ಅನೈತಿಕ ಸಂಬಂಧ ಒಂದು ಕುಟುಂಬದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ, ಇದರಲ್ಲಿ ಒಬ್ಬರ ಸ್ವಾರ್ಥ, ವಂಚನೆಯಿಂದಾಗಿ ಮತ್ತೊಬ್ಬರ ಜೀವನದ ಖುಷಿಯೇ ಇಲ್ಲವಾಗುತ್ತದೆ. ಮದುವೆಯಾಗಿ, ಮಕ್ಕಳಾಗಿ ಸಂಸಾರ ಸಾಗಿಸುತ್ತಿರುವಾಗ ಅನೈತಿಕ ಸಂಬಂಧ ಬೆಳೆದರೆ ಅದರಿಂದ ಆ ಮಕ್ಕಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀಳುವುದು.

ಅನೈತಿಕ ಸಂಬಂಧ ಬೆಳೆಯಲು ಅನೇಕ ಕಾರಣಗಳಿರಬಹುದು. ದೈಹಿಕ ಆಕರ್ಷಣೆ, ತನ್ನ ಸಂಗಾತಿಯಿಂದ ಲೈಂಗಿಕ ತೃಪ್ತಿ ಸಿಗದೇ ಹೋದಾಗ ಅಥವಾ ತಾನು ಸಂಬಂಧ ಬೆಳೆಸುವ ವ್ಯಕ್ತಿಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು, ಹಣ ಹೀಗೆ ಅನೇಕ ಕಾರಣಗಳು ಅನೈತಿಕ ಸಂಬಂಧದ ಹಿಂದೆ ಇರುತ್ತದೆ. ಆದರೆ ಅನೈತಿಕ ಸಂಬಂಧಕ್ಕೂ ವಯಸ್ಸಿಗೂ ಸಂಬಂಧವಿದೆ ಎಂದು ನೋಡುವುದಾದರೆ ಇದೆ ಎನ್ನುತ್ತಿದೆ ಸಮೀಕ್ಷೆಗಳು.

ಅನೈತಿಕ ಸಂಬಂಧ ಎನ್ನುವುದು ಯಾವ ವಯಸ್ಸಿನಲ್ಲಿ ಬೇಕಾದರೂ ಉಂಟಾಗಬಹುದು, ಆದರೆ ಹೆಚ್ಚಿನವರು ಅನೈತಿಕ ಸಂಬಂಧ ಬೆಳೆಸುವುದು ಯಾವ ವಯಸ್ಸಿನವರು ಎಂಬುವುದನ್ನು ಸಮೀಕ್ಷೆಗಳು ಹೇಳಿವೆ ನೋಡಿ:

ಅಧ್ಯಯನ

ಇತ್ತೀಚೆಗೆ ಆಶ್ಲೇ ಮಾಡಿಸನ್ ಎಂಬ ವೆಬ್‌ಸೈಟ್‌ (ಇದು ಮದುವೆಯಾದವರಿಗೆ ಇರುವ ಡೇಟಿಂಗ್ ವೆಬ್‌ಸೈಟ್‌) ಒಂದು ಸಮೀಕ್ಷೆ ನಡೆಸಿತು. ಇದರಲ್ಲಿ ಮದುವೆಯ ಬಳಿಕ ಯಾವ ವಯಸ್ಸಿನಲ್ಲಿ ಅನೈತಿಕ ಸಂಬಂಧ ಬೆಳೆಸುತ್ತಾರೆ ಎಂಬುವುದನ್ನು ಜನರ ಬಳಿ ಕೇಳಲಾಯಿತು. ಆಗ ಪುರುಷರ ವಯಸ್ಸಿನಲ್ಲಿ ಹಾಗೂ ಮಹಿಳೆಯರ ವಯಸ್ಸಿನಲ್ಲಿ ವ್ಯತ್ಯಾಸ ಇರುವುದು ತಿಳಿದು ಬಂತು.

ಪುರುಷ VSಮಹಿಳೆ

ಈ ವೆಬ್‌ಸೈಟ್‌ ಪ್ರಕಾರ ಪುರುಷರ ಈ ವೆಬ್‌ಸೈಟ್‌ 36ರ ನಂತರ ವಿಸಿಟ್‌ ಕೊಡುತ್ತಾರೆ, ಮಹಿಳೆಯರಲ್ಲಿ 33 ಹರೆಯದವರು ಹೆಚ್ಚಾಗಿ ಈ ವೆಬ್‌ಸೈಟ್‌ಗೆ ವಿಸಿಟ್‌ ಕೊಡುತ್ತರೆ ಎಂದು ಹೇಳಿದೆ.

