ಮದುವೆಯದ ಮಹಿಳೆಯರು ಗೊತ್ತಿಲ್ಲದೆ ಈ ತಪ್ಪುಗಳು ಮಾಡಿದರೆ ಮಹಾ ದರಿದ್ರ ಸುತ್ತಿಕೊಳ್ಳೋದು ಖಂಡಿತ ..!

Home

ಮನೆಯಲ್ಲಿ ಈ ಕೆಲವೊಂದು ವಿಚಾರಗಳನ್ನು ಪಾಲಿಸುತ್ತಾ ಬರುವುದರಿಂದ ಶ್ರೀ ಸಾಕ್ಷಾತ್ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಮ್ಮ ಮೇಲೆ ಸದಾ ಕಾಲ ಇರುತ್ತದೆ, ಮತ್ತು ಶ್ರೀ ಲಕ್ಷ್ಮೀದೇವಿಯು ಮನೆಯಲ್ಲಿ ಸ್ಥಿರ ನಿವಾಸ ಆಗಿರುತ್ತದೆ ಅಂತ ಹೇಳಲಾಗುತ್ತದೆ. ನಮ್ಮ ಪೂರ್ವಜರು ಮಾಡಿಟ್ಟಂತಹ ಆ ಕೆಲವೊಂದು ಪದ್ಧತಿಗಳ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಅದರಲ್ಲಿಯೂ ಈ ದಿನ ನಾವು ಮಾಹಿತಿಯಲ್ಲಿ ತಿಳಿಸಿ ಕೊಡಲು ಹೊರಟಿರುವಂಥ ಆ ಒಂದು ವಿಚಾರಗಳನ್ನು, ಮನೆಯಲ್ಲಿ ಸುಮಂಗಲಿಯರು ಹೌದು ಮದುವೆಯಾಗಿರುವಂತಹ ಹೆಣ್ಣುಮಕ್ಕಳು ತಪ್ಪದೆ ಪಾಲಿಸಲೇಬೇಕು.

ಮೊದಲನೆಯದಾಗಿ ಸ್ತ್ರೀ ಅಂದರೆ ಮದುವೆಯಾದ ಸುಮಂಗಲಿ ತನ್ನ ಗಂಡನ ಏಳಿಗೆಗಾಗಿ ತನ್ನ ಗಂಡನ ದೀರ್ಘಾಯುಷಿಗಾಗಿ ಯಾವಾಗಲೂ ಕುಂಕುಮವನ್ನು ಅಂದರೆ ಸಿಂಧೂರವನ್ನು ತನ್ನ ಹಣೆಗೆ ಬೈತಲೆಯ ಮಧ್ಯೆ ಇಟ್ಟುಕೊಳ್ಳಬೇಕು, ಇದರಿಂದ ಗಂಡನ ಆಯಸ್ಸು ವೃದ್ಧಿಯಾಗುತ್ತದೆ. ಗಂಡನಿಗೆ ಶ್ರೇಯಸ್ಸು ಮತ್ತು ಮದುವೆಯಾಗುವಾಗ ಹಿರಿಯರ ಸಮ್ಮುಖದಲ್ಲಿ ಹೆಣ್ಣು ತನ್ನ ಗಂಡನ ಬಳಿ ತಾಳಿಯನ್ನು ಕಟ್ಟಿಕೊಂಡಿರುತ್ತಾಳೆ, ಮುಕ್ಕೋಟಿ ದೇವರುಗಳ ಆಶೀರ್ವಾದವನ್ನು ಪಡೆದ ಸುಮಂಗಲಿಯು ಯಾವಾಗಲೂ ಮನೆಯಲ್ಲಿ ಲಕ್ಷಣವಾಗಿ ಓಡಾಡಿಕೊಂಡು ಇರಬೇಕು, ಇದರಿಂದ ಗಂಡನಿಗೆ ಬಹಳಾನೆ ಅದೃಷ್ಟ ಒಲಿಯುತ್ತದೆ.

ಅಷ್ಟೇ ಅಲ್ಲ ಹೆಣ್ಣು ಮಕ್ಕಳು ಅಂದರೆ ಮನೆಯಲ್ಲಿ ಸುಮಂಗಲಿಯರು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಎಂದು ಫ್ಯಾಷನ್ ಎಂದು ಕೂದಲನ್ನು ಬಿಟ್ಟುಕೊಂಡು ಓಡಾಡುತ್ತಾರೆ ಇದು ಮಹಾಂತಪ್ಪ ಕೆಲಸ ಆಗಿರುತ್ತದೆ ಯಾಕೆಂದರೆ ಇದು ರಾಕ್ಷಸರ ಸ್ವಭಾವವಾದ ಕಾರಣ ಮನೆಯಲ್ಲಿ ಈ ಒಂದು ವರ್ತನೆಯಿಂದ ಲಕ್ಷ್ಮೀದೇವಿಯು ನೆಲೆಸುವುದಿಲ್ಲ. ಮನೆಯಲ್ಲಿ ಸುಮಂಗಲೆಯಾದವಳು ಸೂರ್ಯಾಸ್ತವಾದ ಬಳಿಕ ನಿದ್ರಿಸಬಾರದು, ಈ ಒಂದು ಸಮಯದಲ್ಲಿ ಅಂದರೆ ಸೂರ್ಯಾಸ್ತವಾಗುವ ಸಮಯದಲ್ಲಿ ನಿದ್ರೆ ಮಾಡುವುದರಿಂದ ಮನೆಗೆ ಜ್ಯೇಷ್ಠಾಲಕ್ಷ್ಮೀ ಪ್ರವೇಶ ಮಾಡುತ್ತಾಳೆ. ಅಷ್ಟೇ ಅಲ್ಲದೆ ಗೋಧೂಳಿ ಸಮಯದಲ್ಲಿ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಲಿಲ್ಲ ಅಂದರೆ, ಆ ಮನೆಗೆ ದಾರಿದ್ರ್ಯವೂ ಉಂಟಾಗುತ್ತದೆ.

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ ಶ್ರೀ ಸಾಕ್ಷಾತ್ ಅನ್ನಪೂರ್ಣೇಶ್ವರಿಯು ಲಕ್ಷ್ಮೀದೇವಿಯ ಸಹೋದರಿ. ಈ ಸಾಕ್ಷಾತ್ ಅನ್ನಪೂರ್ಣೇಶ್ವರಿಗೆ ಅವಮಾನಿಸಿದರೆ ಅಥವಾ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ ಅಂದರೆ, ಆ ಮನೆಯಲ್ಲಿ ಲಕ್ಷ್ಮೀದೇವಿಯು ನೆಲೆಸುವುದಿಲ್ಲ ಲಕ್ಷ್ಮೀದೇವಿ ಅಸ್ಥಿರ ನಿವಾಸ ಆಗುವುದಿಲ್ಲ ದಾರಿದ್ರ್ಯ ಲಕ್ಷ್ಮಿ ನೆಲೆಸಿರುತ್ತಾಳೆ.

ಉಪ್ಪು ಸಾಕ್ಷತ್ ಲಕ್ಷ್ಮಿ ದೇವಿಯ ಸ್ವರೂಪ ಅಂತ ಹೇಳ್ತಾರೆ ಈ ಉಪ್ಪನ್ನು ಮನೆಯ ಯಜಮಾನ ಹೀಗೊಂದು ಪೊಟ್ಟಣದಲ್ಲಿ ಕಟ್ಟಿ ಮನೆಯ ಮೂಲೆ ಮೂಲೆಗೂ ಇರಿಸಬೇಕು. ನಂತರ ಮಾರನೆ ದಿವಸ ಬೆಳಗ್ಗೆಯೆ ಈ ಉಪ್ಪಿನ ಪೊಟ್ಟಣಗಳನ್ನು ಯಾರಿಗೂ ಕಾಣಿಸದೆ, ಅದನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಬೇಕು ಇದರಿಂದ ಮನೆಯಲ್ಲಿ ಇರುವ ದಾರಿದ್ರ್ಯವೂ ನಿವಾರಣೆಯಾಗುತ್ತದೆ ಈ ಒಂದು ಪ್ರಕ್ರಿಯೆಯನ್ನು ಮನೆಯ ಯಜಮಾನಿ ಮಾಡುತ್ತಾ ಬರುವುದರಿಂದ ಆ ಮನೆಗೆ ಯಾವ ಕೆಟ್ಟ ಶಕ್ತಿಯೂ ತಗಲುವುದಿಲ್ಲ ಕೆಟ್ಟ ಶಕ್ತಿಯ ಪ್ರಭಾವವು ಕೂಡ ಇರುವುದಿಲ್ಲ.

ಈ ದಿನ ತಿಳಿಸಿದಂತಹ ಈ ಒಂದು ಚಿಕ್ಕ ಮಾಹಿತಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಮನೆಯಲ್ಲಿ ಪಾಲಿಸಿ ಗಂಡನ ಏಳಿಗೆಗಾಗಿ ಶ್ರಮಿಸಿ ಮತ್ತು ಮನೆಯಲ್ಲಿ ಆದಷ್ಟು ನಿರ್ಲಕ್ಷ್ಯತನವನ್ನು ದೂರ ಮಾಡಿ. ಮನೆಯನ್ನು ಸ್ವಚ್ಛಂದವಾಗಿ ಇಟ್ಟುಕೊಂಡಿರಿ ಸೋಂಬೇರಿತನವನ್ನು ಮನೆಯಲ್ಲಿ ಹೆಚ್ಚು ಮಾಡುವುದರಿಂದ, ಮನೆಯಲ್ಲಿ ದಾರಿದ್ರ್ಯ ಲಕ್ಷ್ಮೀಯು ನೆಲೆಸಿರುತ್ತಾಳೆ ಹಾಗೆ ಪ್ರತಿ ದಿನ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೇವರ ದೀಪಾರಾಧನೆ ಯನ್ನು ಮಲಗಿಸಿ ಇದರಿಂದ ಮನೆಯಲ್ಲಿ ಸದಸ್ಯರ ಮಾಡಿದ ಪಾಪಕರ್ಮಗಳು ನಿವಾರಣೆಯಾಗುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...