ್ ಮಾಡುವುದಿಲ್ಲ.
ಇನ್ನು ಇವರು, ಆಗಾಗ್ಗೆ ಟ್ರೆಂಡ್ ಹಾಡುಗಳಿಗೆ ರೀಲ್ಸ್ ಮಾಡುತ್ತಾರೆ. ಅವುಗಳು ವೈರಲ್ ಆಗುತ್ತವೆ. ಇನ್ನು ಅವರು ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಮಾಡ್ ಹಾಗೂ ಕ್ಲಾಸಿಕ್ ಲುಕ್ ನಿಂದ ಆಗಾಗ್ಗೆ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಮಗಳ ಜೊತೆ ಕೂಡ ಅನೇಕ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಹೌದು, ಶ್ವೇತಾ ಶ್ರೀವಾತ್ಸವ್ ಅವರು ಕನ್ನಡದ ಮುಖಾ ಮುಖಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದವರು.
ಆದರೆ ಇವರಿಗೆ ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ಅದು ಸಿಂಪಾಲ್ಲಾಗಿ ಒಂದು ಲವ್ ಸ್ಟೋರಿ. ಆ ನಂತರ ಮತ್ತೆ ಕೆಲ ಸಿನಿಮಾ ಮಾಡಿದ್ದರು.ಅದರಲ್ಲಿ ಫೇರ್ ಆಂಡ್ ಲವ್ಲಿ ಹಾಗೂ ಕಿರಗೂರಿನ ಗಯ್ಯಾಳಿಗಳು ಸಿನಿಮಾ ಹಿಟ್ ಆಗಿತ್ತು. ಆ ನಂತರ ವೈಯಕ್ತಿಕ ಕಾರಣಗಳಿಂದಾಗಿ ನಟನೆಯಿಂದ ದೂರವಿದ್ದ ಅವರು ಈಗ ಮತ್ತೆ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದಾರೆ.ಹೌದು, ಮಗಳು ಅಶ್ಮಿತಾ ಹುಟ್ಟಿದ ಮೇಲೆ ಶ್ವೇತಾ ಶ್ರೀವಾತ್ಸವ್ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ರು.
ಸದ್ಯ ಅವರು ಪುನಃ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ನಟಿಸಿದ್ದ ‘ಹೋಪ್’ ಸಿನಿಮಾ ತೆರೆಕಂಡಿತ್ತು.ಅದೇ ರೀತಿ ’ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ. ಹಾಗೆಯೇ ‘ಚಿಕ್ಕಿಯ ಮೂಗುತಿ’ ಎಂಬ ಮಹಿಳಾ ಪ್ರಧಾನ ಸಿನಿಮಾವನ್ನು ಶ್ವೇತಾ ಶ್ರೀವಾತ್ಸವ್ ಒಪ್ಪಿಕೊಂಡಿದ್ದಾರೆ. ಈ ಮಾಹಿತಿ ಕುರಿತಾಗಿ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram
Comments are closed.