which-age-girls

ಯಾಕೆ ಈ ಪ್ರಾಯದವರು ಹೆಚ್ಚಾಗಿ ಅನೈತಿಕ ಸಂಬಂಧದಲ್ಲಿ ಬೀಳುತ್ತಾರೆ

ಈ ವೆಬ್‌ಸೈಟ್‌ಗೆ ಭೇಟಿ ನೀಡುವವರು ಎಲ್ಲರೂ ತಮ್ಮ ಸಂಬಂಧದಲ್ಲಿ ಸಂತೋಷ ಇಲ್ಲದ ಕಾರಣ ಈ ವೆಬ್‌ಸೈಟ್‌ಗೆ ಭೇಟಿ ಕೊಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರು ತಮ್ಮ ಬೋರ್‌ ಕಳೆಯಲು ಕೂಡ ಇದಕ್ಕೆ ಲಾಗಿನ್ ಆಗುತ್ತಾರೆ. ಕೆಲವರಿಗೆ ಒಮ್ಮೆ ಹನಿಮೂನ್ ಪಿರೀಡ್ ಮುಗಿದ ಬಳಿಕ, ವಾಸ್ತವ ಪರಿಸ್ಥಿತಿ ಅಷ್ಟು ಇಷ್ಟವಾಗುವುದಿಲ್ಲ, ಸದಾ ಕಲ್ಪನೆ ಲೋಕದಲ್ಲಿಯೇ ಇರುತ್ತಾರೆ ಅಂಥವರು ಅನೈತಿಕ ಸಂಬಂಧ ಬೆಳೆಸಲು ಇಷ್ಟಪಡುತ್ತಾರೆ.

ಇನ್ನು ಮೋಸ ಮಾಡುವ ಮತ್ತೊಂದು ವಯಸ್ಸೆಂದರೆ

ಈ ಸಮೀಕ್ಷೆ ಪ್ರಕಾರ ಜನರು ತಮ್ಮ ಪ್ರೇಮಿ ಅಥವಾ ಸಂಗಾತಿಗೆ ಮೋಸ ಮಾಡುವ ಮತ್ತೊಂದು ವಯಸ್ಸುಎಂದರೆ 18-29. ಈ ವಯಸ್ಸಿನಲ್ಲಿ ಸಂಬಂಧದ ಬಗ್ಗೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಸಂಬಂಧದಲ್ಲಿ ನಿರಾಸೆ ಉಂಟಾದಾಗ ಬೇರೆ ಸಂಬಂಧ ಬೆಳೆಸುತ್ತಾರೆ.

ಕೊನೆಯದಾಗಿ

ಅನೈತಿಕ ಸಂಬಂಧದಲ್ಲಿ ಬೀಳುವಾಗ ಆ ಸಮಯ ವಾಸ್ತವ, ತನ್ನ ಕುಟುಂಬ ಎಲ್ಲವನ್ನೂ ಮರೆಯುತ್ತಾರೆ. ಈ ಸಂಬಂಧದಲ್ಲಿ ಖುಷಿಯಾಗಿರಬಹುದು ಅಥವಾ ಸಾಕಷ್ಟು ಖುಷಿ ಸಿಗಬಹುದು ಎಂಬ ಭ್ರಮೆಯಲ್ಲಿ ಹೋಗುತ್ತಾರೆ. ಆದರೆ ಅನೈತಿಕ ಸಂಬಂಧ ಯಾವತ್ತಿಗೂ, ಯಾರಿಗೂ ನೆಮ್ಮದಿ ಕೊಡುವುದಿಲ್ಲ. ತಾನು ತಪ್ಪು ಮಾಡುತ್ತಿದ್ದೇನೆ ಎಂಬ ಅರಿವು ಇರುವುದರಿಂದ ಸಂಗಾತಿಗೆ ತಿಳಿದರೆ ಎಂಬ ಭಯ ಇದ್ದೇ ಇರುತ್ತದೆ.

ಅನೈತಿಕ ಸಂಬಂಧ ತಿಳಿದ ಬಳಿಕ ಮನೆಯಲ್ಲಿ ಜಗಳ ರಂಪಾಟ, ಇನ್ನು ಸಂಗಾತಿಯನ್ನು ಬಿಟ್ಟು ಆ ವ್ಯಕ್ತಿ ಜೊತೆ ಬಾಳಲು ಹೋದರೆ ಅಲ್ಲಿಯೂ ಮುಂದೆ ಮಾನಸಿಕ ನೆಮ್ಮದಿ ಇಲ್ಲವಾಗುವುದು.

ಮದುವೆ ಬಳಿಕ ಬೇರೆ ವ್ಯಕ್ತಿಯಲ್ಲಿ ಆಕರ್ಷಣೆ ಉಂಟಾದರೆ ಅದನ್ನು ಮೊಳಕೆಯಲ್ಲಿಯೇ ಚಿವುಟಿ ಬಿಸಾಡಬೇಕು. ಆಕರ್ಷಣೆಯ ಹಿಂದೆ ಹೋದರೆ ಬೆಳಕು ಕಮಡು ಹೋಗುವ ಪತಂಗದಂತೆ ಜೀವನ ಕಳೆದುಕೊಳ್ಳಬೇಕಾಗುವುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •