ಚಿರು ಮೇಘನಾ ರಾಜ್ ಮಗುವಿಗೆ ಯಶ್ ರಾಧಿಕಾ ಕಡೆಯಿಂದ ಬಂತು ಭರ್ಜರಿ ಉಡುಗೊರೆ! ಏನು ಗೊತ್ತಾ

ಆಕ್ಟೊಬರ್ 22ರಂದು ಬೆಳಗ್ಗೆ 11:05 ಕ್ಕೆ ಸರ್ಜಾ ಕುಟುಂಬದ ಮೂರನೇ ತಲೆಮಾರಿನ ಕುಡಿ ಹುಟ್ಟಿದೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಪ್ರೀತಿಯ ಸಂಕೇತವಾಗಿ ಮುದ್ದಾದ ಗಂಡು ಮಗು ಹುಟ್ಟಿದೆ. ಮೊನ್ನೆ ಅಷ್ಟೇ ಜೂನಿಯರ್ ಚಿರು ಅಂದರೆ, ಚಿರು ಮೇಘನಾ ರಾಜ್ ಅವರ ಮುದ್ದಾದ ಮಗನ ತೊಟ್ಟಿಲ ಶಾಸ್ತ್ರ ನಡೆಯಿತು. ಈ ಸಮಯದಲ್ಲಿ ಸಾಕಷ್ಟು ಗಣ್ಯರು, ಸಿನಿಮಾ ತಾರೆಯರು, ಬಂದಿದ್ದರು. ಸಾಕಷ್ಟು ನಟ ನಟಿಯರು ಮೇಘನಾ ರಾಜ್ ಅವರು ಹಾಗು ಮಗನಿಗೆ ಬಹಳಷ್ಟು ಉಡುಗೊರೆಗಳನ್ನು ನೀಡಿದ್ದಾರೆ. ಇದಲ್ಲದೆ ನಮ್ಮ ಸುದೀಪ್, ಡಿಬಾಸ್ ದರ್ಶನ್ , ಅಪ್ಪು ಸೇರಿದಂತೆ ಸಾಕಷ್ಟು ಸ್ಟಾರ್ ನಟರು ಉಡುಗೊರೆಯನ್ನು ನೀಡಿದ್ದಾರೆ! ನಮ್ಮ ರಾಕಿಂಗ್ ದಂಪತಿಗಳಾದ ಯಶ್ ಹಾಗು ರಾಧಿಕಾ ಪಂಡಿತ್ ಅವರು ಕೂಡ ಭರ್ಜರಿ ಉಡುಗೊರೆ ನೀಡಿದ್ದಾರೆ! ಅದು ಏನು ಗೊತ್ತಾ! ಮುಂದೆ ಓದಿರಿ

ಮಗು ಹುಟ್ಟಿದ ಮರು ಕ್ಷಣವೇ ಚಿಕ್ಕಪ್ಪ ಧ್ರುವ ಸರ್ಜಾ ತಮ್ಮ ಕತ್ತಿನಲ್ಲಿ ಇದ್ದ ಚಿನ್ನದ ಸರವನ್ನು ಮಗುವಿಗೆ ಹಾಕಿ ಸಂಭ್ರಮ ಪಟ್ಟಿದ್ದಾರೆ. ಡಿಬಾಸ್ ದರ್ಶನ್ ವಿಶೇಷವಾದ ತೊಟ್ಟಿಲನ್ನು ಮಗುವಿಗಾಗಿ ಆರ್ಡರ್ ಮಾಡಿದ್ದರು ಜೊತೆಗೆ ತಮ್ಮ ತೋಟದ ಮನೆಯಿಂದ Labrador Breed ನ ಎರಡು ಮುದ್ದಾದ ನಾಯಿಮ-ರಿಗಳನ್ನು ಕಳಿಸಿದ್ದಾರೆ. ಹಾಗೂ ಮೇಘನಾ ಹಾಗೂ ಧ್ರುವ ಸರ್ಜಾರಿಗೆ ಕರೆಮಾಡಿ ಮಾತನಾಡಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಮಗುವಿಗೆ ಚಿನ್ನದ ಉಡುದಾರವನ್ನು ಕೊಟ್ಟಿದ್ದರು. ಜೊತೆಗೆ ಮಗು ಹುಟ್ಟಿರುವ ಸಂಭ್ರಮಕ್ಕಾಗಿ ಸರ್ಜಾ ಕುಟುಂಬದ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಊಟ ಹಾಕಿಸಿ ಬಡವರಿಗೆ ಆಹಾರ ವಿತರಣೆ ಮಾಡಿದ್ದರು.

yash-radhika

ಧ್ರುವ ಸರ್ಜಾರ ಪತ್ನಿ ಪ್ರೇರಣಾ ಸರ್ಜಾ, ಅತ್ತಿಗೆಯ ಮಗುವಿಗೆ ಮುದ್ದಾದ ಪುಟ್ಟ ಮಕ್ಕಳ ಉಡುಪುಗಳನ್ನು ಉಡುಗೊರೆ ನೀಡಿದ್ದರು. ಕಿಚ್ಚ ಸುದೀಪ್ ದಂಪತಿ ಮೇಘನಾ ಹಾಗೂ ಧ್ರುವ ಸರ್ಜಾರಿಗೆ ಕರೆ ಮಾಡಿ ತಾಯಿ ಮಗುವಿನ ಆರೋಗ್ಯ ವಿಚಾರಿಸಿ ಮಗುವಿಗೆ ಒಂದಷ್ಟು ಆಟಿಕೆಗಳನ್ನು ಕಳಿಸಿಕೊಟ್ಟಿದ್ದರು. ಇದಲ್ಲದೆ ಕನ್ನಡದ ಸಾಕಷ್ಟು ಸ್ಟಾರ್ ನಟರು, ನಟಿಯರು, ತಂತ್ರಜ್ಞರು, ಮೇಘನಾ ರಾಜ್ ಅವರಿಗೆ ಸಾಕಷ್ಟು ಉಡುಗೊರೆಗಳನ್ನು ಕಳಿಸಿ ಕೊಟ್ಟಿದ್ದಾರೆ. ಸರ್ಜಾ ಕುಟುಂಬದ ಅಭಿಮಾನಿಗಳಂತೂ ಪ್ರತಿ ನಿತ್ಯ ಕೂಡ ಮೇಘನಾ ರಾಜ್ ಅವರಿಗೆ ಒಂದಲ್ಲ ಒಂದು ಉಡುಗೊರೆಯನ್ನು ತರುತ್ತಾರಂತೆ! ಮೊನ್ನೆ ತೊಟ್ಟಿಲ ಶಾಸ್ತ್ರದ ದಿನ ನಮ್ಮ ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ಮೇಘನಾ ರಾಜ್ ಅವರಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ!

ಇದೀಗ ರಾಕಿಂಗ್ ಸ್ಟಾರ್ ಕೂಡ ಚಿರು ಮೇಘನಾ ಮಗನಿಗೆ ಗಿಫ್ಟ್ಸ್ ಕಳಿಸಿದ್ದಾರೆ. ಮಗು ಆಟವಾಡುವ ಹಲವಾರು ಬಣ್ಣ ಬಣ್ಣದ ಆಟಿಕೆಗಳನ್ನು ಯಶ್ ರಾಧಿಕಾ ದಂಪತಿ ಕಳಿಸಿಕೊಟ್ಟಿದ್ದಾರೆ. ಜೊತೆಗೆ ಮೇಘನಾರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಮೇಘನಾ ಮತ್ತು ಯಶ್ ರಾಜಾಹು-ಲಿ ಸಿನಿಮಾದಲ್ಲಿ ನಟಿಸಿದ್ದರು ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಜೊತೆಗೆ ಯಶ್ ಚಿರು ನಡುವೆ ಒಳ್ಳೆಯ ಸ್ನೇಹ ಬಾಂಧವ್ಯ ಇತ್ತು.ಯಶ್ ಕುಟುಂಬ ಹಾಗು ಸರ್ಜಾ ಕುಟುಂಬ ಬಹಳ ಆಪ್ತರು! ಇದಲ್ಲದೆ ರಾಧಿಕಾ ಅವರ ಕುಟುಂಬ ಹಾಗು ಸುಂದರ್ ರಾಜ್ ಕುಟುಂಬ ಕೂಡ ಬಹಳ ಆಪ್ತರು! ಹಾಗಾಗಿ ವಾರಕ್ಕೆ ಒಮ್ಮೆ ಆದರೂ, ಮೇಘನಾ ರಾಜ್ ಅವರಿಗೆ ರಾಧಿಕಾ ಪಂಡಿತ್ ಅವರು ಕರೆ ಮಾಡುತ್ತಾರೆ! ಮಗುವಿನ ಆರೋಗ್ಯದ ಬಗ್ಗೆ ತಿಳಿದುಕೊಂಡು ಕೆಲವೊಂದು ಸಲಹೆಗಳನ್ನು ಕೂಡ ನೀಡುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •