ನಟ ಕಿರಣ್‌ ರಾಜ್‌ ಎಂದರೆ ಅದೆಷ್ಟೋ ಜನರಿಗೆ ತಿಳಿದಿರಲೇ ಇಲ್ಲ. ಆದರೆ ಇಂದು ಕಿರಣ್‌ ರಾಜ್‌ ಎಂಬುದು ಕೇವಲ ಹೆಸರಾಗಿ ಉಳಿದಿಲ್ಲ. ಅದೊಂದು ಬ್ರಾಂಡ್‌ ಆಗಿ ಬೆಳೆದಿದೆ. ಕಿರಣ್‌ ಫೌಂಡೇಶನ್‌ ಮೂಲಕ ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ಕಿರಣ್‌ ಅವರು ತಮ್ಮ ಸಂಪಾದನೆಯ ಶೇ.೪೦ರಷ್ಟು ಭಾಗವನ್ನು ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ.

ಆದರೆ ಇದೇ ಕಿರಣ್‌ ಅವರು ಕಳೆದ ಮೂರು ವರ್ಷಗಳ ಹಿಂದೆ ಒಬ್ಬ ಹುಡುಗಿಯ ಹಿಂದೆ ಬಿದ್ದಿದ್ದರು ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಹೌದು ಕಿರಣ್‌ ಅವರಿಗೂ ಈ ಹಿಂದೆ ಒಂದು ಕ್ರಶ್‌ ಇತ್ತು. ಮುಂಬೈ ಮೂಲದ ಯಾಸ್ಮಿನ್‌ ಎಂಬ ಹುಡುಗಿಯನ್ನು ಇವರು ಇಷ್ಟ ಪಟ್ಟಿದ್ದರು. ಹಾಗೆಯೇ ಯಾಸ್ಮಿನ್‌ ಅವರು ಕೂಡ ಕಿರಣ್‌ ಅವರನ್ನು ಇಷ್ಟಪಟ್ಟಿದ್ದರು. ಹಾಗಾಗಿ ಇವರ ನಡುವೆ ಸುಮಾರು ೫ ವರ್ಷಗಳ ಕಾಲ ಲಿವಿಂಗ್‌ ಟು ಗೆದರ್‌ ಸಂಬಂಧವೂ ಇತ್ತು ಎಂದು ಸ್ವತಃ ಯಾಸ್ಮಿನ್‌ ಅವರೇ ಹೇಳಿಕೊಂಡಿದ್ದಾರೆ.

 

 

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಅದೊಂದು ದಿನ ಅವರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ಆದು ಸಾಕಷ್ಟು ದೊಡ್ಡದಾಗುತ್ತಾ ಬಂದು ಕೊನೆಗೆ ಒಂದು ದಿನ ಅವರಿಬ್ಬರು ಬೇರೆ ಬೇರೆಯಾಗುತ್ತಾರೆ. ಹಾಗಾಗಿ ಕಿರಣ್‌ ಅವರು ಯಾಸ್ಮಿನ್‌ ಅವರ ಪ್ರೀತಿ ಹಾಗೂ ಅವರನ್ನು ನಿರಾಕರಣೆ ಮಾಡಲು ಮುಂದಾಗುತ್ತಾರೆ. ಆದರೆ ಯಾಸ್ಮಿನ್‌ ಅವರಿಗೆ ಕಿರಣ್‌ ಅವರನ್ನು ಕಂಡರೆ ಇನ್ನು ಸ್ವಲ್ಪ ಪ್ರೀತಿ ಇರುತ್ತದೆ.

 

 

ಹೇಗಾದರೂ ಮಾಡಿ ಕಿರಣ್‌ ಅವರನ್ನು ಮತ್ತೆ ಪಡೆಯಬೇಕು ಎಂಬ ಹಠಕ್ಕೆ ಬಿದ್ದು, ಮುಂಬೈ ಪೋಲಿಸ್‌ ಠಾಣೆ ಮೆಟ್ಟಿಲನ್ನು ಏರುತ್ತಾರೆ. ಆದರೆ ಮುಂಬೈ ಪೊಲೀಸರು ಮಾತ್ರ ಈ ಘಟನೆ ಸಂಭವಿಸಿದ್ದು ಬೆಂಗಳೂರಿನಲ್ಲಿ ಆದ್ದರಿಂದ ಅಲ್ಲೇ ಹೋಗಿ ದೂರು ನೀಡಿ ಎಂದು ದೂರು ಸ್ವೀಕರಿಸಲು ನಿರಾಕರಿಸಿ ಬಿಡುತ್ತಾರೆ. ಹಾಗಾಗಿ ಯಾಸ್ಮಿನ್‌ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸುತ್ತಾರೆ.

ದೂರಿನಲ್ಲಿ ಕಿರಣ್‌ ಮತ್ತು ನಾವು ಪರಸ್ಪರ ಪ್ರೀತಿ ಮಾಡುತ್ತಿದ್ದು, ಮದುವೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದೆವು. ಆದರೆ ಈಗ ಕಿರಣ್‌ ಅವರು ನನ್ನನ್ನು ತಿರಸ್ಕರಿಸಿದ್ದೇ ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ, ಕಳೆದ ಐದು ವರ್ಷಗಳಿಂದ ನಮ್ಮ ನಡುವೆ ಲಿವಿಂಗ್‌ ಟು ಗೆದರ್‌ ಸಂಬಂಧ ಇತ್ತು. ಆದರೆ ಈಗ ಕಿರಣ್‌ ಅವರು ನನ್ನನ್ನು ಬೇಡ ಎನ್ನುತ್ತಿದ್ದಾರೆ.

 

ಇದಕ್ಕೆ ಪ್ರತಿಯಾಗಿ ಕಿರಣ್‌ ರಾಜ್‌ ಕೂಡ ಯಾಸ್ಮಿನ್‌ ವಿರುದ್ಧ ದೂರು ದಾಖಲಿಸುತ್ತಾರೆ. ಈ ಹುಡುಗಿ ಮಾನಸಿಕವಾಗಿ ಸರಿಯಿಲ್ಲ. ನಾನು ಈಕೆಯ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ಬದಲಾಗಿ ಈಕೆಯೇ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಹಿಂದೆಯೇ ಎರಡು ಪ್ರಕರಣ ದಾಖಲಾಗಿತ್ತು ಎಂದು ಹೇಳಿದ್ದಾರೆ.ಆದರೆ ಇವರಿಬ್ಬರ ನಡುವೆ ನಡೆದ ವಿವಾದಗಳು ಸ್ವಲ್ಪ ದಿನದ ಮಟ್ಟಿಗೆ ನಡೆಯುತ್ತವೆ.

 

 

ಆದರೆ ದಿನ ಕಳೆದಂತೆ ಜನರು ಈ ಎಲ್ಲಾ ವಿವಾದಗಳನ್ನು ಮರೆತು ಬಿಡುತ್ತಾರೆ. ಕಿರಣ್‌ ಅವರು ಈ ಎಲ್ಲಾ ವಿವಾದಗಳಿಂದಾಗಿ ಮಾನಸಿಕವಾಗಿ ಸ್ವಲ್ಪ ತೊಂದರೆಯನ್ನು ಅನುಭವಿಸುತ್ತಾರೆ. ಇದಾದ ಸ್ವಲ್ಪ ದಿನಗಳ ಬಳಿಕ ಮತ್ತೊಮ್ಮೆ ಕಿರುತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಜೀವನಲ್ಲಿ ಅದೆಷ್ಟೋ ಘಟನೆಗಳು ಸಂಭವಿಸುತ್ತವೆ. ಆದರೆ ಅದೆಲ್ಲವನ್ನೂ ಮರೆತು ವಿಭಿನ್ನವಾಗಿ ಮತ್ತೆ ಜೀವನ ನಡೆಸಬೇಕು ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ.

 

 

ತಮ್ಮ ಬದುಕಿನಲ್ಲಿ ನಡೆದ ಎಲ್ಲಾ ಕಹಿ ಘಟನೆಗಳನ್ನು ಮರೆತು ಮತ್ತೆ ಜನರ ಜೊತೆಗೆ ನಿಂತು ಜನಮೆಚ್ಚಿದ ನಾಐಕ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.ಜೀವನದಲ್ಲಿ ಈ ಎಲ್ಲಾ ನೋವುಗಳು ಬರುತ್ತವೆ, ಹೋಗುತ್ತವೆ. ಆದರೆ ಅದೆಲ್ಲವನ್ನೂ ಮರೆತು ಮತ್ತೆ ಎದ್ದು ನಿಲ್ಲುವುದೇ ಸಾಧನೆ ಎಂಬುದನ್ನು ಕಿರಣ್‌ ಅವರು ಸಾಬೀತು ಪಡಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •