ಹೌದು ಒಂದು ದೇಶದ ಕಾನೂನು ಸುರಕ್ಷಿತವಾಗಿ ಇರುತ್ತದೆ ಎಂದರೆ ಅದರಲ್ಲಿ ಬಹು ಮುಖ್ಯ ಪಾತ್ರವಾದ ಪೊಲೀಸರ ಪಾತ್ರ ಕೂಡ ಒಂದಾಗಿದೆ. ಸಾಕಷ್ಟು ವೇಳೆ ಪೊಲೀಸರಿಗೆ ನಾವು ಗೌರವ ನೀಡುತ್ತೇವೆ, ಮತ್ತು ಇನ್ನು ಕೆಲ ಸಮಯದಲ್ಲಿ ಅವರನ್ನು ಕಂಡರೆ ಭಯ ಕೂಡ ಬಿಡುತ್ತೇವೆ, ಆದರೆ ದೇಶದಲ್ಲಿಯ ಕೆಲ ಪೊಲೀಸರು ಮಾಡುವ ತಪ್ಪು ಕೆಲಸಗಳಿಂದಾಗಿ, ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಗೆ ಒಂದು ಕೆಟ್ಟ ಹೆಸರು ತರುತ್ತದೆ ಎಂದರೆ ತಪ್ಪಾಗಲಾರದು. ಕಾರಣ ಜನರ ತಪ್ಪನ್ನು ತಿದ್ದುವ ಮತ್ತು ಜನರನ್ನು ಕಾಯುವ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಪೊಲೀಸ್ ಅಧಿಕಾರಿಗಳೇ ಈ ರೀತಿ ಮಾಡಿದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡು ಕೆಟ್ಟದಾಗಿ ಮಾತನಾಡುತ್ತಾರೆ.

ಆದರೆ ಎಲ್ಲರೂ ಸಹ ಆ ರೀತಿ ಇರುವುದಿಲ್ಲ ಸ್ನೇಹಿತರೆ, ಅಷ್ಟಕ್ಕೂ ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಈ ಘಟನೆಯ ವಿಡಿಯೋ ತುಂಬಾ ವೈರಲ್ ಆಗಿತ್ತು. ಹೌದು ಡ್ಯೂಟಿ ವೇಳೆಯೇ ಕೆಲ ಪೊಲೀಸರು ನಡುರಸ್ತೆಯಲ್ಲೇ ನಿಂತುಕೊಂಡು, ಜೀಪಿನಲ್ಲಿ ಎಣ್ಣೆ ಹೊಡೆಯುತ್ತಿದ್ದರು. ಜೊತೆಗೆ ಒಬ್ಬ ಮಹಿಳಾ ಪೊಲೀಸ್ ಕೂಡ ಬಿಯರ್ ಕುಡಿಯುತ್ತಿದ್ದರಂತೆ. ಮತ್ತು ಈ ದೃಶ್ಯ ಕಂಡ ಅಲ್ಲಿಯ ಸ್ಥಳೀಯರು ಬಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.

‘ಇದು ತಪ್ಪಲ್ವಾ ಸರ್, ನಮ್ಮನ್ನು ತಿದ್ದುವ ನೀವೇ ಹೀಗೆ ಮಾಡಿದರೆ, ನಮ್ಮಂತ ಸಾಮಾನ್ಯರು ಏನು ಮಾಡಬೇಕು’ ಎಂದು ಪ್ರಶ್ನೆ ಮಾಡಿದರಂತೆ. ಇದಕ್ಕೆ ಉತ್ತರಿಸಿದ ಒಬ್ಬ ಪೊಲೀಸ್ ಅಧಿಕಾರಿ ‘ನನ್ನ ಗಾಡಿ ನಿನಗೆ ಏನಾದರೂ ತೊಂದರೆ ನೀಡಿದೆಯೇ, ಹಾಗಿದ್ದಲ್ಲಿ ನನ್ನ ಗಾಡಿಯ ನಂಬರ್ ತೆಗೆದುಕೊಂಡು ಹೋಗಿ ಕಂಪ್ಲೇಂಟ್ ಕೊಡು’ ಎಂದು ಗರ್ವದಿಂದ ಉತ್ತರಿಸಿದ್ದಾನೆ ಎಂಬುದಾಗಿ ತಿಳಿದುಬಂದಿತ್ತು. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹೇಳಿ, ಮೇಲಿನ ಮಾಹಿತಿಯನ್ನು ಶೇರ್ ಮಾಡಿ, ಪೊಲೀಸರು ಕರ್ತವ್ಯ ಮರೆತು ತಪ್ಪು ಮಾಡದ ಹಾಗೆ ಇಂಥಹ ಕೆಲ ಮಾಹಿತಿಯನ್ನು ಶೇರ್ ಮಾಡುತ್ತಾ, ಜಾಗೃತಿ ಮೂಡಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •