ಮತ್ತೊಬ್ಬರ ಪತ್ನಿಯ ಜೊತೆ ಸ್ನೇಹ ವಿರುವುದೇ ದೊಡ್ಡ ತಪ್ಪು.. ಆದರೆ ಇಲ್ಲೊಬ್ಬ ಭೂಪ ಕಂಡವರ ಹೆಂಡತಿಗೆ ಮುತ್ತ ನೀಡುವ ಫೋಟೋವನ್ನು ತನ್ನ ವಾಟ್ಸಪ್ ಸ್ಟೇಟಸ್ಸಿಗೆ ಹಾಕಿಕೊಂಡಿದ್ದು ದೊಡ್ಡ ಯಡವಟ್ಟು ಮಾಡಿಕೊಂಡಿದ್ದಷ್ಟೇ ಅಲ್ಲದೇ ದೊಡ್ಡ ಅನಾ ಹುತಕ್ಕೆಕಾರಣನಾಗಿಬಿಟ್ಟ.. ಹೌದು ತನ್ನ ಪತ್ನಿ ಮತ್ತೊಬ್ಬನಿಗೆ ಮುತ್ತು ನೀಡುತ್ತಿರುವ ಫೋಟೋ ನೋಡಿದ ಗಂಡನ ಜೀವ ಏನಾಗಿರಬೇಡ.ಮ್.. ಮುಂದೆ ಆಗಿದ್ದು ಮಾತ್ರ ಯಾರೂ ಊಹಿಸಿರಲಿಕ್ಕಿಲ್ಲ.. ಹೌದು ಇಂತಹದೊಂದು ಘಟನೆ ಮೈಸೂರು ಸಮೀಪದ ಗುಂಡ್ಲುಪೇಟೆಯಲ್ಲಿ ನಡೆದಿದೆ.. ಹೌದು ಪರಸ್ತ್ರೀ ಸೋದರಿಗೋ ಅಥವಾ ಮಾತೃವಿಗೋ ಸಮಾನ ಎನ್ನುವ ಪರಂಪರೆ ನಮ್ಮದು.. ಆದರೆ ಆಗಾಗ ಇಂತಹ ಘಟನೆಗಳು ನಿಜಕ್ಕೂ ತಲೆ ತಗ್ಗಿಸುವಂತೆ ಮಾಡಿಬಿಡುತ್ತದೆ..

ಗಂಡನಿಗೆ ಮೋಸ ಮಾಡಿ ಮತ್ತೊಬ್ಬನಿಗೆ ಸೆರಗು ಹಾಸುವ ಹೆಣ್ಣು ಹಾಗೂ ಮತ್ತೊಬ್ಬನ ಪತ್ನಿಯ ಜೊತೆ ಇಂತಹ ಕೆಲಸದಲ್ಲಿ ತೊಡಗುವ ಗಂಡಸು ನಿಜಕ್ಕೂ ಕಳಂಕವೇ ಸರಿ.. ಅದೇ ರೀತಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನ ಬೀಡು ಎಂಬುವ ಗ್ರಾಮದಲ್ಲಿ ಇಂತಹ ಘಟನೆಯೊಂದು ನಡೆದಿದ್ದು.. ಮತ್ತೊಬ್ಬನ ಹೆಂಡತಿಯ ಜೊತೆ ಮುತ್ತನೀಡುವ ಫೋಟೋ ತೆಗೆದುಕೊಂಡ ಭೂಪ ಅದನ್ನಿ ವಾಟ್ಸಪ್ ಸ್ಟೇಟಸ್ಸಿಗೆ ಹಾಕಿಕೊಂಡು ಯಾರೂ ಊಹಿಸಿರದ ಘಟನೆಗೆ ಕಾರಣನಾಗಿಬಿಟ್ಟಿದ್ದಾನೆ.. ಹೌದು ಆಕೆಯ ಹೆಸರು ಸೌಭಾಗ್ಯ.. ಹೆಸರು ಮಾತ್ರ ಸೌಭಾಗ್ಯವಷ್ಟೇ ಆಕೆಯ ಗಂಡನಿಗೆ ಆಕೆಯೊಬ್ಬಳು ದೌರ್ಭಾಗ್ಯವೇ ಸರಿ.. ಆಕೆಯ ಗಣ್ಡನ ಹೆಸರು ಶಿವಣ್ಣ..

ಶಿವಣ್ಣ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೌಭಾಗ್ಯ ಬಸವಶೆಟ್ಟಿ ಎಂಬುವವನ ಜೊತೆ ಸ್ನೇಹ ಮಾಡಿಕೊಂಡು ಆತನನ್ನು ಮನೆಗೆ ಕರೆಸಿಕೊಂಡು ಸರಸಸಲ್ಲಾಪದಲ್ಲಿ ತೊಡಗಿಕೊಳ್ಳುತ್ತಿದ್ದಳು. ಇದು ಬಹಳಷ್ಟು ದಿನಗಳಿಂದ ನಡೆದರೂ ಸಹ ಆಕೆಯ ಗಂಡ ಶಿವಣ್ಣನಿಗೆ ತಿಳಿಯಲೇ ಇಲ್ಲ.. ಆತನಿಗೆ ಮೋಸ ಮಾಡುತ್ತಲೇ ಇವರಿಬ್ಬರ ಆಟ ನಡೆದಿತ್ತು.. ಆದರೆ ಅದು ಮೊದಲೇ ಹಳ್ಳಿಯಾದ್ದರಿಂದ ಇಂತಹ ವಿಚಾರಗಳು ಅಕ್ಕಪಕ್ಕದವರಿಗೆ ತಿಳಿಯಲು ಬಹಳಷ್ಟು ದಿನಗಳು ಬೇಕಾಗಲಿಲ್ಲ.. ಅಲ್ಲಲ್ಲಿ ಗುಸುಗುಸು ಅಂತ ಸೌಭಾಗ್ಯಳ ವಿಚಾರ ಹಬ್ಬಿತ್ತು..

ಇನ್ನು ಬಸವಶೆಟ್ಟಿ ಶಿವಣ್ಣನ ಪತ್ನಿ ಸೌಭಾಗ್ಯಳಿಗೆ ಮುತ್ತನೀಡುವುದನ್ನು ಫೋಟೋ ತೆಗೆದುಕೊಂಡು ಅದನ್ನು ತನ್ನ ವಾಟ್ಸಪ್ ಸ್ಟೇಟಸ್ಸಿಗೂ ಹಾಕಿಕೊಂಡಿದ್ದ.. ಈ ಫೋಟೋ ನೋಡಿದ ಶಿವಣ್ಣ ನಿಜಕ್ಕೂ ಕುಸಿದು ಹೋದ.. ಪತ್ನಿಯನ್ನು ಅಪಾರವಾಗಿ ನಂಬಿದ್ದ ಶಿವಣ್ಣನಿಗೆ ಏನು ಮಾಡಬೇಕು ಅನ್ನೋದೆ ತಿಳಿಯಲಿಲ್ಲ.. ಇಬ್ಬರ ಮೇಲೆಯೂ ಕೆಂಡಾಮಂಡಲವಾಗಿದ್ದ.. ಅದೇ ಕೋಪದಲ್ಲಿ ಮನೆಗೆ ಬಂದರೆ ಅಲ್ಲಿ ತನ್ನ ಎದುರಿಗೇ ತನ್ನ ಪತ್ನಿ ಬಸವಶೆಟ್ಟಿ ಜೊತೆ ಸಲ್ಲಾಪದಲ್ಲಿ ತೊಡಗಿಕೊಂಡಿದ್ದು ನೇರವಾಗಿ ಸಿಕ್ಕಿಬಿದ್ದಳು.. ಇದರಿಂದ ಕೋಪಗೊಂಡ ಶಿವಣ್ಣ.. ಬಸವಶೆಟ್ಟಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ..

ಶಿವಣ್ಣ ಹೊಡೆದ ಏಟಿಗೆ ಬಸವಶೆಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಆತನನ್ನು ಮೈಸೂರಿನ ಆಸ್ಪತ್ರೆಗೆ ಕರೆತಂದಿದ್ದಾರೆ.. ಆದರೆ ಆತ ಮಾಡಿದ ಪಾಪವೋ ಏನೋ ಆತ ಉಳಿಯಲಿಲ್ಲ.. ಕೇವಲ 26 ವರ್ಷಕ್ಕೆ ಮತ್ತೊಬ್ಬಮ ಹೆಂಡತಿಯ ಸಹವಾಸ ಮಾಡಿ ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡ.. ಆದರೆ ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಆ ತಂದೆ ತಾಯಿಯ ಮನಸ್ಸು ಏನಾಗಿರಬೇಕು.. ಅದರಲ್ಲೂ ಇಂತಹ ಕೆಲಸ ಮಾಡಿದ ಎಂದು ತಿಳಿದ ಆ ತಂದೆ ತಾಯಿ ತಲೆ ಎತ್ತಿ ಓಡಾಡೋದಾದರೂ ಹೇಗೆ.. ಇತ್ತ ಶಿವಣ್ಣನನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.. ಒಟ್ಟಿನಲ್ಲಿ ಒಂದು ಹೆಣ್ಣು ಹಾಗೂ ಒಬ್ಬ ಗಂಡಿನ ಅನಾಚಾರದ ಆಸೆಗಳು ಎರಡು ಕುಟುಂಬದ ನೆಮ್ಮದಿಯನ್ನೇ ಕಿತ್ತು ಬಿಟ್ಟಿತು.. ನೆಮ್ಮದಿಯಷ್ಟೇ ಅಲ್ಲದೆ ಒಂದು ಜೀವವೂ ಹೋಗಿಬಿಟ್ಟಿತು.. ವಯಸ್ಸಿನ ಆಸೆಗಳಿಗೆ ನಮ್ಮ ಬುದ್ದಿ ಕಡಿವಾಣ ಹಾಕದಿದ್ದರೆ ಕೊನೆಗೆ ನಡೆಯುವುದು ಇಂತಹ ಘಟನೆಗಳೇ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •