ಸ್ಯಾಂಡಲ್ ವುಡ್ ನಲ್ಲಿ ಯೂತ್ ಐಕಾನ್ ಅಂತ ಹೆಸರು ವಾಸಿಯಾಗಿರುವ ಪುನೀತ್ ರಾಜಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹದಿನೈದು ವರ್ಷಗಳು ಕಳೆದಿದೆ. ಇವರು ಅಪ್ಪು ಎಂಬ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡ ಚಲನಚಿತ್ರ ರಂಗವನ್ನು ಪಾದರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 25ಕ್ಕೂ ಅಧಿಕ ಚಲನ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ ಅಷ್ಟೇ ಅಲ್ಲದೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನೂ ಪುನೀತ್ ರಾಜಕುಮಾರ್ ಅವರ ಅತ್ಯದ್ಭುತವಾದಂತಹ ಡ್ಯಾನ್ಸರ್ ಅಂತ ಹೇಳಬಹುದು ತಾವು ಮಾಡಿರುವ ಎಲ್ಲಾ ಚಲನ ಚಿತ್ರಗಳಲ್ಲಿಯೂ ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ಯುವಕರ ಮನಸ್ಸನ್ನು ಗೆದ್ದಿದ್ದಾರೆ. ಪುನೀತ್ ಅವರನ್ನು ಹಲವಾರು ಯುವಕರು ರೋಲ್ ಮಾಡೆಲ್ ಗಳಾಗಿ ಪರಿಗಣಿಸಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇನ್ನೂ ಪುನೀತ್ ರಾಜಕುಮಾರ್ ಅವರು ಅಪ್ಪು ಸಿನಿಮಾ ಬಿಡುಗಡೆಯಾದ.

ನಂತರ ಅಶ್ವಿನಿ ಎಂಬುವವರನ್ನು ಮದುವೆಯಾಗುತ್ತಾರೆ ಇವರಿಬ್ಬರದ್ದು ಕೂಡ ಲವ್ ಮ್ಯಾರೇಜ್ ಮನೆಯವರಿಗೆ ತವು ಪ್ರೀತಿಸುತ್ತಿರುವ ಸಂಗತಿಯನ್ನು ತಿಳಿಸಿ ಒಪ್ಪಿಗೆ ಪಡೆದು ನಂತರ ಮದುವೆಯಾಗುತ್ತಾರೆ. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ ಒಬ್ಬಳ ಹೆಸರು ವಂಧನ ರಾಜ್ ಕುಮಾರ್ ಮತ್ತೊಬ್ಬಳ ಹೆಸರು ಧೃತಿ ರಾಜ್ ಕುಮಾರ್. ಪುನೀತ್ ರಾಜಕುಮಾರ್ ಅವರು ಬಿಡುವಿನ ವೇಳೆಯಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಹಾಗೂ ಹೆಚ್ಚಾಗಿ ಫಾರಿನ್ ಟ್ರಿಪ್ ಗಳಿಗೆ ಹೋಗುತ್ತ ಇರುತ್ತಾರೆ. ಪುನೀತ್ ರಾಜಕುಮಾರ್ ಅವರಿಗೆ ವಿಭಿನ್ನವಾದ ಅಂತಹ ಆಹಾರಗಳನ್ನು ಸೇವಿಸುವುದು ಅಂದರೆ ಬಹಳ ಇಷ್ಟ ಹಾಗಾಗಿ ಇವರು ಬಿಡುವಿನ ವೇಳೆಯಲ್ಲಿ ಮಕ್ಕಳ ಜೊತೆ ಆಚೆ ಹೋಗಿ ರುಚಿಯಾದಂತಹ ಆಹಾರವನ್ನು ಸೇವಿಸಿ ಸಂತಸಪಡುತ್ತಾರೆ. ಇನ್ನೂ ಈ ಕುಟುಂಬದ ಫೋಟೋಗಳನ್ನು ನೋಡಲು ಕೆಳಗಿನ ವಿಡಿಯೋ ಸಂಪೂರ್ಣವಾಗಿ ನೋಡಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •