ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್2 ಸಿನಿಮಾದ ಟೀಸರ್ ಹೊಂಬಾಳೆ ಯೂಟ್ಯೂಬ್ ಚಾನೆಲ್ ನಲ್ಲಿ ಜನವರಿ 7ರಂದು ರಾತ್ರಿ 9:30 ಕ್ಕೆ ಬಿಡುಗಡೆಯಾಯಿತು. ಕೆಲವು ಕಿ-ಡಿಗೇಡಿಗಳು ಕೆಜಿಎಫ್2 ಟೀಸರ್ ಲೀ-ಕ್ ಮಾಡಿದ ಕಾರಣ ನಿಗದಿತ ಸಮಯಕ್ಕಿಂತ ಬೇಗನೆ ಟೀಸರ್ ರಿಲೀಸ್ ಮಾಡುವ ಹಾಗಾಯಿತು. ಬಿಡುಗಡೆಯಾದ ಕ್ಷಣದಿಂದ ಕೆಜಿಎಫ್2 ಟೀಸರ್ ಮಾಡಿರುವ ದಾಖಲೆ ಒಂದಲ್ಲ ಎರಡಲ್ಲ, ಇದುವರೆಗಿನ ಎಲ್ಲಾ ರೆಕಾರ್ಡ್ ಗಳನ್ನು ಕೇವಲ 46 ಗಂಟೆಗಳಲ್ಲಿ ಬ್ರೇ-ಕ್ ಮಾಡಿದೆ ಕೆಜೆಎಫ್2 ಟೀಸರ್. ಕೆಜಿಎಫ್ 2 ಸಿನಿಮಾ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಏನು ಹೇಳಿದ್ದಾರೆ ಗೊತ್ತಾ ? ತಿಳಿಯಲು ಮುಂದೆ ಓದಿ..

ಇಡೀ ವಿಶ್ವ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಎಲ್ಲರು ಕೆಜಿಎಫ್2 ಟೀಸರ್ ಅನ್ನು ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಅಭಿಮಾನಿಗಳು ಮಾತ್ರವಲ್ಲದೆ, ಟಾಲಿವುಡ್, ಮಾಲಿವುಡ್, ಕಾಲಿವುಡ್ ಸೇರಿದಂತೆ ಬಾಲಿವುಡ್ ನ ಸಿನಿಪ್ರಿಯರು, ಹಾಗು ಬೇರೆ ದೇಶದ ಸಿನಿಪ್ರಿಯರು ಕೂಡ ಕೆಜಿಎಫ್2 ಟೀಸರ್ ನೋಡಿ ಫಿದಾ ಆಗಿದ್ದಾರೆ. ಟೀಸರ್ ನ ಹವಾ ಹೇಗಿದೆ ಎಂದರೆ ಬಿಡುಗಡೆಯಾದ 46 ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ಗಳಿಸಿ, ಈಗ 138 ಮಿಲಿಯನ್ ವೀಕ್ಷಣೆ ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ಈ ಕುರಿತು ಯಶ್ ಅವರ ತಾಯಿ ಹೇಳಿದ್ದು ಹೀಗೆ..
“ಎಲ್ಲರಿಗೂ ಅವರ ಮಕ್ಕಳು ಹೀರೊನೆ, ನನಗೂ ಅದೇ ರೀತಿ. ನನ್ನ ಮಗ ಹುಟ್ಟಿದಾಗಲೇ ಅವನು ಹೀರೋ ಎಂದು ನನಗೆ ತಿಳಿದಿತ್ತು. ನನ್ನ ಮಗನ ಹುಟ್ಟುಹಬ್ಬದ ವಿಶೇಷವಾಗಿ ಕೆಜಿಎಫ್2 ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಬಹಳ ಯಶಸ್ಸು ಕಂಡಿರುವುದು ಸಂತೋಷವಾಗಿದೆ. 2021 ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಈ ಯಶಸ್ಸಿಗೆ ಕಾರಣರಾದವರು ನಿರ್ಮಾಪಕ ವಿಜಯ್ ಕಿರಗಂದೂರು, ಹಾಗು ವಿಶ್ವದ ಜನತೆಗೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂತಹ ಅದ್ಭುತವಾದ ಕಥೆಯನ್ನು ನೀಡಿದ್ದಾರೆ. ಇಷ್ಟು ಒಳ್ಳೆಯ ಟೀಸರ್ ಮಾಡಿದ್ದಾರೆ, ಇದರಲ್ಲಿ ಅವರ ಶ್ರಮವಿದೆ..” ಎನ್ನುತ್ತಾರೆ ಯಶ್ ಅವರ ತಾಯಿ ಪುಷ್ಪ.

Yash's mother
ಇದಲ್ಲದೆ “ನನ್ನ ಮಗನಿಂದ ಇವಾಗ ಇಡೀ ಜಗತ್ತೇ ಕನ್ನಡದ ಕಡೆ, ಕನ್ನಡ ಚಿತ್ರ ರಂಗದ ಬಗ್ಗೆ, ಕರ್ನಾಟಕದ ಬಗ್ಗೆ ತಿರುಗಿ ನೋಡುವಂತೆ ಮಾಡಿದೆ, ನನ್ನ ಮಗನ ಈ ಅದ್ಭುತ ಸಾಧನೆಗೆ ನಾನಾ ಬಹಳ ಸಂತೋಷವಿದೆ! ಬೇರೆ ಯಾವ ನಟನೂ ಮಾಡಿರದ ಸಾಧನೆ ನನ್ನ ಮಗ ಕೆಲವೇ ಕೆಲವು ವರ್ಷಗಳಲ್ಲಿ ಮಾಡಿದ್ದಾನೆ!” “ಕೆಜಿಎಫ್2 ಸಿನಿಮಾ ಮತ್ತು ಯಶ್ ಕನ್ನಡಿಗರ ಆಸ್ತಿ ಮಾತ್ರವಲ್ಲ, ಇದು ದೇಶದ ಆಸ್ತಿಯಾಗಿದ್ದಾರೆ. ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಇಂತಹ ಒಳ್ಳೆಯ ನಿರ್ಮಾಪಕರು ಸಿಗಲಿ. ಇಂತಹ ಒಳ್ಳೆಯ ಸಿನಿಮಾಗಳು ಇನ್ನು ಹೆಚ್ಚು ಹೆಚ್ಚು ತಯಾರಾಗಲಿ. ಪ್ರಶಾಂತ್ ನೀಲ್ ಅವರ ತಂದೆ ತಾಯಿಗೆ ವಿಶೇಷವಾದ ಧನ್ಯವಾದ ತಿಳಿಸಬೇಕು, ಅವರಿಗಿರುವ ತಾಳ್ಮೆ ಇನ್ನೊಬರಿಗಿಲ್ಲ. ಇಷ್ಟೊಂದು ಹಣವನ್ನು ಸಿನಿಮಾಗಾಗಿ ಖರ್ಚು ಮಾಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಧನ್ಯವಾದ ತಿಳಿಸುತ್ತೇನೆ.

ಕೆಜಿಎಫ್2 ಸಿನಿಮಾದ ಕ್ಯಾಮೆರಾ ಕೆಲಸ ಮಾಡಿದವರಿಗೆ ಹಾಗೂ ತಂಡದ ಇನ್ನಿತರ ಎಲ್ಲಾ ಸದಸ್ಯರಿಗೂ ಧನ್ಯವಾದ ತಿಳಿಸುತ್ತೇನೆ. ನನ್ನ ಮಗ, ಸೊಸೆ ಮತ್ತು ಮೊಮ್ಮಕ್ಕಳ ಮೇಲೆ ಎಲ್ಲರ ಆಶೀರ್ವಾದ ಮತ್ತು ಪ್ರೀತಿ ಸದಾ ಹೀಗೆ ಇರಲಿ..” ಎಂದು ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •