ಬಾಲಿವುಡ್ ನ ಸ್ಟಾರ್ ಕಪಲ್ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಇವರಿಗೆ ಒಬ್ಬಳು ಮುದ್ದಾದ ಹೆಣ್ಣು ಮಗು ಕೂಡ ಇದ್ದು, ಯಾವುದೇ ಗಾಸಿಪ್ ಇಲ್ಲದೆ ಸಾಕಷ್ಟು ವರ್ಷಗಳಿಂದ ಜೊತೆಯಾಗಿರುವ ಮುದ್ದಾದ ಜೋಡಿ ಇದು. ಬಾಲಿವುಡ್ ಮಾತ್ರವಲ್ಲದೇ ದೇಶಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ನಟಿ ಐಶ್ವರ್ಯ ರೈ ಬಚ್ಚನ್. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಐಶ್ವರ್ಯ ರೈ ಬಚ್ಚನ್ ಈಗಲೂ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ.
ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿ ಹದಿನೈದು ವರ್ಷಗಳೇ ಕಳೆದಿವೆ. ಇತ್ತೀಚೆಗೆ ಸಣ್ಣ ಸಣ್ಣ ಕಾರಣಗಳಿಗೂ ವಿ-ಚ್ಛೇ-ದ-ನ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಗುವನ್ನು ಪಡೆದ ನಂತರವೂ ಒಟ್ಟಿಗೆ ಇರುವ ಜೋಡಿ ಆಗಿರುವ ಇತರರಿಗೂ ಮಾದರಿ ಆಗಿದ್ದಾರೆ ಹಾಗಾಗಿ ಇವರನ್ನು ಜೋಡಿ ಎಂದೇ ಕರೆಯಲಾಗುತ್ತೆ.
ಐಶ್ವರ್ಯ ರೈ ಬಚ್ಚನ್ ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ ಅವರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಸಾಕಷ್ಟು ಪಾಲೋವರ್ಸ್ ಹೊಂದಿದ್ದಾರೆ. ಯಾರದ್ದಾದರೂ ದೃಷ್ಟಿ ಬೀಳಬಹುದು ಎನ್ನುವಷ್ಟಮಟ್ಟಿಗೆ ಅನ್ಯೋನ್ಯವಾಗಿರುವ ಈ ದಂಪತಿಯ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಐಶ್ವರ್ಯ ರೈ ಬಚ್ಚನ್ ಹೇಳಿದ ಮಾತುಗಳು ಸಖತ್ ಕಾಮಿಡಿ ಆಗಿತ್ತು.
ಬಾಲಿವುಡ್ ನ ಬಿಗ್ ಬಿ ಅಮಿತಾ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್. ಅಭಿಷೇಕ್ ಬಚ್ಚನ್ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಆದರೆ ಅಪ್ಪನಷ್ಟು ಹಿಟ್ ಆಗಲು ಸಾಧ್ಯವಾಗಲಿಲ್ಲ. 2004ರಲ್ಲಿ ಧೂಮ್ ಸಿನಿಮಾದಲ್ಲಿ ಅಭಿನಯಿಸಿದ ನಂತರ ಅಭಿಷೇಕ್ ಅವರ ಅದೃಷ್ಟ ಖುಲಾಯಿಸಿತು. ಅಲ್ಲಿಂದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದರು ಅದೇ ರೀತಿ 2007ರಲ್ಲಿ ಐಶ್ವರ್ಯ ರೈ ಬಚ್ಚನ್ ಅಭಿಷೇಕ್ ಬಚ್ಚನ್ ಅವರನ್ನ ವಿವಾಹವಾಗುತ್ತಾರೆ.
2008ರಲ್ಲಿ ಖಾಸಗಿ ವಾಹಿನಿ ಒಂದರಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಇಬ್ಬರು ಭಾಗವಹಿಸಿದ್ದು ತಮ್ಮ ಜೀವನದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರ ಜೀವನದ ಮಹತ್ವದ ಹಾಗೂ ಫನ್ನಿ ಆಗಿರುವ ಹನಿಮೂನಿನ ಘಟನೆ ಒಂದನ್ನು ಹೇಳಿಕೊಂಡಿದ್ದರು. ಈ ವಿಡಿಯೋ ಈಗ ಸಕ್ಕತ್ ವೈರಲ್ ಆಗಿದೆ.
ಐಶ್ವರ್ಯ ರೈ ಅವರಿಗೆ ತಮಾಷೆ ಮಾಡುವುದಕ್ಕಾಗಿ ಅಭಿಷೇಕ ಬಚ್ಚನ್ ಮಂಚದ ಎಲ್ಲಾ ಸ್ಕ್ರೂ ಗಳನ್ನ ಬಿಡಿಸಿ ಇಟ್ಟಿದ್ದರಂತೆ. ಅದೇ ಸಮಯಕ್ಕೆ ಐಶ್ವರ್ಯ ಆ ಮಂಚದ ಮೇಲೆ ಹೋಗಿ ಕುಳಿತಿದ್ದಾರೆ ಕೂಡಲೇ ಮಂಚ ಮುರಿದು ಬಿದ್ದು ಐಶ್ವರ್ಯ ಕೂಡ ಕೆಳಗೆ ಬೀಳುತ್ತಾರೆ. ಅಭಿಷೇಕ್ ಅವರ ಈ ಚೇಷ್ಟೆಯಿಂದ ಐಶ್ವರ್ಯ ರೈ ಬಚ್ಚನ್ ಎರಡು ದಿನ ಕೋಪಗೊಂಡಿದರಂತೆ. ಅವರನ್ನು ಮತ್ತೆ ಫಾರ್ಮ್ ಗೆ ತರುವಷ್ಟರಲ್ಲಿ ಸಾಕಾಗಿ ಹೋಗಿತ್ತು ಎಂದು ಅಭಿಷೇಕ್ ತಮಾಷೆಯಾಗಿ ಹೇಳಿದ್ದರು.