Janhvi Kapoor: ಇತರ ಸಿನಿಮಾ ಇಂಡಸ್ಟ್ರಿ(Film industry)ಗೆ ಹೋಲಿಸಿದರೆ ಬಾಲಿವುಡ್ (Bollywood) ನಲ್ಲಿ ಸ್ವಲ್ಪ ರಂಗು ಜಾಸ್ತಿ ಎಂದು ಹೇಳಬಹುದು ಅದರಲ್ಲೂ ಸ್ಟಾರ್ ಕಿಡ್ (Star Kid) ಗಳ ಜಮಾನ ಇದು. ಸಾಕಷ್ಟು ಸಿನಿಮಾಗಳಲ್ಲಿ ಇದೀಗ ಸ್ಟಾರ್ ಕಿಡ್ ಗಳನ್ನು ಹಾಕಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಶ್ರೀದೇವಿ ಮಕ್ಕಳಾದ ಜಾನ್ವಿ ಕಪೂರ್, ಖುಷಿ ಕಪೂರ್, ಶಾರುಖ್ ಖಾನ್ ಅವರ ಮಗಳು ಸುಹಾನ ಶಾರುಖ್ ಹೀಗೆ ಹಲವು ಸ್ಟಾರ್ ಕಿಡ್ಗಳು ಇಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಜೋಯ ಖಾನ್ (Zoya Khan) ಬಾಲಿವುಡ್ ನ ಬಹುತೇಕ ಎಲ್ಲಾ ಸ್ಟಾರ್ ಕಿಡ್ ಗಳನ್ನು ಇಟ್ಟುಕೊಂಡು ದಿ ಆರ್ಚೀಡ್ ಎನ್ನುವಂತಹ ಸಿನಿಮಾವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಇನ್ನು ಒಂದು ಕಾಲದ ಸ್ಟಾರ್ ನಟಿ ಆಗಿದ್ದ ಶ್ರೀದೇವಿ (Shreedevi) ಹಾಗೂ ನಿರ್ಮಾಪಕ ಬೋನಿ ಕಪೂರ್ (Boni Kapoor) ಅವರ ಮಕ್ಕಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಇಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.
ಅದರಲ್ಲೂ ಜಾನ್ವಿ ಕಪೂರ್ 2022 ರಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಜಾನ್ವಿ ಕಪೂರ್ ಇವರಿಗೆ ಅಭಿನಯಿಸಿದ ಸಿನಿಮಾಗಳು ಹೆಚ್ಚು ಯಶಸ್ಸನ್ನು ಕಾಣಲಿಲ್ಲ. ಶ್ರೀದೇವಿಯಂತೆ ಜಾನ್ವಿ ಕಪೂರ್ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರ ಎನ್ನುವ ಅನುಮಾನ ಹಲವರಲ್ಲಿ ಮೂಡಿದಂತು ನಿಜ. ಆದರೆ ಈ ವರ್ಷ ಅವರ ಗುಡ್ ಲಕ್ ಜರಿ ಸಿನಿಮಾದ ಮೂಲಕ ತುಸು ಫೇಮಸ್ ಆಗಿದ್ದಾರೆ.
Janhvi Kapoor Lifestyle
ಇನ್ನು ಬೋನಿ ಕಪೂರ್ ತಮ್ಮ ಮಗಳಿಗಾಗಿ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದಾರೆ ಇದು ಮಲಯಾಳಂ ನ ಹೆಲನ್ ಸಿನಿಮಾದ ರಿಮೇಕ್ ಆಗಿದೆ. ಹಾಗಾಗಿ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇನ್ನು ಜಾನ್ವಿ ಕಪೂರ್ ಅವರ ಸೋಶಿಯಲ್ ಮೀಡಿಯಾ ಲೈಫ್ ನೋಡುವುದಾದರೆ ಸಿನಿಮಾದಲ್ಲಿ ಹೆಚ್ಚು ಫೇಮಸ್ ಆಗದೆ ಸಿನಿ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಸೋತರು ಜಾನ್ವಿ ಕಪೂರ್ ಅವರ ಕ್ರೇಜ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ.
ಜಾನ್ವಿ ಕಪೂರ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಯಾವ ಸೆಲೆಬ್ರೆಟಿಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಪೋಸ್ಟುಗಳನ್ನು ಹಾಕುತ್ತಾರೆ ದಿನವೂ ತಪ್ಪದೇ ಹಾಟ್ ಫೋಟೋಶೂಟ್ ಮಾಡಿಸಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾರೆ. ಜಾನ್ವಿ ಕಪೂರ್ ಅವರು ತಮ್ಮ ಪ್ರತಿ ವಿಭಿನ್ನವಾದ ಪೋಸ್ಟು ಗಳಿಗೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ ಪಡೆದುಕೊಳ್ಳುತ್ತಾರೆ. Janhvi Kapoor Lifestyle
ಹೊಸ ವರ್ಷಕ್ಕೆ ಕಾಲಿಟ್ಟಿರುವ ಜಾನ್ವಿ ಕಪೂರ್ ಅವರ ಖಾತೆ ಇನ್ನಷ್ಟು ಫಾಲೋವರ್ಸ್ ಸೇರಿಕೊಂಡಿದ್ದಾರೆ. ಹೌದು, ಜಾನ್ವಿ ಕಪೂರ್ ಇದೀಗ ತಮ್ಮ ಸೋಶಿಯಲ್ ಮೀಡಿಯಾ ಅಭಿಮಾನಿಗಳನ್ನ ಹೆಚ್ಚಿಸಿಕೊಂಡಿದ್ದು ಸುಮಾರು 21 ವಿಲಿಯನ್ ಫಾಲೋವರ್ಸ್ (21M Followers) ಅನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಹೊಂದಿದ್ದಾರೆ. ತಾಯಿಯಂತೆ ಸೀರೆಯಲ್ಲಿ ಸಾಕಷ್ಟು ಮಿಂಚುತ್ತಾರೆ ಜಾನ್ವಿ.
ಆದರೆ ಆಧುನಿಕ ಉಡುಪು ಹಾಗೂ ಹಾಟ್ ಫೋಟೋ ಶೂಟ್ ಎನ್ನುವ ವಿಷಯ ಬಂದ್ರೆ ಜಾನ್ವಿ ಕಪೂರ್ ಅವರನ್ನ ಮೀರಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ ಎನಿಸುತ್ತದೆ. ಹೊಸ ವರ್ಷದ ಆರಂಭದಲ್ಲಿಯೂ ಕೂಡ ಜಾನ್ವಿ ಕಪೂರ್ ಹೊಸ ಫೋಟೋ ಶೂಟ್ ಮಾಡಿಸಿ instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ಜಾನ್ವಿ ಕಪೂರ್ ಅವರ ಬಟ್ಟೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಜನ ತರಾವರಿ ಕಮೆಂಟ್ ಮಾಡುತ್ತಾರೆ ಆದರೆ ಕೆಡಿಸಿಕೊಳ್ಳುವುದಿಲ್ಲ.
ತಮಗೆ ಸರಿ ಅನ್ನಿಸಿದ ರೀತಿಯಲ್ಲಿ ಇರುತ್ತಾರೆ ಹಿಂದೆ ಒಮ್ಮೆ ಕಾಫಿ ವಿತ್ ಕರಣ್ ಎನ್ನುವ ಶೋನಲ್ಲಿ ಭಾಗವಹಿಸಿದ ಜಾನ್ವಿ ಕಪೂರ್ ಸ್ವತಃ ತಾವೇ ಈ ಮಾತನ್ನು ಹೇಳಿದ್ದರು ನಾನು ನನಗೆ ಸರಿ ಅನಿಸಿದ್ದನ್ನು ಮಾಡುತ್ತೇನೆ ಎಂದು. ಇನ್ನು ಸೌತ್ ಸಿನಿಮಾದಲ್ಲಿ ನಟಿಸುವುದಕ್ಕೂ ಕೂಡ ಜಾನ್ವಿ ಕಪೂರ್ ಮುಂದಾಗಿದ್ದಾರೆ.
ನಟಿ ಜಾನ್ವಿ ಕಪೂರ್ ನಟಿ ತಾಯಿ ಶ್ರೀದೇವಿಯಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನೂ ಗುರುತಿಸಿಕೊಂಡಿಲ್ಲ ಆದರೆ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಅವರಿಗೆ ಅವಕಾಶಗಳಂತೂ ಕಡಿಮೆ ಆಗಿಲ್ಲ. ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಟಿ ಜಾನ್ವಿ ಕಪೂರ್ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.