ಹೌದು ಸ್ನೇಹಿತರೆ ಕಳೆದ ನವೆಂಬರ್ 27 ನೇ ತಾರೀಕು ಸಹೋದರಿಯರಿಬ್ಬರು ಮಹಾರಾಷ್ಟ್ರದ ಕೊಲ್ಲಾಪುರದ ಇಬ್ಬರು ಸಹೋದರರನ್ನು ಮದುವೆ ಮಾಡಿಕೊಂಡಿದ್ದರು. ಮತ್ತು ಮೊದಲನೇ ರಾತ್ರಿ ಪತಿ ಪತ್ನಿ ದೈಹಿಕ ಚಟುವಟಿಕೆ ನಡೆಸಿದ್ದಾರೆ. ಆ ವೇಳೆ ಬಿಳಿಯ ಬಟ್ಟೆಯನ್ನು ಹೊದಿಸಿದ ಬೆಡ್ಶೀಟ್ ಮೇಲೆ ಅಕ್ಕನ ಮತ್ತು ತಂಗಿಯ ಕನ್ಯತ್ವ ಪರೀಕ್ಷೆ ಕೂಡ ನಡೆದಿದೆ. ಹೌದು ತಂಗಿಗೆ ಮೊದಲ ರಾತ್ರಿ ದೈಹಿಕ ಕ್ರಿಯೆ ವೇಳೆ ರ  *ಕ್ತ ಕಂಡಿದ್ದು, ಕನ್ಯಾಪೂರೆ ಹರಿದಿದ್ದು ತಿಳಿದಿದೆ. ಆದರೆ ಅಕ್ಕನಿಗೆ ರ  *ಕ್ತ ಕಂಡಿಲ್ಲ, ಕನ್ಯಾಪೊರೆ ಮೊದಲೇ ಹರಿದಿರುವ ವಿಚಾರ ಅಕ್ಕನ ಗಂಡನಿಗೆ ಆ ವೇಳೆ ಗೊತ್ತಾಗಿದೆ.   

ಹೌದು ಸ್ನೇಹಿತರೆ ಕನ್ಯಾಪೊರೆ ಮೊದಲ ರಾತ್ರಿಯೇ ಹರಿಯ ಬೇಕೆಂದೇನಿಲ್ಲ, ಬದಲಿಗೆ ಆಟದಲ್ಲಿ ತೊಡಗಿದರೆ ಅಥವಾ ಇನ್ಯಾವುದೋ ಒಂದು ಚಟುವಟಿಕೆಯಲ್ಲಿಯ ತೊಡಗಿರುವುದರಿಂದಲೂ ಕನ್ಯಾಪೊರೆ ಹರಿಯುವ ಸಾಧ್ಯತೆ ಇರುತ್ತದೆ. ಆದರೆ ಈ ಮಹಾಶಯನಿಗೆ ಅದು ಗೊತ್ತಿಲ್ಲ ಅನ್ಸುತ್ತೆ. ಈ ವಿಚಾರ ತಿಳಿದ ಈಕೆಯ ಪತಿ ಈಕೆ ನಡತೆಗೆಟ್ಟವಳು, ಕೆಟ್ಟವಳು ಎಂದು ದೂಷಿಸಿ ಚೆನ್ನಾಗಿ ಹೊಡೆದು, ಅಕ್ಕನ ಜೊತೆ ತಂಗಿಯನ್ನು ಸಹ ಸೇರಿಸಿ ಮನೆಯಿಂದ ಹೊರಹಾಕಿದ್ದಾರಂತೆ. ಹಾಗೆ ಹೆಣ್ಣುಮಕ್ಕಳ ತವರು ಮನೆಯವರಿಗೆ 10ಲಕ್ಷ ರೂಪಾಯಿ ಹಣವನ್ನು ಕೊಡಿ ಎಂದು ಈ ಪತಿ ಮಹಾಶಯರು ಬೇಡಿಕೆಯನ್ನ ಸಲ್ಲಿಸಿದ್ದಾರೆ ತಿಳಿದುಬಂದಿದೆ.   

ತದನಂತರ ಈ ಕುರಿತಾಗಿ ಹೆಣ್ಣು ಮಕ್ಕಳ ಪೋಷಕರು ಪಂಚಾಯಿತಿ ಹಾಕಿದ್ದಲ್ಲಿ, ಪಂಚಾಯತಿಯವರು ತವರು ಮನೆಯವರ ಕಡೆಯಿಂದ 45000 ಹಣವನ್ನು ಕೊಡಿಸಿ ಇವರಿಬ್ಬರಿಗೂ ವಿಚ್ಚೇದನ ಮಾಡಿಸಿದ್ದಾರೆ ಎನ್ನಲಾಗಿದೆ.  ಈಗ ದಾರಿ ತೋಚದೆ ಯುವತಿಯರ ಪೋಷಕರು ತಮ್ಮ ಮಕ್ಕಳ ಪತಿ ಹಾಗೂ ಇವರ ಕುಟುಂಬದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿ ಕೇಳಿಬಂದಿದೆ….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •