ಲಕ್ನೋ: ರಾಜಕೀಯ ಮುಖಂಡನ ಪತ್ನಿ ಫೇಸ್‍ಬುಕ್ ಗೆಳೆಯನ ಜೊತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ನಗರದ ಕೊತವಾಲಿಯಲ್ಲಿ ನಡೆದಿದೆ. ಇತ್ತ ಮನೆಯಲ್ಲಿ ಮಹಿಳೆಯರ ಮಕ್ಕಳಿಬ್ಬರು ಅಮ್ಮನಿಗಾಗಿ ಕಣ್ಣೀರು ಹಾಕುತ್ತಿವೆ.

ಮಹಿಳೆಯ ಪತಿ ಸ್ಥಳೀಯ ಪ್ರಭಾವಿ ಮುಖಂಡನಾಗಿದ್ದು, ರಾಜಕೀಯ ಪಕ್ಷದ ಯುವ ವಿಭಾಗದ ಪದಾಧಿಕಾರಿಯಾಗಿದ್ದಾರೆ. ಸದ್ಯ ಮಹಿಳೆಯ ಪತಿ ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದು, ತಮ್ಮ ಬೆಂಬಲಿಗರು ಮತ್ತು ಕುಟುಂಬಸ್ಥರ ಸಹಾಯದಿಂದ ಪತ್ನಿಯನ್ನ ಹುಡುಕಿಸುತ್ತಿದ್ದಾರೆ. ದೂರು ದಾಖಲಿಸಿದ್ರೆ ಸಮಾಜದಲ್ಲಿ ಅವಮಾನ ಆಗುತ್ತೆ ಎಂದು ಪೊಲೀಸರ ಸಹಾಯ ಸಹ ಕೇಳಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
wife-escape
ಮಹಿಳೆಗೆ ಇಬ್ಬರು ಮಕ್ಕಳು ಮತ್ತು ಪತಿಯನ್ನ ತೊರೆದು ಶುಕ್ರವಾರವೇ ಮನೆಯಿಂದ ನಾಪತ್ತೆಯಾಗಿದ್ದಳು. ಮಹಿಳೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಿದ್ದಳು. ಎಫ್‍ಬಿ ಯಲ್ಲಿ ಪರಿಚಯನಾಗಿದ್ದ ಗೆಳೆಯನ ಜೊತೆ ಮಹಿಳೆ ಹೋಗಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮಹಿಳೆ ಮನೆಯಿಂದ ದಿಢೀರ್ ಅಂತ ಕಾಣೆಯಾಗಿದ್ದಳು. ಮೊದಲಿಗೆ ಸಂಬಂಧಿಕರ ಮನೆ ಅಥವಾ ಊರಿಗೆ ತೆರಳಿರಬಹುದು ಎಂದು ಕುಟುಂಬಸ್ಥರು ಅಂದಾಜಿಸಿದ್ದರು. ಆದ್ರೆ ಎಲ್ಲ ಕಡೆ ವಿಚಾರಿಸಿದ್ರೂ ಮಹಿಳೆ ಪತ್ತೆಯಾಗದಿದ್ದಾಗ ಫೇಸ್‍ಬುಕ್ ಗೆಳೆಯನ ಜೊತೆ ಪಲಾಯನ ಮಾಡಿರುವ ಖಚಿತ ಸುಳಿವು ಸಿಕ್ಕಿದೆ. ಇನ್ನು ಸ್ಥಳೀಯ ಠಾಣೆಯ ಪೊಲೀಸರು ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದ್ರೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •