ಔರಾಂಗಬಾದ್- ಕಳೆದ ಮೂರು ತಿಂಗಳಲ್ಲಿ ಮೂವರು ಪುರುಷರನ್ನು ವಂಚಿಸಿ ಮದುವೆಯಾಗಿ ನಂತರ ಬೆಲೆಬಾಳುವ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ಔರಂಗಾಬಾದ್ ಪೊಲೀಸರು ಬಂಧಿಸಿದ್ದಾರೆ.  ಮುಕುಂದವಾಡಿ ಪ್ರದೇಶದ ನಿವಾಸಿ ವಿಜಯ ಅಮೃತ್(27) ಮೂವರು ಪುರುಷರನ್ನು ಮದುವೆಯಾಗಿ ವಂಚಿಸಿರುವ ಆರೋಪಿ.

ಆರ್ಥಿಕ ಸಮಸ್ಯೆಗಳನ್ನು ಎದುರಿಸುತಿದ್ದ 27 ವರ್ಷದ ಈ ಮಹಿಳೆ ಕಳೆದ ಮೂರು ತಿಂಗಳಿನಿಂದ ಈ ದಂಧೆಗಿಳಿದಿದ್ದು, ಮೂವರು ಪುರುಷರನ್ನು ಮದುವೆಯಾಗಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಪಡೆದು ನಂತರ ತಲೆಮರೆಸಿಕೊಳ್ಳುತ್ತಿದ್ದಳು.

Woman detained

ಮೂರನೇ ಪತಿ ನಾಸಿಕ್ ಜಿಲ್ಲೆಯ ಯೋಗೇಶ್ ಶಿರ್ಸಾತ್ ತನ್ನ ಹೆಂಡತಿಯನ್ನು ಹುಡುಕುತ್ತಿದ್ದಾಗ, ಈಕೆ ಈಗಾಗಲೇ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಕಣ್ಮರೆಯಾಗುತ್ತಿದ್ದಳು ಎಂಬುದು ಗೊತ್ತಾಗಿದೆ. ಕೂಡಲೇ ಆತ ಸ್ಥಳೀಯ ಠಾಣೆಗೆ ದೂರು ನೀಡಿದ್ದರಿಂದ, ಪೊಲೀಸರು ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ ಎನ್ನಲಾಗಿದೆ.

ಮಹಿಳೆ ಮೊದಲು ಯೋಗೇಶ್ ಎಂಬುವರನ್ನು ಮದುವೆಯಾಗಿ 15 ದಿನಗಳ ಕಾಲ ಆತನೊಂದಿಗೆ ಇದ್ದು ಅಲ್ಲಿಂದ ಪೇರಿಯಾಗಿದ್ದಳು. ನಂತರ ರಾಯಘಡದ ಕಾರ್ಜತ್‍ನ ಸಂದೀಪ್ ದಾರಡೆ ಎಂಬವರನ್ನು ವಿವಾಹವಾಗಿದ್ದಳು. ಮೂರನೇ ವಿವಾಹವು ಮಹಾರಾಷ್ಟ್ರದ ವ್ಯಕ್ತಿಯೊಂದಿಗೆ ನಡೆದಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಧು-ವರರನ್ನು ತೋರಿಸುವ ದಂಪತಿಯೊಬ್ಬರಿಗೆ ಈಕೆ ಪರಿಚಯವಾಗಿದ್ದಳು. ಈ ದಂಪತಿ ಮದುವೆ ಮಾಡಿಸಲು ಶುಲ್ಕ ಮತ್ತು ವೆಚ್ಚ ಸೇರಿದಂತೆ 2ರಿಂದ 5 ಲಕ್ಷ ರೂ.ಗಳ ಶುಲ್ಕ ಪಡೆಯುತ್ತಿದ್ದರು. ಮದುವೆಯಾದ ನಂತರ ಈಕೆ ಮದುವೆಯಿಂದ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರಿಂದ ಈ ದಂಧೆಗಿಳಿದಿದ್ದಾಗಿ ಮಹಿಳೆ ವಿಚಾರಣೆಯಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •