ನೀವು ಎಲ್ಲಿಗಾದರೂ ವಿಮಾನದಲ್ಲಿ ಹೋಗುತ್ತೀರಾ ಅಂತ ಅಂದುಕೊಳ್ಳಿ ಆಗ ಆಕಾಶದಲ್ಲಿ ವಿಮಾನ ಹಾರುವಾಗ ಯಾರೋ ಒಬ್ಬ ವ್ಯಕ್ತಿ ಹೋಗಿ ಎಮರ್ಜೆನ್ಸಿ ಡೋರ್ ಅನ್ನು ಓಪನ್ ಮಾಡಿದರೆ ಹೇಗೆ ಆಗಬಹುದು ಅಲ್ವ. ಅಂತಹದೇ ಒಂದು ಘಟನೆ ದೆಹಲಿಯಿಂದ ಉತ್ತರಪ್ರದೇಶದ ವಾರಣಾಸಿಗೆ ಹೋಗುವ ವಿಮಾನದಲ್ಲಿ ಸಂಭವಿಸಿದೆ. ಇದ್ದಕ್ಕಿದ್ದ ಹಾಗೆ ವ್ಯಕ್ತಿಯೊಬ್ಬ ಎದ್ದು ಬಂದಹ ಎಮರ್ಜೆನ್ಸಿ ಡೋರ್ ಓಪನ್‌ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾನೆ‌. ಇದನ್ನು ಕಂಡ 81 ಮಂದಿ ಪ್ರಯಾಣಿಕರು ಗಾಬರಿಯಾಗಿದ್ದಾರೆ ಕೂಡಲೇ ಆತನನ್ನು ನೆಲಕ್ಕೆ ಕೆಡವಿ 40 ನಿಮಿಷಗಳ ಕಾಲಾವಧಿ ಆತನನ್ನು ಹಾಗೆ ಹಿಡಿದಿದ್ದಾರೆ ನಂತರ ವಾರಣಸಿ ವಿಮಾನ ನಿಲ್ದಾಣದಲ್ಲಿ ಆತನನ್ನು ಆರಸ್ಟ್ ಮಾಡಲಾಗಿದೆ. ಆರಂಭದ ತನಿಖೆಯಲ್ಲಿ ಆತನ ಮನಸ್ಥಿತಿ ಸರಿ ಇಲ್ಲ ಅಂತ ಗೊತ್ತಾಗಿದೆ.

ಆದರೂ ಒಂದು ವೇಳೆ ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ಸಹ ವಿಮಾನದಲ್ಲಿದ್ದ ಅಷ್ಟು ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾಗುತ್ತದೆ. ಏಕೆಂದರೆ ಹಾರುತ್ತಿರುವ ವಿಮಾನದ ಡೋರ್ ತೆರೆದರೆ ವಿಮಾನದ ಒಳಗೆ ವೇಗವಾಗಿ ಗಾಳಿ ಬೀಸುತ್ತದೆ. ಯಾರೆಲ್ಲಾ ಸೀಟ್ ಬೆಲ್ಟ್ ಹಾಕಿ ಕೊಂಡಿರುವುದಿಲ್ಲ ಅವರನ್ನು ಹೊರಗಡೆ ಎಳೆದುಕೊಂಡು ಹೋಗಿ ಬಿಡುತ್ತದೆ. ಕೆಲವು ಬಾರಿ ಗಾಳಿಯ ರಭಸ ಹೇಗಿರುತ್ತದೆ ಅಂದರೆ ಸೀಟ್ ಬೆಲ್ಟ್ ಹಾಕಿದ್ದರು ಸಹ ಸೀಟ್ ಜೊತೆಗೆ ಆ ವ್ಯಕ್ತಿ ಕೂಡ ಹೊರಗೆ ಹೋಗಿ ಬಿಡುತ್ತಾರೆ. ವಿಮಾನದ ಬ್ಯಾಲೆನ್ಸ್ ತಪ್ಪಿ ಕ್ರಶ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಅಷ್ಟು ಸುಲಭವಾಗಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯುವುದಕ್ಕೆ ಸಾಧ್ಯವಿಲ್ಲ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದಾರೆ ಮಾತ್ರ ಆ ಡೋರ್ ಅನ್ನು ಓಪನ್ ಮಾಡುವುದಕ್ಕೆ ಸಾಧ್ಯವಾಗುವುದು.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •